Akshay Kumar: ಮೊದಲ ಬಾರಿ ಮತದಾನ ಮಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್!
ಮುಂಬೈ, ಮೇ. 20: 2024ರ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಸ್ಟಾರ್ ನಟ, ನಟಿಯರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನ ಆರಂಭವಾಗುತ್ತಿದ್ದಂತೆ ನಟ ಅಕ್ಷಯ್ ಕುಮಾರ್ ಮತಗಟ್ಟೆಗೆ ತೆರಳಿ ಮೊದಲ ಬಾರಿ ವೋಟ್ ಮಾಡಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ, ನಟ ಅಕ್ಷಯ್ ಕುಮಾರ್ ತಮಗೆ ಗೊತ್ತುಪಡಿಸಿದ ಮತಗಟ್ಟೆಯಲ್ಲಿ ತನ್ನ ಮತವನ್ನು ಚಲಾಯಿಸಿದ್ದು, ಶಾಯಿ ಬಣ್ಣದ ಬೆರಳನ್ನು ಹೆಮ್ಮೆಯಿಂದ ತೋರಿಸಿದ್ದಾರೆ. ಕಳೆದ ವರ್ಷವಷ್ಟೇ ಭಾರತೀಯ ಪ್ರಜೆಯಾಗಿರುವ ನಟ ಅಕ್ಷಯ್ ಕುಮಾರ್ ಸುದ್ದಿಗಾರರೊಂದಿಗೆ ಸಂತದ ಹಂಚಿಕೊಂಡಿದ್ದಾರೆ.

ಭಾರತದ ಅಭಿವೃದ್ಧಿಗಾಗಿ ನನ್ನ ಮತ
ತಮ್ಮ ಹಕ್ಕು ಚಲಾಯಿಸಿ ಮಾತನಾಡಿರುವ ನಟ ಅಕ್ಷಯ್ ಕುಮಾರ್, "ನನ್ನ ಭಾರತವು ಅಭಿವೃದ್ಧಿ ಹೊಂದಬೇಕು ಮತ್ತು ಸದೃಢವಾಗಿರಬೇಕು ಎಂದು ನಾನು ಬಯಸುತ್ತೇನೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಮತ ಹಾಕಿದ್ದೇನೆ. ಭಾರತವು ಯಾವುದು ಸರಿ ಎನಿಸುತ್ತದೋ ಅದಕ್ಕೆ ಮತ ಹಾಕಬೇಕು. ಮುಂಬೈನಲ್ಲಿ ಮತದಾರರ ಮತದಾನವು ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಭಾರತೀಯ ಪೌರತ್ವವನ್ನು ಪಡೆದ ನಂತರ ಮೊದಲ ಬಾರಿಗೆ ಮತ ಚಲಾಯಿಸುವ ಬಗ್ಗೆ ಮಾತನಾಡಿರುವ ಅವರು, "ಇದು ಅದ್ಭುತವಾಗಿದೆ! ನನಗೆ ತುಂಬಾ ಖುಷಿಯಾಗುತ್ತಿದೆ" ಎಂದು ಸಂಭ್ರಮಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಕಳೆದ ವರ್ಷ ಭಾರತೀಯ ಪೌರತ್ವ ಪಡೆದಿದ್ದಾರೆ.
#WATCH | Actor Akshay Kumar shows the indelible ink mark on his finger after casting his vote at a polling booth in Mumbai.
— ANI (@ANI) May 20, 2024
He says, "...I want my India to be developed and strong. I voted keeping that in mind. India should vote for what they deem is right...I think voter… pic.twitter.com/mN9C9dlvRD
ಕಳೆದ ಆಗಸ್ಟ್‌ನಲ್ಲಿ ಅಕ್ಷಯ್‌ಗೆ ಭಾರತೀಯ ಪೌರತ್ವ
ಆಗಸ್ಟ್ 2023 ರಲ್ಲಿ, ಅಕ್ಷಯ್ ಕುಮಾರ್ ಅವರು ತಮ್ಮ ಭಾರತೀಯ ಪೌರತ್ವದ ಸರ್ಕಾರಿ ದಾಖಲೆಗಳ ಚಿತ್ರವನ್ನು ಹಂಚಿಕೊಂಡಿದ್ದರು. ಕೊನೆಗೂ ಭಾರತೀಯ ಪೌರತ್ವವನ್ನು ಪಡೆದಿದ್ದೇನೆ ಎಂದು ಸಾಬೀತುಪಡಿಸಿದರು. "ಹೃದಯ ಮತ್ತು ಪೌರತ್ವ ಎರಡೂ ಭಾರತೀಯ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಜೈ ಹಿಂದ್" ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.
ಭಾರತೀಯ ಪೌರತ್ವ ಪಡೆದ ಬಗ್ಗೆ ಮಾತನಾಡಿದ್ದ ಅವರು, "9 ರಿಂದ 10 ವರ್ಷಗಳ ಕಾಲ ನಾನು ಅಲ್ಲಿಗೆ ಹೋಗಿಲ್ಲ. ಅದು ತುಂಬಾ ಒಳ್ಳೆಯ ಸ್ಥಳ ಮತ್ತು ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು ಇದ್ದಾರೆ. ನಾನು ನನ್ನ ಪೌರತ್ವವನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದೆ. ನಾನು ಪೌರತ್ವ ಪಡೆದಿದ್ದೇನೆ ಎಂದು ಆಗಸ್ಟ್ 15 ರಂದು ನನಗೆ ಪತ್ರ ಬಂದಿರುವುದು ಕೇವಲ ಕಾಕತಾಳೀಯ. ಆದರೆ ಇದು ಕೇವಲ ಪಾಸ್‌ಪೋರ್ಟ್ ಅಲ್ಲ, ಅದು ನಮ್ಮ ಮನಸ್ಸು, ಇದು ನಮ್ಮ ಹೃದಯ, ಇದು ನಮ್ಮ ಆತ್ಮ ಭಾರತೀಯರಾಗಿರಬೇಕು. ನಾನು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ ನನ್ನ ಆತ್ಮ ಮನಸ್ಸು ಮತ್ತು ಹೃದಯ ಭಾರತೀಯವಾಗಿಲ್ಲದಿದ್ದರೆ ಏನು ಪ್ರಯೋಜನ..?" ಎಂದಿದ್ದರು.
ಕೆನಡಾದ ಪೌರತ್ವದ ಬಗ್ಗೆ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ 1990 ರ ದಶಕದಲ್ಲಿ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರು, ಅವರ ಹನ್ನೆರಡು ಚಲನಚಿತ್ರಗಳು ಸತತವಾಗಿ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದರು. 2019 ರಲ್ಲಿ ನಟ ತನ್ನ ಕೆನಡಾದ ಪೌರತ್ವವನ್ನು ತ್ಯಜಿಸಿ, ಭಾರತದ ಪೌರತ್ವಕ್ಕಾಗೊ ಅರ್ಜಿ ಸಲ್ಲಿಸಿದ್ದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications