Lawyer Jagadish: ಮದುವೆ ಆಗದೆ IVF ಮೂಲಕ ಗರ್ಭಿಣಿಯಾದ ಭಾವನಾ: ಆದರೆ ಮನಸ್ಸಿಗೆ ಸ್ವಲ್ಪ ನೋವಾಯ್ತು ಎಂದ ಲಾಯರ್ ಜಗದೀಶ್
ಮದುವೆ ಆಗದೇ ಮಕ್ಕಳನ್ನು ಪಡೆಯುವ ನಿರ್ಧಾರ ಅಷ್ಟು ಸುಲಭದ್ದಲ್ಲ. ಮದುವೆ ಆಗದೇ ನಟಿ ಭಾವನಾ ರಾಮಣ್ಣ ಗರ್ಭಿಣಿಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. IVF ಮೂಲಕ ಭಾವನಾ ಅವರು ಮಕ್ಕಳನ್ನು ಪಡೆಯುವ ಗಟ್ಟಿ ನಿರ್ಧಾರಕ್ಕೆ ನಟಿ ಭಾವನಾ ಅವರು ಮುಂದಾಗಿದ್ದು, ಸದ್ಯ ಏಳು ತಿಂಗಳ ಗರ್ಭಿಣಿಯಾಗಿರುವ ಭಾವನಾ ಅವರ ಈ ನಿರ್ಧಾರದ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಮದುವೆ ಆಗದೇ IVF ಮೂಲಕ ಮಕ್ಕಳನ್ನು ಪಡೆಯುತ್ತಿರುವ ಕುರಿತು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ವಿರುದ್ಧ ಹೇಳಿಕೆಯನ್ನ ನೀಡಿದ್ದಾರೆ. ಮದುವೆ ಆಗದೇ ಭಾವನಾ ರಾಮಣ್ಣ ಗರ್ಭಿಣಿಯಾಗಿರುವ ಬಗ್ಗೆ ಚರ್ಚೆ ಆಗುತ್ತಿರೋದೇನೋ ಸತ್ಯ. ಆದರೆ, ಪರೋಕ್ಷವಾಗಿ ಐವಿಎಫ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರಾ? ಆಸ್ಪತ್ರೆಗಳು ಐವಿಎಫ್ ಪ್ರಚಾರದಲ್ಲಿ ತೊಡಗಿದ್ದಾರಾ? ಎಂದು ಲಾಯರ್ ಜಗದೀಶ್ ಅನುಮಾನದ ಜೊತೆಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಲಾಯರ್ ಜಗದೀಶ್ ಅವರು ಮಾತನಾಡಿರುವ ವಿಡಿಯೋ ಇದೀಘ ವೈರಲ್ ಆಗುತ್ತಿದೆ.

ಐವಿಎಫ್ ಮೂಲಕ ಮಕ್ಕಳನ್ನ ಭಾವನಾ ಪಡೆಯುತ್ತಿದ್ದಾರೆ. ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಪ್ರಚಾರ ಮಾಡುತ್ತಿದೆಯೇ? ಎಂದು ಪ್ರಶ್ನೆಯನ್ನ ಲಾಯರ್ ಜಗದೀಶ್ ಅವರು ಮಾಡಿದ್ದಾರೆ. ಐವಿಎಫ್ ಬಳಸಿ, ಮದುವೆಯಾಗದೇ ತಾಯಿಯಾಗುತ್ತಿದ್ದಾರೆ. ಭಾವನಾ ಅವರಿಗೆ ಅಭಿನಂದನೆಗಳು. ನಿಮ್ಮ ಭಾವನೆಗಳಿಗೆ ಕರ್ನಾಟಕದ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಅದು ನಿಮ್ಮ ಖಾಸಗಿ ಬದುಕು. ಅದರ ಬಗ್ಗೆ ಯಾರೂ ಕಮೆಂಟ್ ಮಾಡುವಂತಿಲ್ಲ. ಅದು ನಿಮ್ಮ ಇಚ್ಚೆ. ಆದರೆ, ಮಾಧ್ಯಮಗಳ ಮುಂದೆ ಸೋಶಿಯಲ್ ಮೀಡಿಯಾದಲ್ಲಿ ನೀವು ಐವಿಎಫ್‌ನಿಂದ ತಾಯಿಯಾಗುತ್ತಿರುವ ವಿಚಾರ ಚರ್ಚೆಯಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಮಾಧ್ಯಮದ ಮುಂದೆ ಬಂದು ಐವಿಎಫ್ ವಿಚಾರವಾಗಿ ಮಾತಾಡಿದಾಗ ಅದರ ಆಗು ಹೋಗುಗಳ ಬಗ್ಗೆ ಮಾತಾಡಬೇಕಾದ ಪರಿಸ್ಥಿತಿ ಇರುತ್ತೆ. ಭಾವನಾ ಅವರು ತಾಯಿ ಆಗುತ್ತಿರೋದು ಓಕೆ. ಆದರೆ, ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಪ್ರಚಾರ ಮಾಡುತ್ತಿದ್ದಾರಾ? ಎಂದು ನನಗೆ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಹಾಗೇ ಇಲ್ಲಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯಿಲ್ಲದೆ ಭಾವನಾ ಅವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದಾರಾ? ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದಾರೆ.
ಗಂಡೇ ಬೇಡ. ಮದುವೆನೇ ಬೇಡ. ನಾನು ತಾಯಿ ಆಗಿದ್ದೀನಿ ಅಂತ ಮಾಧ್ಯಮಗಳ ಮುಂದೆ ಪ್ರಮೋಷನ್ ಮಾಡಿದಾಗ ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಗಳು ಭಾವನಾ ಅವರನ್ನು ಪ್ರಮೋಷನ್‌ಗೆ ಬಳಸುತ್ತಿದ್ದಾರಾ? ಅಂತ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ. ಗಂಡುನೂ ಬೇಕಾಗಿಲ್ಲ. ಮದುವೆನೂಬೇಕಾಗಿಲ್ಲ ಅಂತ ಕೆಲವರು ಹೇಳಿರೋದು. ಮಕ್ಕಳಾಗದವರು ಐವಿಎಫ್ ಬಳಸುವುದು ಓಕೆ. ಅಥವಾ ಇಚ್ಛೆ ಪಟ್ಟು ಭಾವನಾ ತರ ಮದುವೆನೇ ಬೇಡ ಅಂತ ಬಳಸುವವರೂ ಓಕೆ. ಆದರೆ, ಈ ಪ್ರಮೋಷನ್ಸ್ ಯಾಕೆ? ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಯವರು ಭಾವನಾ ಅವರನ್ನು ಬಳಸುತ್ತಿದ್ದಾರಾ ಅಂತ ನನ್ನ ಮನಸ್ಸಿಗೂ ಸ್ವಲ್ಪ ನೋವಾಯ್ತು ಎಂದು ಲಾಯರ್ ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
-
ತಾಯಿ ಮಂಗನ ಮೌನ ರೋದನೆ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕರುಣಾಜನಕ ದೃಶ್ಯ..Video Viral -
CinemaCon 2026: ಜಾಗತಿಕ ವೇದಿಕೆಯಲ್ಲಿ 'ರಾಮಾಯಣ' ಪ್ರಚಾರ ಶುರು; ಲಾಸ್ವೇಗಸ್ನಲ್ಲಿ ಬೀಡುಬಿಟ್ಟ ರಾಕಿಂಗ್ ಸ್ಟಾರ್ ಯಶ್ -
Monalisa: ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ದಂಪತಿಗೆ ಬಿಗ್ ರಿಲೀಫ್: ಬಂಧನಕ್ಕೆ ತಡೆ ನೀಡಿದ ಕೇರಳ ಹೈಕೋರ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications