Rajath: ರಜತ್‌ ಬಗ್ಗೆ ಸುದೀಪ್‌ ಮೆಚ್ಚುಗೆ ಮಾತು: ವಿನ್ನರ್‌ ಆಗ್ತಾರಾ ವಲ್ಡ್‌ ಕಾರ್ಡ್ ಎಂಟ್ರಿ ಸ್ಪರ್ಧಿ

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಅಂತಿಮ ಹಂತಕ್ಕೆ ತಲುಪುತ್ತಿದ್ದು, ಆಟ ಇನ್ನಷ್ಟು ಇಂಟ್ರಸ್ಟಿಂಗ್ ಆಗಿದೆ. ಮನೆಯೊಳಗೆ ಕಾಲಿಟ್ಟ ಒಟ್ಟು ಇಪ್ಪತ್ತು ಜನರ ಪೈಕಿ ಈಗ ಕೆಲವೇ ಸ್ಪರ್ಧಿಗಳು ಉಳಿದಿದ್ದು, ವಿನ್ನರ್ ಯಾರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ. ಫೈನಲಿಸ್ಟ್‌ ಆಗಬೇಕಿದ್ದ ಸ್ಪರ್ಧಿಗಳೇ ಎಲಿಮಿನೇಟ್‌ ಆಗುತ್ತಿದ್ದು ಸದ್ಯ ವಿನ್ನರ್‌ ಯಾರಾಗಬಹುದು ಎಂದು ಊಹಿಸುವುದು ಕೂಡ ಕಷ್ಟವಾಗುತ್ತಿದೆ.

ಮೊದಲು ಬಂದ ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಯೊಳಗೆ ಬಂದ ಇಬ್ಬರು ಸ್ಪರ್ಧಿಗಳು ದೊಡ್ಡ ಸವಾಲಾಗಿದ್ದಾರೆ. ಮೊದಲು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಹನುಮಂತ ಹಾಗೂ ಎರಡನೇ ಬಾರಿ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ರಜತ್‌ ಎಲ್ಲರಿಗೂ ಕಠಿಣ ಎದುರಾಳಿಗಳಾಗಿದ್ದಾರೆ. ದಿನ ಕಳೆದಂತೆ ಇಬ್ಬರೂ ಕೂಡ ಟಾಪ್‌ ಐದು ಸ್ಪರ್ಧಿಗಳಲ್ಲಿ ಇದ್ದರೂ ಆಶ್ಚರ್ಯ ಇಲ್ಲ ಎನ್ನುವ ಮಟ್ಟಿಗೆ ಆಡುತ್ತಿದ್ದಾರೆ.

Kiccha Sudeep Praises Rajath Kishan In Bigg Boss Kannada Season 11

ಅದರಲ್ಲೂ ರಜತ್‌ ಅಂತೂ ಬಿಗ್‌ ಬಾಸ್‌ ಮನೆಯೊಳಗೆ ಧೂಳೆಬ್ಬಿಸಿದ್ದಾರೆ. ಆಟ, ಜಗಳ, ಕಾಮಿಡಿ, ಮನೋರಂಜನೆ ಎಲ್ಲಾದಕ್ಕೂ ರಜತ್‌ ಸೈ. ಹೀಗಾಗಿ ಪ್ರತಿ ಬಾರಿ ನಾಮೀನೇಟ್‌ ಆದಗಲೂ ಕೂಡ ರಜತ್‌ ಬೆಸ್ಟ್‌ ಸ್ಥಾನದಲ್ಲಿಯೇ ಹೆಚ್ಚಿನ ವೋಟ್‌ ಪಡೆದು ಸೇವ್‌ ಆಗುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದ ರಜತ್‌ ಕಿಶನ್‌ ಮೇಲಿನ ಜನರ ಅಭಿಪ್ರಾಯ ಸಂಪೂರ್ಣ ಬದಲಾಗಿ ಹೋಗಿದೆ. ಇದೀಗ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್‌ ಕೂಡ ಒಂದಿಬ್ಬರು ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದು, ಈ ಪೈಕಿ ರಜತ್‌ ಬಗ್ಗೆ ಕೂಡ ಮೆಚ್ಚುಗೆಯ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್‌, ' ಬಿಗ್ ಬಾಸ್‌ ವೀಕೆಂಡ್‌ ಸಂಚಿಕೆಯಲ್ಲಿ ಹನುಮಂತು ಅಂತಲ್ಲಾ. ಯಾರೇ ತಮಾಷೆ ಮಾಡಿದರೂ ಖುಷಿಯಾಗುತ್ತದೆ. ಎಲ್ಲರನ್ನೂ ನೋಡಿ. ಮಂಜು ಅವರಲ್ಲಿ ಒಂದು ಕಾಮಿಡಿ ಇದೆ. ರಜತ್‌ ಅಲ್ಲಿ ಒಂದು ಕಾಮಿಡಿ ಇದೆ. ಅವರೆಲ್ಲಾ ಎಷ್ಟು ಗಲಾಟೆ ಮಾಡುತ್ತಾರೆ. ಅಷ್ಟೇ ನಗಿಸುತ್ತಾರೆ. ಪ್ರತಿಯೊಬ್ಬರು ಕೂಡ ನಗಿಸುತ್ತಾರೆ' ಎಂದರು.

Kiccha Sudeep Praises Rajath Kishan In Bigg Boss Kannada Season 11

'ಕೋಪ ನನಗೆ ಅಲ್ಲಿ ಯಾರ ಮೇಲೂ ಇಲ್ಲ. ಅವರ ವರ್ತನೆ ಪ್ರೇಕ್ಷಕರ ಮೇಲೆ ಪರಿಣಾಮ ಬೀರುತ್ತದೆ, ಕಾರ್ಯಕ್ರಮದ ಮೇಲೆ ಪರಿಣಾಮ ಬೀರುತ್ತಿದೆ ಅನಿಸಿದಾಗ ಕೋಪ ಬರುತ್ತದೆ. ಇನ್ನು ನನಗೆ ಇಷ್ಟವಾದ ಸ್ಪರ್ಧಿ ಅಂತಾ ಯಾರೂ ಇಲ್ಲ. ನಾನು ಆ ರೀತಿ ಇಟ್ಟುಕೊಳ್ಳಲು ಆಗುವುದಿಲ್ಲ. ಆ ರೀತಿ ಭಾವನೆ ಇಟ್ಟಕೊಳ್ಳಬಾರದು ಕೂಡ. ಅವರು ನನಗೆ ಎಷ್ಟೇ ಕ್ಲೋಸ್‌ ಇದ್ದರೂ ಆ ರೀತಿ ಇಟ್ಟುಕೊಳ್ಳಲು ಆಗುವುದಿಲ್ಲ. ನಾನು ಯಾರಿಗೂ ಪಕ್ಷಪಾತ ಮಾಡಲು ಆಗುವುದಿಲ್ಲ' ಎಂದು ಸುದೀಪ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+