Karnataka State Film Awards: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಅತ್ಯುತ್ತಮ ನಟ, ನಟಿ ಯಾರು?
Karnataka State Film Awards: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡ ಚಿತ್ರರಂಗದಲ್ಲಿ 2021ನೇ ಸಾಲಿನ ಅತ್ಯುತ್ತಮ ನಟ, ನಟಿ, ಸಿನಿಮಾ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳು ಅನೌನ್ಸ್ ಆಗಿವೆ. "ಚಾರ್ಲಿ 777" ಚಿತ್ರಕ್ಕಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. "ಮ್ಯೂಟ್" ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಅರ್ಚನಾ ಜೋಯಿಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಣೆಯಾಗಿದೆ.
ಅತ್ಯುತ್ತಮ ಚಿತ್ರಗಳ ವಿಭಾಗದಲ್ಲಿ ವಿವಿಧ ಸಿನಿಮಾಗಳಿಗೆ ಪ್ರಶಸ್ತಿ ಸಿಕ್ಕಿದೆ. ರಘು ಕೆ.ಎಂ.ನಿರ್ದೇಶನದ "ದೊಡ್ಡಹಟ್ಟಿ ಬೋರೇಗೌಡ" ಮೊದಲನೇ ಅತ್ಯುತ್ತಮ ಚಿತ್ರವಾಗಿದೆ. ಕಿರಣ್ ರಾಜ್ ನಿರ್ದೇಶನದ "ಚಾರ್ಲಿ-777" ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಹೃದಯಶಿವ ನಿರ್ದೇಶನದ "ಬಿಸಿಲು ಕುದುರೆ" ಸಿನಿಮಾಗೆ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ.

ಪುನೀತ್ ಸಿನಿಮಾಗೆ ಪ್ರಶಸ್ತಿ
ನಟ ಪುನೀತ್ ರಾಜ್‌ಕುಮಾರ್ ಅವರ "ಯುವರತ್ನ" ಸಿನಿಮಾಗೆ ಕೂಡ ಪ್ರಶಸ್ತಿ ಲಭಿಸಿದೆ. ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಅತ್ಯುತ್ತಮ ಮನರಂಜನಾ ಚಿತ್ರ ಎಂಬ ಪ್ರಶಸ್ತಿ ಬಾಚಿಕೊಂಡಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಅಡಿಯಲ್ಲಿ ನಮ್ಮ ಯುವರತ್ನ ಚಿತ್ರಕ್ಕೆ 'ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ' ಪ್ರಶಸ್ತಿ ಲಭಿಸಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ಹೇಳಿದೆ. ಯುವರತ್ನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಗೌರವ. ಈ ಪ್ರಶಸ್ತಿ ನನ್ನ ಅಪ್ಪು ಅಣ್ಣನಿಗೆ, ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಜನತೆಗೆ ಅರ್ಪಣೆ ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹೇಳಿದ್ದಾರೆ.
"ರತ್ನನ್ ಪ್ರಪಂಚ" ಸಿನಿಮಾದ ಅಭಿನಯಕ್ಕಾಗಿ ಪ್ರಮೋದ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಿರಿಯ ನಟಿ ಉಮಾಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. "ಬಿಸಿಲು ಕುದುರೆ" ಸಿನಿಮಾದ ಸಂಗೀತಕ್ಕಾಗಿ ಇಮ್ತಿಯಾಜ್ ಸುಲ್ತಾನ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಸಿಕ್ಕಿದೆ. "ಕೇಕ್" ಸಿನಿಮಾದ ನಟನೆಗೆ ಮಾಸ್ಟರ್ ಅತೀಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಹಾಗೂ "ಭೈರವಿ" ಸಿನಿಮಾದ ಅಭಿನಯಕ್ಕೆ ಬೇಬಿ ಭೈರವಿಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಘೋಷಣೆಯಾಗಿದೆ.
ಯಾರಿಗೆ ಯಾವ ಪ್ರಶಸ್ತಿ?
* ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಪ್ರಶಸ್ತಿ: ಭಾರತದ ಪ್ರಜೆಗಳಾದ ನಾವು
* ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ: ಕೇಕ್
* ಅತ್ಯುತ್ತಮ ಚೊಚ್ಚಲ ನಿರ್ದೇಶನ' ಪ್ರಶಸ್ತಿ: ಶಂಕರ್ ಗುರು (ಬಡವ ರಾಸ್ಕಲ್)
* ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ: ಕೊಡವ ಭಾಷೆಯ "ನಾಡ ಪೆದ ಆಶಾ"
* ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ: ಸಹನಾ ಎಂ.ಭಾರದ್ವಾಜ್
* ಅತ್ಯುತ್ತಮ ಹಿನ್ನೆಲೆ ಗಾಯಕ: ಅನೀಶ್ ಕೇಶವ ರಾವ್
* ಅತ್ಯುತ್ತಮ ಕಲಾ ನಿರ್ದೇಶನ: ರವಿ ಸಂತೇಹಕ್ಲು (ಭಜರಂಗಿ 2)
* ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ (777 ಚಾರ್ಲಿ)
* ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಕುಮಾರ್ (ಪೊಗರು)
* ಅತ್ಯುತ್ತಮ ಸಂಕಲನ: ಪ್ರತೀಶ್ ಶೆಟ್ಟಿ (777 ಚಾರ್ಲಿ)
* ಅತ್ಯುತ್ತಮ ಕಥೆ: ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು)
* ಅತ್ಯುತ್ತಮ ವಸ್ತ್ರ ವಿನ್ಯಾಸ: ಯೋಗಿ ಜಿ ರಾಜು (ಭಜರಂಗಿ 2)
* ಅತ್ಯುತ್ತಮ ಚಿತ್ರ: ಭೈರವಿ
* ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ತಾಯಿ ಕಸ್ತೂರಿ ಗಾಂಧಿ)












Click it and Unblock the Notifications