Karna Serial: ಬಂದಿದ್ದು ಲೇಟಾದ್ರೂ ಮುನ್ನುಗ್ಗಿದ "ಕರ್ಣ", ಟಿಆರ್‌ಪಿಯಲ್ಲೂ ಕಿಂಗ್!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಟ ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ತಾರಾಗಣದ "ಕರ್ಣ" ಸೀರಿಯಲ್ (Karna Serial) ಆರಂಭದಲ್ಲೇ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಇರ್ತೀನಿ ಅನ್ನೋ ಹಾಗೆ ಸಖತ್ ಸೌಂಡ್ ಮಾಡುತ್ತಿದೆ. ಧಾರಾವಾಹಿಯು ಟಿಆರ್‌ಪಿ ವಿಚಾರದಲ್ಲೂ ಮುಂದಡಿ ಇಟ್ಟಿದ್ದು, ಪ್ರಾರಂಭದ ಎರಡೇ ವಾರಗಳಲ್ಲಿ ಡಬಲ್ ಡಿಜಿಟ್ ಟಿಆರ್‌ಪಿ ಮೂಲಕ ಕಿಂಗ್ ಎನಿಸಿಕೊಂಡಿದೆ. ಆರಂಭದಲ್ಲೇ ಬೇರೆ ಸೀರಿಯಲ್‌ಗಳಿಗೆ ಸಿಗದಂತಹ ಜನಪ್ರಿಯತೆ ಕರ್ಣನ ಪಾಲಾಗುತ್ತಿದೆ.
'ಕರ್ಣ' ಧಾರಾವಾಹಿ ಇತ್ತೀಚೆಗೆ ಕನ್ನಡದಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ಹೊರಹೊಮ್ಮಿದೆ. ಧಾರಾವಾಹಿಯು ಆರಂಭವಾದ ಮೊದಲ ವಾರದಿಂದಲೇ ಟಿಆರ್‌ಪಿಯಲ್ಲಿ ಚಾರ್ಟ್ಸ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಹ್ಮಣ್ಯ ಸೇರಿ ಈಗಿರುವ ಟಾಪ್ 5 ಸೀರಿಯಲ್‌ಗಳನ್ನೂ ಹಿಂದಿಕ್ಕಿದೆ ಎಂದು ವರದಿಯಾಗಿದೆ. ಪ್ರಾರಂಭದ ವಾರದಿಂದಲೇ ಎರಡಂಕಿ ಟಿವಿಆರ್ ಗಳಿಸಿ ಮೊದಲ ಸ್ಥಾನ ಗಳಿಸಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಕನಿಷ್ಠ ಮೂರು ವಾರಗಳಿಂದ ನಿರಂತರವಾಗಿ ಕರ್ಣ ನಂಬರ್ 1 ಸ್ಥಾನದಲ್ಲಿದ್ದಾನೆ.

ಧಾರಾವಾಹಿಯ ಕಥೆಯು ಕರ್ಣ, ನಿತ್ಯಾ, ಮತ್ತು ನಿಧಿ ಪಾತ್ರಗಳ ಸುತ್ತ ಹೆಣೆಯಲ್ಪಟ್ಟಿದೆ. ಈ ಮೂರು ಪಾತ್ರಗಳ ಕಾಂಬಿನೇಷನ್ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಕಥೆಯು ಪ್ರೇಕ್ಷಕರ ಚಿತ್ತ ಸೆಳೆದಿದೆ. ನಿಯಮಿತವಾಗಿ ಟಾಪ್ 5 ಧಾರಾವಾಹಿಗಳಲ್ಲಿ ಮುಂದಿದೆ. ಮುಂದಿನ ವಾರಗಳಲ್ಲಿಯೂ ಕರ್ಣ ಟಿಆರ್‌ಪಿಯಲ್ಲಿ ಅಬ್ಬರಿಸಲಿದ್ದಾನೆ ಎಂದು ನಿರೀಕ್ಷಿಸಲಾಗಿದೆ.
ಟಿಆರ್‌ಪಿಯಲ್ಲಿ ಆರಂಭದಿಂದಲೇ ಮೂರು ವಾರಗಳ ಕಾಲ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡು ದಾಖಲೆ ಬರೆಯುತ್ತಿದೆ. ಮೊದಲ ವಾರ 10.2, ಎರಡನೇ ವಾರ 10.4 ಮತ್ತು ಮೂರನೇ ವಾರವೂ ಸತತವಾಗಿ 10.2 ಟಿಆರ್‌ಪಿ ಬಾಚಿದ್ದು, ಇದು ಕನ್ನಡ ಕಿರುತೆರೆತಲ್ಲಿ ಹೊಸ ಸಾಧನೆ ಎನ್ನಲಾಗುತ್ತಿದೆ. ಜೂನ್‌ನಲ್ಲೇ ಪ್ರಸಾರ ಶುರುವಾಗಬೇಕಿದ್ದ 'ಕರ್ಣ' ಧಾರಾವಾಹಿಯ ಪ್ರಸಾರ ನಿಗದಿಯ ಸಮಯಕ್ಕೆ ಬಂದಿರಲಿಲ್ಲ. ಕರ್ಣನಿಗೆ ಆರಂಭದಲ್ಲೇ ಕೆಲವು ಅಡ್ಡಿ ಆತಂಕಗಳು ಎದುರಾಗಿದ್ದವು. ಅದೆಲ್ಲವನ್ನೂ ಗೆದ್ದು ಬಂದ ಕರ್ಣನಿಗೆ ಟಿಆರ್‌ಪಿಯಲ್ಲೂ ಜಯ ಸಿಗುತ್ತಿದೆ.

ಧಾರಾವಾಹಿ ಕಿರುತೆರೆಯಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಟಿಆರ್‌ಪಿ ದಾಖಲೆಗಳನ್ನು ಉಡೀಸ್ ಮಾಡಿದೆ. ಹೀಗಾಗಿ ಕರ್ಣ ತನ್ನ ಪ್ರಾರಂಭದ ಮೂರು ವಾರಗಳಲ್ಲಿ ನಿರಂತರವಾಗಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದು, ಕನ್ನಡ ಧಾರಾವಾಹಿ ಪ್ರೇಕ್ಷಕರ ಮನಸ್ಸಿನಲ್ಲಿ ಅತ್ಯಂತ ನೆಚ್ಚಿನ ಸೀರಿಯಲ್ ಆಗಿ ಹೊರಹೊಮ್ಮುತ್ತಿದೆ. ಕಿರಣ್ ರಾಜ್ ತುಸು ಬ್ರೇಕ್ ಪಡೆದು ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದು ಒಂದೆಡೆಯಾದರೆ, ನಮ್ರತಾ, ಭವ್ಯಾ ಅವರ ಕಾಂಬಿನೇಷನ್ ಕೂಡ ಸಖತ್ತಾಗಿದೆ ಎನ್ನುತ್ತಿದ್ದಾರೆ ಸೀರಿಯಲ್ ಪ್ರಿಯರು.












Click it and Unblock the Notifications