Karna Serial: ಕರ್ಣ ಸೀರಿಯಲ್: ನಿಧಿ ಕುಟುಂಬದ ರಹಸ್ಯ ಬಯಲು ? ಕರ್ಣ ಕೈಗೆ ಸಿಕ್ಕ ಫೋಟೋ ಬದಲಿಸಲಿದೆ ಕಥೆಯ ದಿಕ್ಕು!

Karna Serial: ಕರ್ಣ ಸೀರಿಯಲ್ ಹೊಸ ತಿರುವು ಪಡೆದುಕೊಂಡಿದ್ದು, ಡಾಕ್ಟರ್ ಕರ್ಣ ಇದೀಗ ಇನ್ವೆಸ್ಟಿಗೇಷನರ್ ಆಗಿ ಬದಲಾಗಿದ್ದಾರೆ. ಮತ್ತೊಂದು ಕಡೆ ನಿಧಿಗೆ ಅಮ್ಮನ ನೆನಪಿನ ಪವಿತ್ರ ತಾಳಿ ಸಿಕ್ಕಿರುವಂತೆ ತೋರಿಸಲಾಗಿದೆ. ನಿಧಿಗೆ ನಾನು ಕೊನೆಯ ವರೆಗೂ ಕಾಯುತ್ತೇನೆ ಎಂದು ಕರ್ಣ ಮಾತು ಕೊಟ್ಟಿದ್ದಾನೆ.

ನಿಧಿ ಕುಟುಂಬ ಮತ್ತು ರಮೇಶ್ ನಡುವಿನ ನಿಗೂಢ ಸಂಬಂಧ ಕರ್ಣನ ಎದುರು ಬಯಲು ಎನ್ನುವ ಸಾಲುಗಳೊಂದಿಗೆ ಜೀ ಕನ್ನಡದಲ್ಲಿ ಹೊಸ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ನಿಧಿ ಕುಟುಂಬ ಮತ್ತು ರಮೇಶ್ ನಡುವಿನ ನಿಗೂಢ ಸಂಬಂಧವನ್ನು ಪತ್ತೆ ಮಾಡುವುದಕ್ಕೆ ಕರ್ಣ ಸಿದ್ಧತೆ ಮಾಡಿರುವಂತೆ ತೋರಿಸಲಾಗಿದೆ. ಸ್ಟುಡಿಯೋವೊಂದಕ್ಕೆ ಭೇಟಿ ನೀಡುವ ಕರ್ಣ, ಹಳೆಯ ಕ್ಯಾಮೆರಾದಲ್ಲಿನ ರೀಲ್ ಡೆವಲಪ್ ಮಾಡುವಂತೆ ಕೇಳಿದ್ದಾನೆ. ಈ ಕ್ಯಾಮೆರಾದಲ್ಲಿನ ಫೋಟೋ ಡೆವಲಪ್ ಮಾಡಬಹುದಾ ಅಂತ ಕರ್ಣ ಕೇಳಿದ್ದಾನೆ. ಇದಕ್ಕೆ ಸ್ಟುಡಿಯೋದವರು, ಏನಪ್ಪ ಇದು ನಮ್ಮ ಕಾಲದ್ದು ಇದನ್ನು ನೋಡಿ ತುಂಬಾ ಖುಷಿ ಆಯ್ತು. ಈ ಕ್ಯಾಮೆರಾಗೆ ವಯಸ್ಸಾಗಿದೆ. ಫಂಗಸ್ ಆಗಿ ಫೋಟೋ ರಿಕವರಿ ಆಗುವುದು ತುಂಬಾ ಕಷ್ಟ. ನಾನು ಪ್ರಯತ್ನಿಸುತ್ತೇನೆ ಅಂತ ಹೇಳಿದ್ದಾರೆ.

Karna Serial

ಕಷ್ಟಪಟ್ಟು ಕೆಲವೊಂದು ಫೋಟೋಗಳನ್ನು ಸ್ಟುಡಿಯೋದವರು ಡೆವಲಪ್ ಮಾಡಿಕೊಟ್ಟಿದ್ದಾರೆ. ಇದರಲ್ಲಿ ತುಂಬಾ ಫೋಟೋಗಳು ಡೆಡ್ ಆಗಿವೆ. ಕೆಲವೊಂದು ಫೋಟೋಗಳನ್ನು ರಿಕವರಿ ಮಾಡಿದ್ದೇನೆ ಅಂತ ಕೆಲವೊಂದು ಫೋಟೋಗಳನ್ನು ಕೊಟ್ಟಿದ್ದಾರೆ. ಇದನ್ನೆಲ್ಲ ನಿಧಿ ಗೋಸ್ಕರ ಪ್ರಿಂಟ್‌ ಮಾಡಿಸಿದೆ ಅಷ್ಟೇ ಎನ್ನುತ್ತಲ್ಲೇ ಕುತೂಹಲದಿಂದಲೇ ಫೋಟೋಗಳನ್ನು ತೆಗೆದ ನೋಡಿದ್ದಾನೆ. ಫೋಟೋಗಳನ್ನು ನೋಡಿದ ಕರ್ಣಗೆ ಶಾಕ್ ಎದುರಾಗಿದೆ. ಫೋಟೋದಲ್ಲಿ ಕರ್ಣ ಅವರ ತಂದೆ - ಮುನಿಯಪ್ಪ ಇರುವುದು ಇದೆ. ಮುನಿಯಪ್ಪ ಹಾಗೂ ಕರ್ಣ ಅವರ ತಂದೆ ಒಂದೇ ಫೋಟೋದಲ್ಲಿ ಇರುವುದನ್ನು ನೋಡಿ ಕರ್ಣ ಬೆಚ್ಚು ಬಿದ್ದಿದ್ದಾನೆ. ಎಲ್ಲ ಫೋಟೋದಲ್ಲಿ ಅಪ್ಪ ಇರುವುದಕ್ಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕರ್ಣಗೆ ಎದುರಾಗಿದೆ. ಅದರಲ್ಲಿ ಅಸ್ಪಷ್ಟವಾದ ಲೇಡಿ ಫೋಟೋ ಸಹ ಇದೆ.

ಮುನಿಯಪ್ಪ ಲೆಟರ್ ಕೊಟ್ಟಿದ್ದರಿಂದ ನಿಧಿ ಅವರ ಅಪ್ಪ - ಅಮ್ಮ ಅವರ ನಿಗೂಢ ಸಾವಿನ ಬಗ್ಗೆ ಗೊತ್ತಾಗಿದೆ. ಆದರೆ ಈಗ ಈ ಫೋಟೋಗಳು ಸಿಕ್ಕಿವೆ. ಈ ಫೋಟೋದಲ್ಲಿ ಮುನಿಯಪ್ಪ ಹಾಗೂ ಅಪ್ಪ ಇಬ್ಬರು ಇದ್ದಾರೆ. ಈ ಕ್ಯಾಮೆರಾ ಸಿಕ್ಕಿದ್ದು ಮಾರಿಗುಡಿಯಲ್ಲಿ. ನಿಧಿ ಕುಟುಂಬಕ್ಕೂ ನಮ್ಮ ಅಪ್ಪನಿಗೂ ಏನು ಸಂಬಂಧ ? ಇದರ ಹಿಂದೆ ಏನೋ ರಹಸ್ಯ ಇದೆ ಅಂತ ಕರ್ಣ ಹೇಳಿದ್ದಾನೆ. ಹೀಗಾಗಿ, ಮುಂದೆ ಹೊಸ ವಿಲನ್‌ನ ಪರಿಚಯ, ಕರ್ಣನ ಇನ್ವೆಸ್ಟಿಗೇಷನ್ ಪ್ರಾರಂಭವಾಗಲಿದೆ ಅಂತ ವೀಕ್ಷಕರು ಅಂದಾಜಿಸಿದ್ದಾರೆ.

ತಾಳಿ ಬೊಟ್ಟು ಖರೀದಿ ಮಾಡುವುದಕ್ಕೆ ಜ್ಯುವಲರಿಗೆ ನಿಧಿ - ಕರ್ಣ ಹಾಗೂ ಇಬ್ಬರು ಅಜ್ಜಿಯರು ಹೋಗಿದ್ದಾರೆ. ಆಗ ತಂದೆ - ತಾಯಿಯ ಬಗ್ಗೆ ನೆನಪಿಸಿಕೊಂಡು ನಿಧಿ ಕಣ್ಣೀರು ಹಾಕಿದ್ದಾಳೆ. ನನಗೆ ಹಿರಿಯರಿಂದ ಈ ರೀತಿ ಗಿಫ್ಟ್‌ ಸಿಕ್ಕಿಲ್ಲ ಅಂತ ನಿಧಿ ಅವರ ಅಜ್ಜಿ ಹೇಳಿದ್ದಾರೆ.

ನಮ್ಮ ಹೆಂಡ್ತಿಗೆ ಸಮಾಧಾನ ಮಾಡೋದು ಹೇಗೆ ಅಂತ ನನಗೆ ಗೊತ್ತು ಅಂತ ಕರ್ಣ ಹೇಳಿದ್ದಾನೆ. ನಿಧಿ ಬಳಿ, ಅಜ್ಜಿಗೆ ಅವರ ಮಗ - ಸೊಸೆ ಸಾವು ಹೇಗೆ ಸಂಭವಿಸಿತು ಎನ್ನುವ ಸತ್ಯ ಗೊತ್ತಾಗುವುದು ಬೇಡ. ನೀವು ಧೈರ್ಯವಾಗಿರಿ, ನಿಮ್ಮ ಅಪ್ಪ ಅಮ್ಮನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ಎಂದು ನಿಧಿಗೆ ಕರ್ಣ ಧೈರ್ಯ ತುಂಬಿದ್ದಾನೆ. ಗಂಡನ ಮಾತಿಗೆ ನಿಧಿ ಕರಗೋಗಿದ್ದಾಳೆ ಅಂತ ಕರ್ಣ ಅಜ್ಜಿ ಹೇಳಿದ್ದಾರೆ. ನಿಧಿ ಚಿನ್ನದ ಬೊಟ್ಟನ್ನು ಆಯ್ಕೆ ಮಾಡುವಂತೆ ಕರ್ಣನಿಗೆ ಹೇಳಿದ್ದಾಳೆ. ನಿಮ್ಮ ಅಮ್ಮ ಈ ಸರ ಕೊಟ್ಟಿದ್ದಾರೆ. ನೀವು ಜೀವನ ಪೂರ್ತಿ ಹೆಮ್ಮೆಯಿಂದ ಹಾಕಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ನನದು ಅಂತ ಕರ್ಣ ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+