Kichcha Sudeep: ಬಿಗ್ ಬಾಸ್ ನಿರೂಪಣೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದ ಸುದೀಪ್: ಯಾಕೆ ಗೊತ್ತಾ?
ಬೆಂಗಳೂರು, ಸೆಪ್ಟೆಂಬರ್ 24: ಬಿಗ್ ಬಾಸ್ ಕನ್ನಡ ಸೀಸನ್ 11' ಶೋ ಕಾರ್ಯಕ್ರಮಕ್ಕೆ ಸುದೀಪ್ ನಿರೂಪಣೆ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನ ಅನೇಕರಲ್ಲಿತ್ತು. ನಟ ಸುದೀಪ್ ನಿರೂಪಣೆಯಿಂದಾಗಿ ಹಲವು ಮಂದಿ ಬಿಗ್ ಬಾಸ್ ನೋಡುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ನಿರೂಪಣೆಯನ್ನ ಸುದೀಪ್ ಅವರೇ ಮಾಡಲಿದ್ದಾರೆ ಎಂಬುದು ಖಚಿತವಾಗಿದೆ.
ಬಿಗ್ ಬಾಸ್ ಶೋ ನಿರೂಪಣೆಗೆ ಬ್ರೇಕ್ ಹಾಕಬೇಕು ಎಂಬ ಆಲೋಚನೆ ಸ್ವತಃ ಸುದೀಪ್ ಅವರ ಮನಸ್ಸಲ್ಲಿ ಬಂದಿತ್ತು. ಈ ಬಗ್ಗೆ ನಟ ಸುದೀಪ್ ಅವರೇ ಮಾತನಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಸೆಪ್ಟೆಂಬರ್ 29 ರಂದು ಅದ್ದೂರಿಯಾಗಿ ಲಾಂಚ್ ಆಗಲಿದ್ದು, ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಗ್ಗೆ ಸೋಮವಾರ ಸುದ್ದಿಗೋಷ್ಟಿ ನಡೆಸಿರುವ ಕಿಚ್ಚ ಸುದೀಪ್ ಅವರು ನಿರೂಪಣೆ ಬ್ರೇಕ್ ಹಾಕುವ ವಿಚಾರಕ್ಕೆ ಉತ್ತರಿಸಿದ್ದಾರೆ.

ಈ ಬಾರಿ ನಿರೂಪಣೆ ಬೇಡ ಅಂತ ನೀವು ಅಂದುಕೊಂಡಿದ್ದು ನಿಜವೇ? ಎಂಬ ಪ್ರಶ್ನೆಗೆನಟ ಕಿಚ್ಚ ಸುದೀಪ್ ಅವರು ಮಾತನಾಡಿ, ಬಿಗ್ ಬಾಸ್ನ ಈ ಸೀಸನ್ಗೆ ಗ್ಯಾಪ್ ನೀಡೋಣ ಎಂಬ ಆಲೋಚನೆ ನನಗೆ ಇತ್ತು. ಗಿಮಿಕ್ ಮಾಡಿ ಯಾವುದೇ ಪ್ರೋಮೋ ಮಾಡುವ ಅವಶ್ಯಕತೆ ನಮಗೆ ಇಲ್ಲ. ಗಿಮಿಕ್ನಿಂದ ಓಡುವ ಜೀವನವನ್ನು ನಾವು ನಡೆಸುತ್ತಿಲ್ಲ. ನಾನು ಓಪನ್ ಆಗಿ ಕಲರ್ಸ್ ವಾಹಿನಿಯವರ ಮುಂದೆ ನನ್ನ ನಿರ್ಧಾರ ತಿಳಿಸಿದ್ದು ನಿಜ ಎಂದು ನಟ ಸುದೀಪ್ ಹೇಳಿದ್ದಾರೆ.
ನಾನು ಈ ಬಾರಿ ನಿರೂಪಣೆ ಮಾಡಲ್ಲ ಎಂದಿದ್ದು ನಿಜ. ನಾನು ಓಪನ್ ಆಗಿ ಕಲರ್ಸ್ ವಾಹಿನಿಯವರ ಮುಂದೆ ನನ್ನ ನಿರ್ಧಾರ ತಿಳಿಸಿದ್ದು ನಿಜ. ಅದರಿಂದ ನನಗೂ ಮತ್ತು ಕಲರ್ಸ್ ವಾಹಿನಿಯವರಿಗೆ ಹೊಂದಾಣಿಕೆ ಇಲ್ಲ ಅಂತೇನೂ ಅಲ್ಲ. ಹೊಂದಾಣಿಕೆ ಇಲ್ಲದೇ ಇದ್ದಿದ್ದರೆ 10 ವರ್ಷಗಳ ಜರ್ನಿ ಆಗುತ್ತಿರಲಿಲ್ಲ. ಬಿಗ್ ಬಾಸ್, ಕ್ರಿಕೆಟ್ ಅಂತ ಬ್ಯುಸಿ ಆಗಿದ್ದೆ. ಬರೀ ಅದರಲ್ಲೇ ಇದ್ದೀನಿ. ಹೋಗೋಕೆ ಆಗುತ್ತಿಲ್ಲ. ಬಿಗ್ ಬಾಸ್ ಒಳ್ಳೆಯ ಕಾರ್ಯಕ್ರಮ ಎಂಬುದು ಹೌದು. ಜನರು ಇಷ್ಟಪಟ್ಟಿದ್ದಾರೆ. ಅದಕ್ಕಾಗಿ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಶುರುವಾದರೆ ನನ್ನ ಲೈಫ್ ಸ್ವಲ್ಪ ಮ್ಯೂಟ್ ಆಗುತ್ತೆ ಎಂದು ಸುದೀಪ್ ತಿಳಿಸಿದ್ದಾರೆ.
ವಾರದಲ್ಲಿ ನಾಲ್ಕು ದಿನ ಮಾತ್ರ ನಾನು ಎಲ್ಲಿಗಾದರೂ ಹೋಗಬಹುದು. ಶುಕ್ರವಾರ ಎಲ್ಲಿಯೇ ಇದ್ರೂ ವಾಪಸ್ ಈ ಸ್ಟುಡಿಯೋಗೆ ನಾನು ಬರಲೇಬೇಕು. ಯಾಕೆಂದರೆ ನಾನು ಎಲ್ಲ ಎಪಿಸೋಡ್ ನೋಡಬೇಕು. ಎಲ್ಲರಿಗೂ ನ್ಯಾಯ ಒದಗಿಸಬೇಕು. ಶನಿವಾರ ಇಡೀ ದಿನ ಶೂಟಿಂಗ್ ಆಗುತ್ತೆ. ರಾತ್ರಿವರೆಗೆ ಸಾಗುತ್ತದೆ. ಭಾನುವಾರ ಬೆಳಗ್ಗೆ ತನಕ ಅದರಲ್ಲೇ ಬ್ಯುಸಿ. ಹಾಗಾಗಿ ವಾಹಿನಿಯವರ ಜೊತೆ ನಾನು ಮಾತನಾಡಿದೆ. 10 ವರ್ಷ ಕಳೆದಿದೆ. ಬೇರೆ ಯಾರ ಜೊತೆಗಾದರೂ ಮುಂದುವರಿಯಿರಿ ಎಂದಿದ್ದೆ ಎಂದು ನಟ ಸುದೀಪ್ ತಿಳಿಸಿದ್ದಾರೆ.
ನನ್ನ ನಿರ್ಧಾರ ಹೇಳಿದ ಬಳಿಕ ಕಲರ್ಸ್, ಎಂಡಮಾಲ್ ಕಂಪನಿಗಳಿಂದ ಅನೇಕರು ನನ್ನನ್ನು ಒಪ್ಪಿಸಲು ನಮ್ಮ ಮನೆಗೆ ಬಂದರು. 10 ವರ್ಷದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದ್ದು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇನ್ನೂ 10 ವರ್ಷಗಳ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿದ್ದ ಕಿಚ್ಚ ಸುದೀಪ್ ಅವರು, ಈ ಬಾರಿ ಕಿಚ್ಚ ಸುದೀಪ್ ಬದಲು ರಿಷಬ್ ಶೆಟ್ಟಿ ಅವರು ಬಿಗ್ ಬಾಸ್ ನಿರೂಪಣೆ ಮಾಡುತ್ತಾರೆ ಎಂಬ ಗಾಸಿಪ್ ಕೇಳಿಬಂದಿತ್ತು. ಆದರೆ, ಇದೀಗ ಎಲ್ಲಾ ಪ್ರಶ್ನೆಗಳಿಗೂ ಕಿಚ್ಚ ಸುದೀಪ್ ಅವರು ಉತ್ತರವನ್ನ ನೀಡಿದ್ದಾರೆ.












Click it and Unblock the Notifications