ಹಸೆಮಣೆ ಏರಲಿರುವ ನಿರೂಪಕಿ ಅನುಶ್ರೀ ವಿದ್ಯಾಭ್ಯಾಸ ಏನು ಗೊತ್ತಾ?

Anchor Anushree: ಕನ್ನಡ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಚರ್ಚೆಗಳು ನಡೆಯುತ್ತಿದ್ದವು. ಈ ಪ್ರಶ್ನೆಗೆ ಸ್ವತಃ ಅವರೇ ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ ತಮ್ಮ ಮದುವೆ ಯಾವಾಗ ಎನ್ನುದನ್ನು ರಿವೀಲ್‌ ಮಾಡಿದ್ದರು. ಇನ್ನು ಅಷ್ಟಕ್ಕೂ ಅನುಶ್ರೀ ವಿದ್ಯಾಭ್ಯಾಸ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮಂಗಳೂರು ಮೂಲದ ಅನುಶ್ರೀ ಹಲವು ಸಿನಿಮಾನಗಳಲ್ಲಿ ನಟಿಸಿ ನಟಿಯಾಗಿ ಸಹ ಗುರುತಿಸಿಕೊಂಡವರಾಗಿದ್ದಾರೆ. ಇದೀಗ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಹಲವು ಶೋಗಳಲ್ಲಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ ತಮ್ಮ ಪಟಾಪಟ್‌ ಮಾತುಗಳಿಂದ ಮತ್ತಷ್ಟು ಜನಪ್ರಿಯತೆ ಪಡೆಯುತ್ತಿದ್ದಾರೆ. ಅಲ್ಲದೆ, ಎಲ್ಲರೂ ಕೇಳುತ್ತಿದ್ದ ಮದುವೆಯ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

Know About Anchor Anushree s Education details

ಅನುಶ್ರೀ ವಿದ್ಯಾಭ್ಯಾಸ ಏನು?: ಅನುಶ್ರೀ ಅವರು 25 ಜನವರಿ 1988ರಂದು ಜನಿಸಿದರು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ತಂದೆ ಹೆಸರು ಕೆಲವು ಮೂಲಗಳ ಪ್ರಕಾರ, ಸಂಪತ್‌ ಎಂದು ತಿಳಿದುಬಂದಿದೆ. ಇನ್ನಯ ತಾಯಿ ಶಶಿಕಲಾ. ಇನ್ನು ಅನುಶ್ರೀ 5ನೇ ತರಗತಿಯವರೆಗೆ ಸೇಂಟ್ ಥಾಮಸ್ ಬೆಂಗಳೂರಿನಲ್ಲಿ ಮತ್ತು ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅನುಶ್ರೀ ಪ್ರಿ-ಯೂನಿವರ್ಸಿಟಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಬೆಂಗಳೂರಿಗೆ ಬಂದ ಅನುಶ್ರೀ ದೂರದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಡಲು ಆರಂಭಿಸಿದರು. ಅಲ್ಲದೆ, ಕನ್ನಡದಲ್ಲಿ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಂಡರು.

ಸಂಭಾವನೆ ಎಷ್ಟು?: ಅನುಶ್ರೀ ಅವರು ಒಂದು ಎಪಿಸೋಡ್‌ಗೆ 1,00,000 ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ ಅನುಶ್ರೀ ಅವರು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಕಿರುತೆರೆಯನ್ನು ಹೊರತುಪಡಿಸಿ ಸಿನಿಮಾ ಫ್ರಿ ರಿಲೀಸ್‌ ಈವೆಂಟ್‌, ಆಡಿಯೋ ಲಾಂಚ್‌, ಮತ್ತು ತಮ್ಮದೇ ಆದ ಯ್ಯೂಟ್ಯೂಬ್‌ ಚಾನೆಲ್‌ ಮೂಲಕ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಕೂಡ ಮಾಡುತ್ತಿದ್ದಾರೆ.

ಮದುವೆ ವಿಚಾರ ರಿವೀಲ್‌: ಅನುಶ್ರೀ ಅವರು ಎಲ್ಲಿ ಹೋದರೂ ಕೂಡ ಅವರಿಗೆ ಯೂಟ್ಯೂಬರ್ಸ್‌ ಮೊದಲು ಕೇಳುತ್ತಿದ್ದ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಮೇಡಂ ಅಂತಾ. ಈ ಪ್ರಶ್ನೆಗಳಿಗೆ ಇದೀಗ ಸ್ವತಃ ಅನುಶ್ರೀ ಅವರೇ ಬಾಯಿಬಿಟ್ಟಿದ್ದಾರೆ. ಹಾಗೆಯೇ ಯಾವ ವರ್ಷ ಮದುವೆ ಅಂತಲೂ ಹೇಳಿ ಗಮನ ಸೆಳೆದಿದ್ದಾರೆ. ಆದರೆ, ಅವರು ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಅನುಶ್ರೀ ಹೇಳಿದ್ದೇನು?: ಜಿ ಕುಟುಂಬ ಅವಾರ್ಡ್‌ ಕಾರ್ಯಕ್ರಮದಲ್ಲಿ ಅಕುಲ್‌ ಬಾಲಾಜಿ ಅವರು ಅನು ಈಗ ಇಡೀ ಭಾರತದಲ್ಲೇ ಅನುಶ್ರೀ ಅವರ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಅವರೇ ಸಾಕ್ಷತ್‌ ನಡೆದುಕೊಂಡು ಬಂದರೆ ಏನು ಮಾಡ್ತೀರಾ ಎಂದು ಕಾಮಿಡಿಯಿಂದ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ "ನಿರೂಪಕಿ ಅನುಶ್ರೀ ಅವರು, "ನನ್ನ ಮದುವೆ ಚಿಂತೆ ಮನೆಯವರಿಗಿಂತ ಯೂಟ್ಯೂಬ್‌ ಅವರಿಗೆ ಜಾಸ್ತಿ ಇರೋದು. ಪ್ರತಿ ವಾರ ಈ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು," ಎಂದು ಹೇಳಿದರು.

"ಎಲ್ಲಾ ಹುಡುಗಿಯರಿಗೆ ಇರುವ ಆಸೆ ನನಗೂ ಇದೆ. ನನಗೂ ಜೀವನದಲ್ಲಿ ಒಬ್ಬ ಬಾಳ ಸಂಗಾತಿ ಬರಬೇಕಂತ ಆಸೆ ಇರತ್ತೆ. ಆದರೆ, ಎಲ್ಲದಕ್ಕೂ ತನ್ನದೇ ಆದಂತಹ ಸಮಯ, ಗಳಿಗೆ ಇರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ಬರಬೇಕಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ಮದುಯಾಗುವುದಕ್ಕೆ ಮನಸ್ಸು ಮಾಡಬೇಕಾಗಿತ್ತು. ಇಷ್ಟು ವರ್ಷಗಳ ಕಾಲ ಮನಸ್ಸು ಮಾಡಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿ ನಾನು ಮನಸ್ಸು ಮಾಡಿದ್ದೇನೆ ಮದುವೆ ಆಗಬೇಕಂತ," ಎಂದು ಹೇಳಿದರು.

"ಕನ್ನಡಿಗರ ಆಶೀರ್ವಾದದಿಂದ ಮುಂದಿನ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಆ ನನ್ನ ಸರದಾರ, ಆ ಹುಡುಗ ನನ್ನ ಬದುಕಲ್ಲಿ ಬರ್ಲಿ. ಬಂದ್ರೆ ನಿಮ್ಮ ಮುಂದೆ ಅವರನ್ನು ಕರೆದುಕೊಂಡು ಬಂದು ನಿಲ್ಲಿಸಿ ಪರಿಚಯ ಮಾಡಿಸಿಕೊಡುವಂತಹ ಅದೃಷ್ಟ ನನ್ನದಾಗಲಿ ಅಂತಾ ಅಂದುಕೊಳ್ಳುತ್ತೇನೆ," ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+