Toxic Update: ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸೋದು ಪಕ್ಕಾ; ಆದರೆ ನಾಯಕಿ ಅವರಲ್ಲ!
ಡಿಸೆಂಬರ್ 8, 2023ರಂದು ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾದ ಟೈಟಲ್ ಅನೌನ್ಸ್ ಮಾಡಲಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ. ಸಿನಿಮಾ ಟೈಟಲ್ ಘೋಷಣೆಯಾಗಿ ಮೂರು ತಿಂಗಳು ಮುಗಿದರೂ ಸಿನಿಮಾದ ಬಗ್ಗೆ ಮತ್ಯಾವ ಅಪ್‌ಡೇಟ್ ಕೂಡ ಸಿಕ್ಕಿಲ್ಲ.
ಯಶ್ ಅಭಿಮಾನಿಗಳು ಟಾಕ್ಸಿಕ್ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರೂ, ವಿಶ್ವ ದರ್ಜೆಯ ಸಿನಿಮಾ ಮಾಡಲು ಯಶ್ ತಲೆ ಕೆಡಿಸಿಕೊಂಡಿರುವ ಕಾರಣ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸುವ ವದಂತಿ ಇತ್ತು, ಈಗ ಅದು ಬಹುತೇಕ ಖಚಿತವಾಗಿದೆ.

ಹೌದು, ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸುತ್ತಿದ್ದು, ಬಾಲಿವುಡ್‌ನಿಂದ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಬರುತ್ತಿದ್ದಾರೆ. ಇದರ ಅಧಿಕೃತ ಘೋಷಣೆ ಬಾಕಿ ಇದೆ. ಆದರೆ ಕರೀನಾ ಕಪೂರ್ ಟಾಕ್ಸಿಕ್ ಸಿನಿಮಾದ ನಾಯಕಿಯಲ್ಲ, ಬದಲಾಗಿ ಅವರು ಯಶ್ ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಮುಖ್ಯ ಪಾತ್ರದಲ್ಲಿ ಕರೀನಾ
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅಕ್ಕನಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದು, ಅವರ ಪಾತ್ರ ಸಖತ್ ಪವರ್ ಫುಲ್ ಎಂದು ಹೇಳಲಾಗಿದೆ. ಟಾಕ್ಸಿಕ್ ಒಂದು ಅಕ್ಕ-ತಮ್ಮನ ಬಾಂಧವ್ಯದ ಕಥೆ ಎಂದು ಕೂಡ ಹೇಳಲಾಗುತ್ತಿದೆ. ಕರೀನಾ ಕಪೂರ್ ಕೂಡ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಲವು ತಿಂಗಳ ಹಿಂದೆಯೇ ಅವರು ದೊಡ್ಡ ಸಿನಿಮಾದಲ್ಲಿ ನಟಿಸುವ ಸೂಚನೆ ನೀಡಿದ್ದರು, ಈಗ ಅದು ಖಚಿತವಾಗಿದ್ದು ಅಧಿಕೃತ ಘೋಷಣೆ ಬಾಕಿ ಇದೆ.
ನಾಯಕಿಯಾಗಿ ಕಿಯಾರಾ ಅಡ್ವಾಣಿ?
ಸಿನಿಮಾದಲ್ಲಿ ನಾಯಕಿ ಯಾರು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದ್ದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಯಶ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಟೈಮ್ಸ್ ನೌ ವರದಿಯಲ್ಲಿ ತಿಳಿಸಿದೆ. ಕಿಯಾರಾ ಅಡ್ವಾಣಿ ಅವರಿಗೂ ಇದು ಮೊದಲ ಕನ್ನಡ ಸಿನಿಮಾ ಆಗಲಿದೆ. ಅವರು ಈಗಾಗಲೇ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವರದಿಗಳ ಪ್ರಕಾರ ಶೃತಿ ಹಾಸನ್, ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಶೂಟಿಂಗ್ ಯಾವಾಗ ಶುರು?
ಹಾಗಾದ್ರೆ ಸಿನಿಯಾ ಶೂಟಿಂಗ್ ಯಾವಾಗ ಎನ್ನುವ ಕುತೂಹಲ ಇದೆ. ಕೆಲ ದಿನಗಳ ಹಿಂದೆ ನಟ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಕಾಣಿಸಿಕೊಂಡಿದ್ದರು. ಗಾಂಧಿನಗರದ ಮೂಲಗಳ ಪ್ರಕಾರ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಶೀಘ್ರದಲ್ಲೇ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್ ಸಿಗುವ ಸಾಧ್ಯತೆ ಇದೆ. ಏಪ್ರಿಲ್ 10, 2025ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.












Click it and Unblock the Notifications