ಕಾಂತಾರ ಚಾಪ್ಟರ್-1 ಟ್ರೈಲರ್ ಬರೋಬ್ಬರಿ 107 ಮಿಲಿಯನ್ ವೀಕ್ಷಣೆ, ಏನೆಲ್ಲ ದಾಖಲೆ?
Kantara Chapter 1: ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಒಂದೇ ದಿನದಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದೆ. ರಿಷಬ್ ತಾವೇ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮೊದಲ ಕಾಂತಾರ ಸಿನಿಮಾಗಿಂತಲೂ ಪ್ರೀಕ್ವೆಲ್ ಅನ್ನು ಅದ್ಧೂರಿ ಮೇಕಿಂಗ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ನಿನ್ನೆಯಷ್ಟೇ ರಿಲೀಸ್ ಆದ ಕಾಂತಾರ ಚಾಪ್ಟರ್-1 ಸಿನಿಮಾದ ಟ್ರೇಲರ್ ಒಂದೇ ದಿನದಲ್ಲಿ ಬರೋಬ್ಬರಿ 107 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ.
ನಿನ್ನೆ ಟ್ರೇಲರ್ ರಿಲೀಸ್ ಆದ ಒಂದೇ ದಿನದಲ್ಲಿ 55 ಮಿಲಿಯಲ್‌ಗೂ ಹೆಚ್ಚು ಡಿಜಿಟಲ್ ವೀಕ್ಷಣೆ ಪಡೆಯುವ ಮೂಲಕ ದಾಖಲೆ ಬರೆದಿತ್ತು. ಕಾಂತಾರ ಅಧ್ಯಾಯ 1ರ ಕಿಡಿ ಇಂಟರ್ನೆಟ್ ಅನ್ನು ಸಹ ಹೊತ್ತಿಸಿದೆ. 'ಕಾಂತಾರ: ಅಧ್ಯಾಯ 1' ಟ್ರೇಲರ್ ನಿನ್ನೆ ಬಿಡುಗಡೆಯಾದ ಕೆಲವೇ 24 ಗಂಟೆಗಳಲ್ಲಿ 107 ಮಿಲಿಯನ್ ವೀಕ್ಷಣೆ ಮತ್ತು 3.4 ಮಿಲಿಯನ್ ಲೈಕ್‌ಗಳೊಂದಿಗೆ ಭಾರೀ ದಾಖಲೆ ಬರೆದಿದೆ. ಈ ಟ್ರೈಲರ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಚಿತ್ರವು 24 ಗಂಟೆಗಳಲ್ಲಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 107 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಟ್ರೇಲರ್‌ನ ಎಲ್ಲ ಆವೃತ್ತಿಗಳು 3.5 ಮಿಲಿಯನ್ ಲೈಕ್‌ಗಳನ್ನು ಪಡೆದಿವೆ. ಈ ಮೂಲಕ ಟ್ರೈಲರ್‌ನಲ್ಲೇ ಕಾಂತಾರ ಧೂಳೆಬ್ಬಿಸುತ್ತಿದೆ.
ರಿಷಬ್ ಶೆಟ್ಟಿ ಬರೆದು-ನಿರ್ದೇಶಿಸಿದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಪ್ರೀಕ್ವೆಲ್ ಟ್ರೇಲರ್ ಕನ್ನಡ ಚಿತ್ರರಂಗದಲ್ಲಿ ಹೊಸ ಉತ್ಸಾಹವನ್ನು ತಂದಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಚಿತ್ರವು 2025ರ ಅಕ್ಟೋಬರ್ 2ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ದಾಖಲೆ ಟ್ರೇಲರ್ ಬಿಡುಗಡೆಯೊಂದಿಗೆ 'ಕಾಂತಾರ: ಅಧ್ಯಾಯ 1' ಈಗಾಗಲೇ ಪ್ಯಾನ್-ಇಂಡಿಯಾ ಹೈಪ್ ಸೃಷ್ಟಿಸಿದೆ. ಹಾಗೂ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಪಾತ್ರಕ್ಕಾಗಿ ರಿಷಬ್ ಭಾರೀ ತಯಾರಿ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಈ ಪಾತ್ರಕ್ಕಾಗಿ ಕುದುರೆ ಸವಾರಿ, ಕಳರಿ ಪಯಟ್ಟು, ಕತ್ತಿವರಸೆ ಸೇರಿ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರೀಕರಣ 25 ಎಕರೆ ವಿಸ್ತಾರದ ಸೆಟ್‌ನಲ್ಲಿ ನಡೆದಿದ್ದು, ಪರ್ವತ ಪ್ರದೇಶದಲ್ಲಿ 50 ದಿನಗಳ ಕಾಲ ನಡೆದಿದ್ದು, ಜುಲೈನಲ್ಲಿ ಪೂರ್ಣಗೊಂಡಿತ್ತು. ಈ ಸಿನಿಮಾ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಲಿದೆ. ಈ ಕಥೆಯು ಬನವಾಸಿ ಪ್ರದೇಶದ ಪೌರಾಣಿಕತೆ ಆಧರಿಸಿ, ದೈವ ಹಾಗೂ ಮಾನವ ಸಮರವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಿದೆ. ಈ ಚಿತ್ರದಲ್ಲಿ 500ಕ್ಕೂ ನುರಿತರು ಸೇರಿ ಸುಮಾರು 3,000 ಜನ ಭಾಗಿಯಾಗಿರುವ ಭವ್ಯ ಯುದ್ಧ ಸನ್ನಿವೇಶವೂ ಇದೆ ಎನ್ನಲಾಗಿದೆ.












Click it and Unblock the Notifications