Sudeep: ಸುದೀಪ್ ಸುದ್ದಿಗೋಷ್ಠಿ; ಬಿಗ್‌ಬಾಸ್, ದರ್ಶನ್ ಬಗ್ಗೆ ಹೇಳಿದ್ದೇನು?
ನಟ ಕಿಚ್ಚ ಸುದೀಪ್ ಇಂದು ತುರ್ತಾಗಿ ಸುದ್ದಿಗೋಷ್ಠಿ ಕರೆದಿದ್ದರು. ಬಿಗ್ ಬಾಸ್ ಶೋ ನಿರೂಪಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಟ ದರ್ಶನ್, ಅಭಿಮಾನಿಗಳು, ಹುಟ್ಟುಹಬ್ಬ ಆಚರಣೆ ಬಗ್ಗೆ ಕೂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಈ ಬಾರಿ ಕೂಡ ಹುಟ್ಟುಹಬ್ಬ ಆಚರಣೆ ಮಾಡಲು ಅಭಿಮಾನಿಗಳು ಮನೆ ಬಳಿ ಬರದಂತೆ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಭಿಮಾನಿಗಳು ಅವರ ಅವರ ನಡುವೆಯೇ ಸ್ಪರ್ಧೆಯಿಂದ ಹೂವು, ಕೇಕ್ ತಂದು ಹಣವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೇನೆ. ನನ್ನ ಅಭಿಮಾನಿಗಳ ನಡುವೆಯೇ ಸ್ಪರ್ಧೆ ನಡೆಯುತ್ತದೆ, ಅದನ್ನು ಸಂಭಾಳಿಸುವುದು ಕಷ್ಟ ಅದಕ್ಕಾಗಿ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೇನೆ ಎಂದರು.

ತಮಗೆ ಬಂದ ಡಾಕ್ಟರೇಟ್ ನಿರಾಕರಿಸಿದ ಬಗ್ಗೆ ಮಾತನಾಡಿದ ಅವರು, ನಾನು ಇನ್ನೂ ಏನೂ ಸಾಧನೆ ಮಾಡಿಲ್ಲ. ಕೆಲವು ಸಿನಿಮಾಗಳನ್ನು ಮಾಡಿದ್ದೇನೆ. ಅದು ಕೂಡ ಸಮಾಜಕ್ಕಾಗಿಯೇ ಏನು ಮಾಡಿದ್ದಲ್ಲ, ನಾನೇನಾದರೂ ಸಾಧನೆ ಮಾಡಿದ್ದೇನೆ ಎನಿಸಿದರೆ ನಾನೇ ಕೇಳಿ ಪ್ರಶಸ್ತಿ ಕೇಳಿ ಪಡೆಯುತ್ತೇನೆ ಎಂದರು.
ದರ್ಶನ್ ಬಗ್ಗೆ ಹೇಳಿದ್ದೇನು?
ಇನ್ನು ದರ್ಶನ್ ಬಗ್ಗೆ ಕೂಡ ಪ್ರಶ್ನೆಗಳು ಬಂದಾಗ, ನಾನು ಒಳಗೆ ಹೋಗಿ ಅವರನ್ನು ಹೊರಗೆ ಕಳಿಸಲಾ ಎಂದು ಪ್ರಶ್ನೆ ಮಾಡಿದ್ದಾರೆ. ಅವರಿಗೆ ಕುಟುಂಬ ಇದೆ, ಅಭಿಮಾನಿಗಳು ಇದ್ದಾರೆ. ನಾನು ಮಾತನಾಡಿ ಅವರಿಗೆ ಬೇಜಾರು ಮಾಡಲು ಇಷ್ಟಪಡಲ್ಲ. ಕಾನೂನು ಇದೆ, ಮಾಧ್ಯಮದಲ್ಲಿ ಬರುವುದನ್ನು ನೋಡಿಯೇ ನಾನು ವಿಚಾರ ತಿಳಿದುಕೊಳ್ಳುತ್ತೇನೆ. ತಪ್ಪು, ಸರಿ ಎಂದು ನಾವು ಹೇಳಲು ಆಗಲ್ಲ, ಕಾನೂನು ಇದೆ, ಕಾನೂನನ್ನು ನಂಬಬೇಕು ಅದನ್ನು ಮೀರಿ ನಾನು ಏನೂ ಹೇಳಲ್ಲ, ನಾನು ಏನೋ ಹೇಳಿದರೆ ಅದು ಇನ್ನೊಂದಾಗುತ್ತದೆ ಎಂದು ಹೇಳಿದರು.
ಬಿಗ್‌ಬಾಸ್ ನಿರೂಪಣೆ ಮಾಡ್ತೀರಾ?
ಬಿಗ್ ಬಾಸ್ ಕಾರ್ಯಕ್ರಮದ 10 ಸೀಸನ್‌ಗಳನ್ನು ನಿರೂಪಣೆ ಮಾಡಿ ಯಶಸ್ವಿಯಾಗಿರುವ ಸುದೀಪ್, 11ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಇಷ್ಟು ದಿನ ನಾನು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೇನೆ, ಹೊಸ ನಿರೂಪಕರು ಬರಲಿ ಎಂದು ನಾನು ಕೂಡ ಕಾಯುತ್ತಿದ್ದೇನೆ. ನಾನು ಇರುವವರೆಗೂ ಶ್ರದ್ಧೆಯಿಂದ ನಡೆಸಿಕೊಟ್ಟಿದ್ದೇನೆ. ತುಂಬಾ ಕಷ್ಟಪಟ್ಟು ಬಿಗ್ ಬಾಸ್ ನಡೆಸಿಕೊಟ್ಟಿದ್ದೇನೆ. ಸಿನಿಮಾ ಶೂಟಿಂಗ್ ಮುಗಿಸಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುತ್ತಿದ್ದೆ, ಅಲ್ಲಿ ಇಲ್ಲಿ ಓಡಾಡಿಕೊಂಡು ನಿದ್ದೆಯಿಲ್ಲದೆ ಕೆಲಸ ಮಾಡುತ್ತಿದ್ದೆ, ಈಗ ಸಿನಿಮಾಗೆ ನ್ಯಾಯ ಕೊಡಬೇಕಾ? ಬಿಗ್ ಬಾಸ್ ಕಾರ್ಯಕ್ರಮಕ್ಕೆ ನ್ಯಾಯ ಕೊಡಬೇಕಾ ಎಂದು ಪ್ರಶ್ನೆ ಮಾಡಿದರು.












Click it and Unblock the Notifications