₹3,50,00,00,000 ಬಜೆಟ್‌ನ ಸಿನಿಮಾ ರಿಜೆಕ್ಟ್ ಮಾಡಿದ ಕತ್ರಿನಾ, ಪ್ರಭಾಸ್ ಇದ್ರೂ ಬೇಡ ಅಂದಿದ್ದೇಕೆ?
ಆ ನಟನ ಜೊತೆ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಎಷ್ಟೋ ನಟಿಯರ ಕನಸು. ಅವರ ಸಿನಿಮಾದಲ್ಲಿ ಒಂದು ಆಫರ್ ಸಿಕ್ಕರೆ ಸಾಕಪ್ಪಾ ಎಂದು ದೇವರಲ್ಲಿ ಬೇಡಿಕೊಳ್ತಾರೆ. ಆದರೆ ಈ ಅದೃಷ್ಟ ಮನೆ ಬಾಗಿಲಿಗೇ ಬಂದ್ರೂ ಬೇಡ ಅಂದಿದ್ದಾರೆ ಖ್ಯಾತ ನಟಿ ಕತ್ರಿನಾ ಕೈಫ್. ಬರೋಬ್ಬರಿ ₹350 ಕೋಟಿ ಬಿಗ್ ಬಜೆಟ್ ಸಿನಿಮಾ ಬೇಡ ಎಂದು ರಿಜೆಕ್ಟ್ ಮಾಡಿದ್ದಾರೆ. ಆರು ತಿಂಗಳ ಕಾಲ ಸತಾಯಿಸಿ ಈ ಸಿನಿಮಾದಲ್ಲಿ ನಟಿಸಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನೆಂಬುದು ಇದೀಗ ಬಹಿರಂಗವಾಗಿದೆ.
ಟಾಲಿವುಡ್ ಟಾಪ್ ನಟರಲ್ಲಿ ಡಾರ್ಲಿಂಗ್ ಪ್ರಭಾಸ್ ಕೂಡ ಒಬ್ಬರು. ಬಾಹುಬಲಿ ಬಳಿಕ ಪ್ರಭಾಸ್‌ಗೆ ಬಾಲಿವುಡ್‌ನಲ್ಲೂ ಫ್ಯಾನ್ಸ್ ಹೆಚ್ಚಾಗಿದ್ದಾರೆ. ಬಾಲಿವುಡ್ ಬ್ಯೂಟಿಗಳು ಪ್ರಭಾಸ್ ಜೊತೆ ನಟಿಸಿ ಮಿಂಚಿದ್ದಾರೆ. ಆದರೆ ಕತ್ರಿನಾ ಕೈಫ್ ಪ್ರಭಾಸ್ ಸಿನಿಮಾದಲ್ಲಿ ನಟಿಸಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು ಎನ್ನಲಾಗಿದೆ. ಪ್ರಭಾಸ್ ನಟನೆಯ "ಸಾಹೋ" ಸಿನಿಮಾದಲ್ಲಿ ಕತ್ರಿನಾ ಕೈಫ್‌ಗೆ ಅವಕಾಶ ಸಿಕ್ಕಿತ್ತು. ಆದರೆ ಅವರು ಸಿನಿಮಾ ರಿಜೆಕ್ಟ್ ಮಾಡಿದ್ದರು.

ಸಾಹೋ ಸಿನಿಮಾಗೆ ಮೊದಲ ಆಯ್ಕೆ ಕತ್ರಿನಾ ಕೈಫ್ ಅವರೇ ಆಗಿದ್ದರು. ಬಾಹುಬಲಿ-2 ರಿಲೀಸ್‌ಗೂ ಮುನ್ನ ಸಾಹೋ ನಿರ್ಮಾಪಕರು ಪ್ರೇಕ್ಷಕರನ್ನು ಆಕರ್ಷಿಸಲು ಪ್ರಭಾಸ್ ಜೊತೆ ಬಾಲಿವುಡ್‌ನ ಕತ್ರಿನಾ ಅವರನ್ನು ತೆರೆ ಮೇಲೆ ತರಬೇಕು ಎಂದು ಪ್ರಯತ್ನಿಸಿದ್ದರು. ಈ ಪಾತ್ರಕ್ಕಾಗಿ ಕತ್ರಿನಾ ಕೈಫ್ ಅವರನ್ನು ಸಂಪರ್ಕಿಸಿದರು. ಆದರೆ ಕತ್ರಿನಾ ಅವರು ನೇರವಾಗಿ ಆಫರ್ ನಿರಾಕರಿಸಿದ್ದರು ಎಂದು ವರದಿಯಾಗಿದೆ.
ಪ್ರಭಾಸ್ ಅವರು ಆಗ ಇನ್ನೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಚ್ಚು ಗುರುತಿಸಿಕೊಳ್ಳದ ಕಾರಣಕ್ಕೆ ಕತ್ರಿನಾ ಅವರು ಸಿನಿಮಾ ರಿಜೆಕ್ಟ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸಾಹೋ ಚಿತ್ರತಂಡವು ಕತ್ರಿನಾ ಅವರಿಗಾಗಿ ಸುಮಾರು ಆರು ತಿಂಗಳ ಕಾಲ ಕಾಯುತ್ತಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಅವರು ಅಂತಿಮವಾಗಿ ಮತ್ತೊಬ್ಬ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡಿತು.

ಬಾಹುಬಲಿ ಬಳಿಕ ಪ್ರಭಾಸ್ ಹವಾ
ಆದರೆ ಬಾಹುಬಲಿ-2 ರಿಲೀಸ್ ಆದ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಿ ಜನಪ್ರಿಯತೆ ಪಡೆದ ನಂತರ ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿದ್ದರು. ಆಗ ಕತ್ರಿನಾ ಕೈಫ್ ಅವರ ತಂಡವು ಸಾಹೋ ಚಿತ್ರತಂಡದವರನ್ನು ಸಂಪರ್ಕಿಸಿ ಹೊಸ ಆಸಕ್ತಿಯನ್ನು ವ್ಯಕ್ತಪಡಿಸಿತ್ತು ಎಂದು ವರದಿಗಳು ಹೇಳಿವೆ.
ಆದರೆ ಆ ಹೊತ್ತಿಗೆ ತನ್ನ ಎಲ್ಲ ಪಾತ್ರವರ್ಗವನ್ನು ಆಯ್ಕೆ ಮಾಡಿತ್ತು, ಪ್ರೊಡಕ್ಷನ್ ಕೆಲಸಗಳು ಕೂಡ ಮುಂದುವರೆದಿತ್ತು. ಹೀಗಾಗಿ ಕತ್ರಿನಾ ಅವರಿಗೆ ಅವಕಾಶ ಕೈತಪ್ಪಿತು ಎನ್ನಲಾಗಿದೆ. ಸುಮಾರು 350 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಸಾಹೋ ಚಿತ್ರವು, ಬಾಹುಬಲಿ ನಂತರದ ಪ್ರಭಾಸ್ ಅವರ ಅಪಾರ ಜನಪ್ರಿಯತೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಬರೋಬ್ಬರಿ 435 ಕೋಟಿ ಕಲೆಕ್ಷನ್ ಕೂಡ ಮಾಡಿತ್ತು. ಆದರೆ ಕತ್ರಿನಾ ಕೈಫ್ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಂಡರು.












Click it and Unblock the Notifications