Leelavathi: ಡಾ.ರಾಜ್‌ಕುಮಾರ್ ಜೊತೆಗೆ ಲೀಲಾವತಿ ಅಭಿನಯಿಸಿದ ಸಿನಿಮಾಗಳು
ನಟಿ ಲೀಲಾವತಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿದ್ದು, ನೂರಾರು ಸಿನಿಮಾಗಳನ್ನ ಹಲವು ಭಾಷೆಯಲ್ಲಿ ಮಾಡಿದ್ದಾರೆ. ಆದರೆ ವರನಟ ಡಾ.ರಾಜ್ ಹಾಗೂ ಲೀಲಾವತಿ ಜೋಡಿ ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ಮೋಡಿಯ ಮಾಡಿತ್ತು. ಹಾಗಾದರೆ ವರನಟ ಡಾ. ರಾಜ್‌ಕುಮಾರ್ & ನಟಿ ಲೀಲಾವತಿ ಅಭಿನಯಿಸಿದ್ದ ಸಿನಿಮಾಗಳು ಯಾವುವು ಗೊತ್ತಾ? ಅದರ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
85 ವರ್ಷ ವಯಸ್ಸಿನ, ಕನ್ನಡದ ಹಿರಿಯ ನಟಿಯಾಗಿದ್ದ ಲೀಲಾವತಿ ಇಂದು ಮೃತಪಟ್ಟಿದ್ದಾರೆ. ಕಳೆದ ಕೆಲವು ತಿಂಗಳಿಂದ ನಟಿ ಲೀಲಾವತಿ ಅವರು ತೀವ್ರವಾಗಿ ಅನಾರೋಗ್ಯದಿಂದ ಬಳಲಿದ್ದರು ಇದೇ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ನಟ ಶಿವರಾಜ್‌ಕುಮಾರ್, ಶ್ರೀನಾಥ್ ಸೇರಿದಂತೆ ಕನ್ನಡ ಸಿನಿಮಾ ರಂಗದ ಹಿರಿಯ ನಟರು ಹಾಗೂ ನಟಿಯರು ಲೀಲಾವತಿ ಅವರನ್ನ ಭೇಟಿ ಮಾಡಿದ್ದರು. ಆರೋಗ್ಯ ವಿಚಾರಿಸಿ, ಬೇಗ ಹುಷಾರಾಗಲಿ ಅಂತಾ ಪ್ರಾರ್ಥನೆ ಮಾಡಿದ್ದರು. ಕೋಟ್ಯಂತರ ಅಭಿಮಾನಿಗಳು ಕೂಡ ಲೀಲಾವತಿ ಅವರ ಆರೋಗ್ಯವು ಸುಧಾರಿಸಲಿ ಅಂತಾ ಪ್ರಾರ್ಥನೆ ಮಾಡಿದ್ದರು. ಆದರೆ ಅವರೆಲ್ಲರ ಪ್ರಾರ್ಥನೆ ಫಲಿಸಲೇ ಇಲ್ಲ.

ವರನಟ ಡಾ.ರಾಜ್ ಜೊತೆ ಸಿನಿಮಾಗಳು
ನಟಿ ಲೀಲಾವತಿ ಅವರು ಸಾಕಷ್ಟು ಕಷ್ಟಪಟ್ಟು ಸಿನಿಮಾ ಇಂಡಸ್ಟ್ರೀ ಪ್ರವೇಶ ಮಾಡಿದರು. ಅವರಿಗೆ ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ & ಲೀಲಾವತಿರ ಜೋಡಿ ಕರ್ನಾಟಕದಲ್ಲಿ ಜನಪ್ರಿಯ ಜೋಡಿ ಆಗಿತ್ತು. ಹೀಗೆ ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹಲವು ಚಿತ್ರಗಳಲ್ಲೂ ನಾಯಾಕಿಯಾದರು. ಕೆಲ ಸಿನಿಮಾದಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆದ ನಾಯಕಿ ಅಂತಲೂ ಅವರು ಗುರುತಿಸಿಕೊಂಡಿದ್ದರು. ಹಾಗಾದರೆ ಡಾ.ರಾಜ್‌ಕುಮಾರ್ ಅವರ ಜೊತೆ ನಟಿ ಲೀಲಾವತಿ ಅವರು ಅಭಿನಯಿಸಿದ್ದ ಸಿನಿಮಾಗಳು ಯಾವುವು? ಸಂಪೂರ್ಣ ಪಟ್ಟಿ ಇಲ್ಲಿದೆ ಮುಂದೆ ಓದಿ.
ಡಾ.ರಾಜ್‌ಕುಮಾರ್ & ಲೀಲಾವತಿ ಸಿನಿಮಾಗಳು
1963ರಲ್ಲಿ ವೀರ ಕೇಸರಿ
1974ರಲ್ಲಿ ಭಕ್ತ ಕುಂಬಾರ
1976ರಲ್ಲಿ ನಾ ನಿನ್ನ ಮರೆಯಲಾರೆ
1985ರಲ್ಲಿ ಜ್ವಾಲಾಮುಖಿ
1959ರಲ್ಲಿ ಅಬ್ಬಾ ಆ ಹುಡುಗಿ
1960ರಲ್ಲಿ ರಣಧೀರ ಕಂಠೀರವ
1962ರಲ್ಲಿ ಕರುಣೆಯೇ ಕುಟುಂಬದ ಕಣ್ಣು
1963ರಲ್ಲಿ ಕಲಿತರು ಹೆಣ್ಣೆ
1963ರಲ್ಲಿ ನಂದಾ ದೀಪಾ
1963ರಲ್ಲಿ ಸಂತ ತುಕರಾಂ
1963ರಲ್ಲಿ ವಾಲ್ಮಿಕಿ
1965ರಲ್ಲಿ ಮಹಾಸತಿ ಅನುಸೂಯ
1972ರಲ್ಲಿ ಸಿಪಾಯಿ ರಾಮು
1984ರಲ್ಲಿ ಶ್ರಾವಣ ಬಂತು
1973ರಲ್ಲಿ ಮೂರುವರೆ ವಜ್ರಗಳು
1959ರಲ್ಲಿ ಜಗಜ್ಯೋತಿ ಬಸವೇಶ್ವರ
1960ರಲ್ಲಿ ರಾಣಿ ಹೊನ್ನಮ್ಮ
1961ರಲ್ಲಿ ಕೈವಾರ ಮಹಾತ್ಮೆ
1961ರಲ್ಲಿ ಕಿತ್ತೂರು ಚೆನ್ನಮ್ಮ
1962ರಲ್ಲಿ ಗಾಳಿ ಗೋಪುರ
1963ರಲ್ಲಿ ಮನ ಮೆಚ್ಚಿದ ಮಡದಿ
1965ರಲ್ಲಿ ಚಂದ್ರಹಾಸ

1965ರಲ್ಲಿ ಮದುವೆ ಮಾಡಿ ನೋಡು
1966ರಲ್ಲಿ ಮೋಹಿನಿ ಭಸ್ಮಾಸುರ
1960ರಲ್ಲಿ ದಶಾವತಾರ
1962ರಲ್ಲಿ ಭೂಧಾನ
1959ರಲ್ಲಿ ಧರ್ಮ ವಿಜಯ
1961ರಲ್ಲಿ ಕಣ್ತೇರೆದು ನೋಡು
1962ರಲ್ಲಿ ವಿಧಿ ವಿಲಾಸ
1963ರಲ್ಲಿ ಜೀವನ ತರಂಗ
1963ರಲ್ಲಿ ಕನ್ಯಾ ರತ್ನ
1963ರಲ್ಲಿ ಕುಲವಧು
1963ರಲ್ಲಿ ಮಲ್ಲಿ ಮದುವೆ
1964ರಲ್ಲಿ ಶಿವರಾತ್ರಿ ಮಹಾತ್ಮೆ
1964ರಲ್ಲಿ ತುಂಬಿದ ಕೊಡ
1965ರಲ್ಲಿ ಇದೇ ಮಹಾಸುದಿನ
1965ರಲ್ಲಿ ನಾಗಾಪೂಜಾ
1965ರಲ್ಲಿ ವಾತ್ಸಲ್ಯ
1966ರಲ್ಲಿ ಪ್ರೇಮಮಯಿ
1966ರಲ್ಲಿ ತೂಗುದೀಪ
1967ರಲ್ಲಿ ಗಂಗೇ ಗೌರಿ
1968ರಲ್ಲಿ ಭಾಗ್ಯ ದೇವತೆ
1969ರಲ್ಲಿ ಉಯ್ಯಾಲೆ
1973ರಲ್ಲಿ ದೂರದ ಬೆಟ್ಟ
1980ರಲ್ಲಿ ವಸಂತ ಗೀತಾ
1983ರಲ್ಲಿ ಎರಡು ನಕ್ಷತ್ರಗಳು
ಹೀಗೆ ಹತ್ತಾರು ಹಿಟ್ ಸಿನಿಮಾಗಳನ್ನ ಡಾ.ರಾಜ್‌ಕುಮಾರ್ ಮತ್ತು ಲೀಲಾವತಿ ಜೋಡಿಯು ಕನ್ನಡ ಸಿನಿಮಾ ರಂಗಕ್ಕೆ ನೀಡಿತ್ತು. ಲೀಲಾವತಿ ಅವರು ಕನ್ನಡ ಭಾಷೆ ಸೇರಿ ಮಲಯಾಳಂ, ತಮಿಳು & ತೆಲುಗು ಭಾಷೆಯಲ್ಲೂ ಮಿಂಚಿದರು. ಒಟ್ಟು 600 ಚಿತ್ರದಲ್ಲಿ ನಟಿಸಿದ್ದ ಲೀಲಾವತಿ ಅವರ ಅಗಲಿಕೆಗೆ ಗಣ್ಯರು ಹಾಗೂ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.












Click it and Unblock the Notifications