'ಕರಿಮಣಿ' ಧಾರಾವಾಹಿ ನಿರ್ದೇಶಕ ವಿನೋದ್ ಧೋಂಡಾಳೆ ಆತ್ಮಹತ್ಯೆ
ಕನ್ನಡ ಕಿರುತೆರೆ, ಸಿನಿಮಾ ರಂಗಕ್ಕೆ ಒಂದರ ಹಿಂದೆ ಒಂದು ಆಘಾತಗಳು ಎದುರಾಗುತ್ತಲೇ ಇದೆ. ಹಲವು ನಟ, ನಟಿಯರು ಸಾವು, ವಿವಾದ, ವಿಚ್ಛೇದನಗಳಿಂದ ಜರ್ಝರಿತವಾಗಿದ್ದ ಕನ್ನಡ ಮನರಂಜನಾ ರಂಗಕ್ಕೆ ಈಗ ನಿರ್ದೇಶಕನ ಆತ್ಮಹತ್ಯೆ ಮತ್ತೊಂದು ಶಾಕ್ ಕೊಟ್ಟಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಯಶಸ್ಸು ಕಾಣುತ್ತಿರುವ 'ಕರಿಮಣಿ' ಧಾರವಾಹಿ ನಿರ್ದೇಶಕ ವಿನೋದ್ ಧೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಗರಭಾವಿಯಲ್ಲಿರುವ ತಮ್ಮ ನಿವಾಸದಲ್ಲೇ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿನೋದ್ ಧೋಂಡಾಳೆ ಅವರ ಮೃತದೇವಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಪೊಲೀಸರ ತನಿಖೆಯ ನಂತರ ತಿಳಿಯಲಿದೆ.
ಸಿನಿಮಾ ಚಿತ್ರೀಕರಣವೂ ಬಾಕಿ
ವಿನೋದ್ ಧೋಂಡಾಳೆ ಅವರ ನಿರ್ದೇಶನದ ಸತೀಶ್ ನೀನಾಸಂ ನಟನೆಯ ಅಶೋಕ್ ಬ್ಲೇಡ್ ಸಿನಿಮಾದ ಚಿತ್ರೀಕರಣ ಇನ್ನೂ ಬಾಕಿ ಇದೆ. ಕೊನೆಯ ಹಂತದ ಚಿತ್ರೀಕರಣ ಬಾಕಿ ಇರುವಾಗಲೇ ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡಿರುವುದು ಚಿತ್ರತಂಡಕ್ಕೆ ಆಘಾತ ತಂದಿದೆ.
ಶುಕ್ರವಾರ ನಾಯಕ ನೀನಾಸಂ ಸತೀಶ್ ಮತ್ತು ನಿರ್ಮಾಪಕರ ಜೊತೆಗೆ ಚಿತ್ರೀಕರಣದ ಬಗ್ಗೆ ವಿನೋದ್ ಧೋಂಡಾಳೆ ಚರ್ಚೆ ಮಾಡಿದ್ದರು ಎಂದು ವರದಿಯಾಗಿದೆ. ಶುಕ್ರವಾರ ತಾನೆ ಚಿತ್ರೀಕರಣದ ಬಗ್ಗೆ ಮಾತನಾಡಿದ್ದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿನೋದ್ ದೊಂಡಳೆ ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications