Bigg Boss Kannada: ಕಿಚ್ಚ ಸುದೀಪ್‌ಗೆ ‘ಥೂ.. ನಾಯಿ...’ ಅಂತಿದ್ದರು ಇವರು...

ಕನ್ನಡಿಗ ಕಿಚ್ಚ ಸುದೀಪ್ ಅಂದ್ರೆ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ಇಂಡಿಯಾದಲ್ಲಿ ಹವಾ ಇದೆ. ಇಂಡಿಯಾ ಮಾತ್ರ ಅಲ್ಲ ಸಪ್ತ ಸಾಗರ ದಾಟಿ ಹೋಗಿದೆ ಕಿಚ್ಚ ಸುದೀಪ್ ಕೀರ್ತಿ ಪತಾಕೆ. ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಮಾಡಿದ್ದ ನಟ ಕಿಚ್ಚ ಸುದೀಪ್, ಹಿಂದಿ ಮತ್ತು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಕೂಡ ದೊಡ್ಡ ಹವಾ ಮೇಂಟೇನ್ ಮಾಡಿದ್ದರು. ತಮಿಳು ಸ್ಟಾರ್ ವಿಜಯ್ ಅವರ ವಿರುದ್ಧ ಕೂಡ ಕಿಚ್ಚ ಸುದೀಪ್ ಘರ್ಜಿಸಿದ್ದರು. ಇಂತಹ ಬಹುದೊಡ್ಡ ಸ್ಟಾರ್ ತಮ್ಮ ಕನ್ನಡ ಪ್ರೀತಿಯಿಂದಲೇ ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇಂತಹ ಸಮಯದಲ್ಲೇ, ಕಿಚ್ಚ ಸುದೀಪ್‌ಗೆ 'ಥೂ.. ನಾಯಿ...' ಅಂತಿದ್ದರು ಇವರು...

ಕಿಚ್ಚ... ಕಿಚ್ಚ... ಕಿಚ್ಚ... ಹೀಗೆ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಈ ಬಿರುದು ನೀಡಿ ಈಗಾಗಲೇ ಹಲವು ದಶಕ ಅಂದ್ರೆ ಹತ್ತಾರು ವರ್ಷಗಳೇ ಕಳೆದು ಹೋಗಿವೆ. ಇಂತಿಪ್ಪ ಕನ್ನಡಿಗರ ನೆಚ್ಚಿನ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಕಳೆಯನ್ನ ತಂದಿದ್ದಾರೆ ಎಂದರೆ ತಪ್ಪು ಆಗಲಾರದು ಬಿಡಿ, ಅದರಲ್ಲೂ ಕಿಚ್ಚ ಇದ್ದರೆ ಬಿಗ್‌ಬಾಸ್‌ಗೆ ಕಳೆ ಅಂತಾರೆ ಅಭಿಮಾನಿಗಳು. ಹೀಗಿದ್ದಾಗಲೆ, ಕಿಚ್ಚ ಸುದೀಪ್‌ಗೆ 'ಥೂ.. ನಾಯಿ...' ಅಂತಿದ್ದರು ಇವರು...

Kiccha Sudeep Mother Is Always Saying This To Him

ಕಿಚ್ಚ ಸುದೀಪ್‌ಗೆ 'ಥೂ.. ನಾಯಿ...' ಅಂತಿದ್ದರು...

ಕಳೆದ ಒಂದು ದಶಕದಿಂದ ಕಿಚ್ಚ ಸುದೀಪ್ ಅವರ ಮುಂದಾಳತ್ವದಲ್ಲಿ, ಕನ್ನಡ ಬಿಗ್‌ಬಾಸ್ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ ಎಂಬುದು ಕನ್ನಡಿಗರ ಮನದಾಳದ ಮಾತು. ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಬಿಗ್‌ಬಾಸ್ ಕನ್ನಡ ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರೇ ಖುದ್ದು ವಾರಕ್ಕೆ ಒಂದು ಬಾರಿ ಬಂದು ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ವಾರದ ಕಥೆ, ಕಿಚ್ಚನ ಜೊತೆ ಕಾರ್ಯಕ್ರಮ ಬಿಗ್‌ಬಾಸ್ ಕಾರ್ಯಕ್ರಮದ ಅತಿ ಮುಖ್ಯ ಆಕರ್ಷಣೆ. ಹೀಗಿದ್ದಾಗಲೇ ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ... ಯಾಕೆ ಗೊತ್ತಾ? ಮುಂದೆ ಓದಿ.

ಕಿಚ್ಚ ಸುದೀಪ್... ಈ ಹೆಸರು ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶದಲ್ಲೇ ಚಿರ ಪರಿಚಿತವಾಗಿದೆ ಎನ್ನಬಹುದು. ಯಾಕಂದ್ರೆ ಕನ್ನಡಿಗ ಕಿಚ್ಚ ಸುದೀಪ್ ಅವರು ಭಾರತದ ಮೂಲೆ ಮೂಲೆಯಲ್ಲಿ ಕೂಡ ಹೆಸರು ಮಾಡಿದ್ದಾರೆ. ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾಗಳು ಸೇರಿದಂತೆ ತೆಲುಗು ಸಿನಿಮಾದಲ್ಲೂ ಮಿಂಚಿದ್ದಾರೆ ಕನ್ನಡಿಗ ಕಿಚ್ಚ ಸುದೀಪ್ ಅವರು. ಹೀಗಿದ್ದಾಗ ಕಿಚ್ಚ ಸುದೀಪ್ ಅವರ ತಾಯಿ ಅವರು ಕಾಲವಾಗಿದ್ದು, ತಮ್ಮ ತಾಯಿ ತಮ್ಮನ್ನು ಬಿಟ್ಟು ಹೋಗಿರುವ ಈ ನೋವು ಕಿಚ್ಚ ಸುದೀಪ್ ಅವರನ್ನ ಕಾಡುತ್ತಿದೆ. ಇಂತಹ ಸಮಯದಲ್ಲೇ, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಬಂದಿದ್ದರು ಕಿಚ್ಚ ಸುದೀಪ್ ಅವರು.

ಅಮ್ಮನ ನೆನಪಿನಲ್ಲಿ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ತಮ್ಮ ತಾಯಿ ಅವರು ತೀರಿಹೋದ ನೋವು ಇದ್ದರೂ ಬಿಗ್‌ಬಾಸ್ ಕಾರ್ಯಕ್ರಮ ನಡೆಸಿಕೊಟ್ಟು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇದೇ ಸಮಯದಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯವರ ನೆನಪು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಪಂಚಾಯಿತಿ ವೇದಿಕೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು ತಮ್ಮ ತಾಯಿ ಸರೋಜಮ್ಮ ಅವರ ನೆನಪು ಮಾಡಿಕೊಂಡರು.

ಕಿಚ್ಚ ಸುದೀಪ್ ಕಣ್ಣು ತುಂಬಿಕೊಂಡರು...

ನನ್ನ ಅಮ್ಮನಿಗೆ ಬಿಗ್‌ಬಾಸ್ ಶೋ ತುಂಬಾ ಇಷ್ಟ ಆಗ್ತಿತ್ತು, ನಮ್ಮಮ್ಮ ತುಂಬಾ ಅಂದ್ರೆ ತುಂಬ ಇಷ್ಟಪಟ್ಟು ನೋಡುತ್ತಿದ್ದ ಕಾರ್ಯಕ್ರಮ ಬಿಗ್ ಬಾಸ್ ಆಗಿತ್ತು ಎಂದು ಸರೋಜಮ್ಮ ಅವರ ನೆನಪು ಮಾಡಿಕೊಂಡು ಕಿಚ್ಚ ಸುದೀಪ್ ಅವರು ಕಣ್ಣು ತುಂಬಿಕೊಂಡರು. ಅಲ್ಲದೆ ವಾರದ ಪಂಚಾಯಿತಿ ಎಪಿಸೋಡ್ ನಡೆಸಿಕೊಡುವಾಗ ನಾನು ಹೇಗೆ ಕಾಣಿಸುತ್ತಿದ್ದೆ? ಎಂಬುದನ್ನ ಅಮ್ಮ ವಿಮರ್ಶೆ ಮಾಡುತ್ತಿದ್ದರು. ವೇದಿಕೆ ಮೇಲೆ ನಾನು ತುಂಬ ಚೆನ್ನಾಗಿ ಕಾಸ್ಟ್ಯೂಮ್‌ ಹಾಕಿದ್ದ ದಿನ ಬಿಗ್‌ಬಾಸ್ ಕಾರ್ಯಕ್ರಮ ಮುಗಿಸಿ ಮನೆಗೆ ಹೋದಾಗ ಅಮ್ಮ ಒಂದು ಮಾತು ಹೇಳುತ್ತಿದ್ದರು...

ಅಮ್ಮ ನನಗೆ 'ಹೇ, ಥೂ.. ನಾಯಿ.. ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀಯಾ.. ಹೋಗು ದೃಷ್ಟಿ ತೆಗಿಸಿಕೋ..' ಅಂತಾ ಪ್ರೀತಿಯಿಂದ ಹೇಳುತ್ತಿದ್ದರು ಎಂದು ಕಿಚ್ಚ ಸುದೀಪ್ ಅವರು, ಅಮ್ಮನ ನೆನಪು ಮಾಡಿಕೊಂಡು ಕಣ್ಣು ಒದ್ದೆ ಮಾಡಿಕೊಂಡರು. ಆದರೆ ಈಗ ಅಮ್ಮ ಇಲ್ಲದ ನೋವು ಕಾಡುತ್ತಿದೆ, ಅಮ್ಮನ ಮಾತಿನ ಸ್ಫೂರ್ತಿಯಿಂದ ನಾನು ಮುಂದುವರಿಯುತ್ತೇನೆ ಎಂಬ ಧೈರ್ಯದ ಮಾತುಗಳನ್ನ ಕೂಡ ನಟ ಕಿಚ್ಚ ಸುದೀಪ್ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+