ಹಿತ್ತಲಕ ಕರಿಬ್ಯಾಡ ಮಾವ..: ಹಿತ್ತಲ ಅಂದ್ರೇನು? ಅಲ್ಲಿ ಹುಡುಗ-ಹುಡುಗಿ ಕದ್ದು ಮುಚ್ಚಿ ಏನೆಲ್ಲಾ ಮಾಡ್ತಾರೆ?
ಮಾರ್ಚ್ 8ರಂದು ಶಿವರಾತ್ರಿ ಹಬ್ಬ ಇದ್ದು, ಈ ದಿನದಂದೇ ಹಲವು ಸಿನಿಮಾಗಳು ಬಿಡುಗಡೆಯಾಗಲಿದೆ. ಇನ್ನೂ ಇದೇ ನಟ ಶಿವರಾಜ್‌ಕುಮಾರ್, ಪ್ರಭುದೇವ್ ನಟನೆಯ "ಕರಟಕ ದಮನಕ" ಎಂಬ ಚಿತ್ರವೂ ಕೂಡ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಈ ಚಿತ್ರ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಈ ಸಿನಿಮಾದಲ್ಲಿ ಉತ್ತರ ಕರ್ನಾಟಕ ಶೈಲಿಯ ಹಾಡೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಹಾಗಾದರೆ ಆ ಆಡು ಯಾವುದು?, ಇದರಲ್ಲಿ ಏನೆಲ್ಲ ಅರ್ಥಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹಿತ್ತಲ ಅಂದ್ರೇನು?: ಮಾಲು ನಿಪನಾಳ, ಶ್ರುತಿ ಪ್ರಹ್ಲಾದ ಹಾಡಿರುವ "ಹಿತಲಾಗ ಕರಿಬೇಡ ಮಾವ ಬಲು ನಾಚಿಕೆ ಆಗುತೈತಿ".. ಬಚ್ಚಿಕೊಂಡು ನಿಲ್ಲಬೇಡ ಮಾವ ಎದೆ ಗಾಬರಿ ಆಗತೈತಿ ಎನ್ನುವ ಉತ್ತರ ಕರ್ನಾಟಕ ಶೈಲಿಯ ಹಾಡು ಇದೀಗ ಭಾರೀ ಸದ್ದು ಮಾಡುತ್ತಿದೆ. ಇನ್ನು ಹಿತ್ಲ್ ಬಗ್ಗೆ ಯೋಗರಾಜ ಭಟ್ರು ಕೇಳಿದಾಗ ಗಾಯಕ ಮಾಲು ನಿಪನಾಳ ಹೇಳ್ತಾರೆ, ನಿಮ್ಮೆ ಕಡೆ ಪಾರ್ಕ್ ಅಂತಾರೆ, ನಮ್ ಕಡೆ ಹಿತ್ಲ್ ಅಂತಾರೆ ಅಷ್ಟೇ ಸರ್ ಎಂದು ಹೇಳುತ್ತಾರೆ.

ಪಾರ್ಕ್ ಹಾಗೂ ಹಿತ್ಲಿಗೂ ಏನು ವ್ಯತ್ಯಾಸ?: ಹಳ್ಳಿ ಕಡೆ ಹಿತ್ಲ್ ಅಂದ್ರೆ ವಿಶಾಲವಾದ ಜಾಗ, ವಿಶ್ರಾಂತಿ ಪಡೆದುಕೊಳ್ಳುವ ಜಾಗವಾಗಿದೆ. ಇಲ್ಲಿಗೆ ಕೆಲವು ಜನ ವಶ್ರಾಂತಿಗೆಂದು ಬಂದ್ರೆ, ಇನ್ನೂ ಕೆಲವು ಹುಡುಗ-ಹುಡುಗಿಯರು ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳಲು ಬರುತ್ತಾರೆ. ಇನ್ನು "ನಮ್ಮ ಬೆಂಗಳೂರಿನಲ್ಲೂ ದೊಡ್ಡ ಪಾರ್ಕ್‌ಗಳಿವೆ. ಅಲ್ಲೂ ಕೂಡ ಹಿತ್ಲಗೆ ಏನೆಲ್ಲ ಮಾಡ್ತಾರೋ ಇಲ್ಲಿ ಅದನ್ನೇ ಮಾಡ್ತಾರೆ. ಅಂದ್ರೆ ಪಾರ್ಕ್‌ನಲ್ಲಿ ನಡೆಯುವಂತಹ ಸಮಾಚಾರಗಳು ಹಿತ್ನಲ್ಲಿ ನಡೆಯುತ್ತವೆ ಅಂತಾ," ಭಟ್ರು ಮುಗುಳ್ನಗುತ್ತಾ ಹೇಳ್ತಾರೆ.
ಸಾಮಾನ್ಯವಾಗಿ ನಗರ ಪ್ರದೇಶ ಅಂದ್ಮೇಲೆ ಪಾರ್ಕ್‌ಗಳು ಏರಿಯಾಕ್ಕೊಂದು-ಎರಡರಂತೆ ಇದ್ದೇ ಇರುತ್ತವೆ. ಇಲ್ಲಿ ಬೆಳಗ್ಗೆ ಆದರೆ ಸಾಕು ವ್ಯಾಯಾಮ ಮಾಡುವ ಅಜ್ಜ, ಅಜ್ಜಂದಿರೇ ಹೆಚ್ಚಾಗಿ ಕಂಡುಬರುತ್ತಾರೆ. ಈ ವೇಳೆ ಕೆಲವೇ ಕೆಲವು ಮಂದಿ ಮಾತ್ರ ಯುವಕ, ಯುವತಿಯರು ವಾಕ್ ಮಾಡುತ್ತಿರುತ್ತಾರೆ. ಇನ್ನು ಮಧ್ಯಾಹ್ನ ಕಾಲೇಜು ಹುಡುಗ-ಹುಡುಗಿಯರದ್ದೇ ದರ್ಬಾರ್ ಆಗಿರುತ್ತದೆ. ಹಾಗೆಯೇ ಸಂಜೆ ಆಯಿತೆಂದರೆ ಸಾಕು ಮತ್ತೊಂದು ರೀತಿಯ ಗುಂಪು ಪಾರ್ಕ್‌ನಲ್ಲಿ ಕಾಣಬಹುದು. ಇದನ್ನೇ ಹಳ್ಳಿ ಕಡೆ ಹಿತ್ಲು ಎನ್ನುತ್ತಾರೆ.
ಗಾಯಕಿ ಯವ್ವ ಆಗವಲ್ಲ, ಆಗವಲ್ದ ನನಗಾ.. ನಿನ್ನ ಬೆಳ್ಳಿನ ಚಕ್ಕರಗುಳ್ಳಿ ಎಂದು ಹಾಡಿದ್ರೆ. ಗಾಯಕ ಏನ್ಮಾಡ್ಲಿ ಕಡಿತೈತಿ ಹೃದಯ.. ನಾ ನಂಬರ್ 1 ಪೀತರ್‌ಪಿಲ್ಲಿ. ತುಟಿಗೆ ತುಟಿ ಹಚ್ಚಿ ಮಾಡ್ಲೇನಾ ವೆಲ್ಡಿಂಗಾ ಎಂದು ಹಾಡುತ್ತಾರೆ. ಈ ಸಾಲು ಬಹುತೇಕ ಮಂದಿಯನ್ನು ನಾಚಿ ನೀರಾಗುವಂತೆ ಮಾಡಿರುವುದಂತೂ ಸತ್ಯ.
"ಪೀತರ್‌ಪಿಲ್ಲಿ ಎಂಬ ಪದವನ್ನು ಹಳ್ಳಿ ಕಡೆ ಪುಡಾರಿಗಳಿಗೆ, ಪೋಕರಿಗಳಿಗೆ ಕರೀತಾರೆ. ನನಗೂ ಕೂಡ ಊರಿಗೆ ಹೋದಾಗ ಪೀತರ್‌ಪಿ ಮಗ ಬಂದ ಎಂದು ಕರೆಯುತ್ತಿದ್ದರು," ಅಂತಾ ಭಟ್ರು ಹೇಳಿದಾಗ ಗಾಯಕಿ ಶ್ರುತಿ ಪ್ರಹ್ಲಾದ ನಕ್ಕು ನಕ್ಕು ಸಾಕಾಗಿಬಿಡುತ್ತಾರೆ.
ಹಳ್ಳಿಗಳ ಕಡೆ ಅದರಲ್ಲೂ ಉತ್ತರ ಕರ್ನಾಟಕದ ಜನರ ಮಾತುಗಳು ಎಂಥವರನ್ನು ಆಯಸ್ಕಾಂತದಂತೆ ಆಕರ್ಷಿಸಿಬಿಡುತ್ತವೆ. ಈಕಡೆ ಶೈಲಿಯ ಹಾಡುಗಂಳಂತೂ ಫುಲ್ ಫೇಮಸ್ ಆಗಿಬಿಡುತ್ತವೆ. ಇದೀಗ ಮಾರ್ಚ್ 8ರಂದು "ಕರಟಕ ದಮನಕ" ಸಿನಿಮಾ ರಿಲೀಸ್ ಆಗಲಿದೆ. ಇನ್ನು ಇದಕ್ಕೂ ಮುನ್ನ ಈ ಸಿನಿಮಾದ "ಹಿತಲಾಗ ಕರಿಬೇಡ ಮಾವ ಬಲು ನಾಚಿಕೆ ಆಗುತೈತಿ" ಎನ್ನುವ ಹಾಡು ರಾಜ್ಯದ ಜನರ ಕುತೂಹಲ ಕೆರಳಿಸುವಂತೆ ಮಾಡಿದೆ. ಈಗಲೇ ಇಷ್ಟು ಸದ್ದು ಮಾಡುತ್ತಿರುವ ಈ ಹಾಡು ಸಿನಿಮಾ ರಿಲೀಸ್ ವೇಳೆ ಇನ್ನೆಷ್ಟು ಫೇಮಸ್ ಆಗಲಿದೆ ಎನ್ನುವ ಕುತೂಹಲ ಇದೆ.












Click it and Unblock the Notifications