ಆ ನಟನಿಗಾಗಿ ಖ್ಯಾತ ನಟಿಯೊಂದಿಗೆ ಗಲಾಟೆ ಮಾಡಿಕೊಂಡ ಶ್ರೀನಿಧಿ ಶೆಟ್ಟಿ
ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರು ಸದ್ಯ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಟಾಲಿವುಡ್‌ನಲ್ಲಿ ಅವರ ಚೊಚ್ಚಲ ಸಿನಿಮಾ ಹಿಟ್-3 ರಿಲೀಸ್ ಆಗಿ ಹಿಟ್ ಕೂಡ ಕಂಡಿದೆ. ಇದರ ಬೆನ್ನಲ್ಲೇ ಶ್ರೀನಿಧಿ ಶೆಟ್ಟಿಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದ್ದು, ಇದೀಗ ಖ್ಯಾತ ನಟಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದೂ ಖ್ಯಾತ ನಟನಿಗಾಗಿ ಶ್ರೀನಿಧಿ ಶೆಟ್ಟಿ ಕಿರಿಕ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ..
ಖ್ಯಾತ ನಟನ ವಿಚಾರಕ್ಕೆ ಬಹುಭಾಷಾ ನಟಿ ರಾಶಿ ಖನ್ನಾ (Raashii Khanna) ಹಾಗೂ ನಟಿ ಶ್ರೀನಿಧಿ ಶೆಟ್ಟಿ ನಡುವೆ ಗಲಾಟೆ ನಡೆದಿದೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈಗಷ್ಟೇ ಬೇರೆ ಭಾಷೆಗಳಲ್ಲಿ ನಟಿಸುತ್ತಿರುವ ಕನ್ನಡದ ಬೆಡಗಿ ಆಗಲೇ ಮತ್ತೊಬ್ಬ ನಟಿ ಜೊತೆ ಕಿರಿಕ್ ಮಾಡಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಆ ನಟನ ವಿಚಾರವಾಗಿ ರಾಶಿ ಹಾಗೂ ಶ್ರೀನಿಧಿ ಗಲಾಟೆ ಮಾಡಿಕೊಂಡಿರುವ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಇಷ್ಟಕ್ಕೂ ಈ ಇಬ್ಬರ ಗಲಾಟೆಗೆ ಕಾರಣವಾದ ಆ ನಟ ಯಾರು ಗೊತ್ತಾ?
ಟಾಲಿವುಡ್‌ನ ಡಿಜೆ ಟಿಲ್ಲು ಖ್ಯಾತಿಯ ನಟ ಸಿದ್ದು ಜೊನ್ನಲಗಡ್ಡ (Siddu Jonnalagadda) ವಿಚಾರಕ್ಕೆ ಶ್ರೀನಿಧಿ ಹಾಗೂ ರಾಶಿ ಕಿತ್ತಾಡಿಕೊಂಡಿದ್ದಾರೆ. ಅದು ಕೂಡ ವಿಡಿಯೋ ಕಾಲ್‌ನಲ್ಲಿ. ಹೌದು ನಟ ಸಿದ್ದುಗೆ ವಿಡಿಯೋ ಕಾಲ್ ಮಾಡುವ ಶ್ರೀನಿಧಿ, ರೊಮ್ಯಾಂಟಿಕ್ ಆಗಿ ಮಾತು ಶುರು ಮಾಡಿದ್ದರು. ನಿನ್ನನ್ನ ನೋಡಬೇಕು ಅನಿಸಿತು, ಅದಕ್ಕೆ ಕಾಲ್ ಮಾಡ್ದೆ ಎಂದು ಶ್ರೀನಿಧಿ ನಟನಿಗೆ ಹೇಳಿದರು. ಅದೇ ಸಮಯಕ್ಕೆ ನಟಿ ರಾಶಿ ಖನ್ನಾ ಕೂಡ ಸಿದ್ದುಗೆ ಕಾಲ್ ಮಾಡಿದ್ದು, ಶ್ರೀನಿಧಿ ಕಾಲ್ ಪಕ್ಕಕ್ಕಿಟ್ಟು ರಾಶಿ ಜೊತೆ ಮಾತು ಶುರು ಮಾಡುತ್ತಾರೆ. ಆಗ ರಾಶಿ ಕೂಡ ಸಿದ್ದುಗೆ ಕ್ಲಾಸ್ ತೆಗೆದುಕೊಂಡಿದ್ದರು.

ಏನು ಯಾವಾಗ ನೋಡಿದ್ರೂ ಕಾಲ್ ಬ್ಯುಸಿ ಬರುತ್ತೆ? ಎಂದು ರಾಶಿ ಖನ್ನಾ ಗರಂ ಆಗಿದ್ದರು. ಆದರೆ ಅಲ್ಲಿವರೆಗೆ ನಟ ಸಿದ್ದು ಇಬ್ಬರೂ ನಟಿಯರೊಂದಿಗೆ ಒಬ್ಬರಿಗೆ ಒಬ್ಬರು ತಿಳಿಯದಂತೆ ಮ್ಯಾನೇಜ್ ಮಾಡುತ್ತಿದ್ದರು. ಇಬ್ಬರಿಗೂ ಆಫೀಸ್ ಕಾಲ್ ಎಂದು ಹೇಳಿ ಸಿದ್ದು ಇಬ್ಬರೊಂದಿಗೂ ರೊಮ್ಯಾಂಟಿಕ್ ಆಗಿ ಮಾತು ಶುರು ಮಾಡಿದ್ದರು. ಇದು ಹೆಚ್ಚು ಹೊತ್ತು ನಡೆಯಲಿಲ್ಲ. ಇಬ್ಬರ ಕಾಲ್ ಕೂಡ ಒಟ್ಟಿಗೆ ಕನೆಕ್ಟ್ ಆದ ಕಾರಣ ಸಿದ್ದು ಸಿಕ್ಕಿಬಿದ್ದಿದ್ದಾರೆ.
ಆಗ ಇದೇನಾ ನಿನ್ನ ಅರ್ಜೆಂಟ್ ಕೆಲಸ? ಎಂದು ಶ್ರೀನಿಧಿ ನಟನಿಗೆ ಕೇಳಿದ್ದಾರೆ. ಇದಕ್ಕೇನಾ ಕಾಲ್ ಬ್ಯುಸಿ ಬರ್ತಿತ್ತು? ಎಂದು ರಾಶಿ ಗರಂ ಆಗಿದ್ದಾರೆ. ಆಗ ನನಗೆ ಕಾಲ್ ಮಾಡಿದ್ರೆ ನಿನಗೆ ಏನಾಯ್ತು? ಎಂದು ಶ್ರೀನಿಧಿ ರಾಶಿಗೆ ಕೇಳಿದ್ದಾರೆ. ಆಗ ರಾಶಿ ಕೂಡ ನನ್ನ ಫೋನ್ ಕಟ್ ಮಾಡಿ ಸಿದ್ದು ನಿನಗೆ ಹೇಗೆ ಫೋನ್ ಮಾಡ್ತಾನೆ ಎಂದುಕೊಂಡೆ? ಎಂದು ಗಲಾಟೆ ಶುರು ಮಾಡಿದ್ದಾರೆ. ಅಲ್ಲಿಗೆ ಸುಮ್ಮನಾಗದ ಶ್ರೀನಿಧಿ, ಬೇಕಾದ್ರೆ ನೋಡು ಈಗ ನನಗೆ ಕಾಲ್ ಮಾಡ್ತಾನೆ ಎಂದು ರಾಶಿಗೆ ಸವಾಲ್ ಹಾಕಿದ್ದಾರೆ. ಕೊನೆಗೆ ಮಧ್ಯಪ್ರವೇಶಿಸಿದ ಸಿದ್ದು, ನಾನು ಇಬ್ಬರನ್ನೂ ಲವ್ ಮಾಡ್ತೀನಿ ಎಂದು ಶಾಕ್ ನೀಡಿದ್ದಾರೆ.
ಮೊದಲಿಗೆ ಈ ವಿಡಿಯೋ ನೋಡಿದವರು ನಿಜವಾಗಿಯೂ ಈ ಮೂವರ ನಡುವೆ ತ್ರಿಕೋನ ಪ್ರೇಮಕತೆ ಇದೆ ಎಂದು ಭಾವಿಸಿದ್ದರು. ಆದರೆ ಅಸಲಿ ವಿಚಾರ ಏನಂದ್ರೆ, ಸಿದ್ದು ಹಾಗೂ ಶ್ರೀನಿಧಿ ನಟನೆಯ ಮುಂಬರುವ ಸಿನಿಮಾ ʼತೆಲುಸು ಕದಾʼ ರಿಲೀಸ್ ಘೋಷಣೆಯನ್ನು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications