ಕಾಂತಾರ ಚಾಪ್ಟರ್ 1 ಬಿಡುಗಡೆಯ ಬಗ್ಗೆ ಇಲ್ಲಿದೆ ಬಿಗ್‌ ಅಪ್ಡೇಟ್ಸ್‌!

Kantara Chapter 1: ಕಾಂತಾರ ಸಿನಿಮಾದ ನಂತರ ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ನಡೆದಿದೆ. ದೇಶದಾದ್ಯಂತ ಹೆಚ್ಚು ಸದ್ದು ಮಾಡಿ ಹಾಗೂ ಕನ್ನಡದ ಸಿನಿಮಾಗಳ ಬಗ್ಗೆ ಇಡೀ ಭಾರತವೇ ಮಾತನಾಡಿಕೊಳ್ಳುವಂತೆ ಕಾಂತಾರ ಸಿನಿಮಾ ಮೂಡಿ ಬಂದಿತ್ತು. ಆದರೆ, ಕಾಂತಾರ ಸಿನಿಮಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದ್ದು. ಇದೀಗ ಈ ಸಿನಿಮಾ ತಂಡವು ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ವೊಂದನ್ನು ನೀಡಿದೆ. ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲ್ಲೇ ಇದೆ. ಇದೀಗ ಈ ಸಿನಿಮಾ ಬಿಡುಗಡೆ ಇನ್ನಷ್ಟು ವಿಳಂಬವಾಗಬಹುದು ಎನ್ನುವ ಆತಂಕದ ನಡುವೆಯೇ ಕೊನೆಗೂ ಚಿತ್ರತಂಡದಿಂದ ಮಹತ್ವದ ಅಪ್ಡೇಟ್ಸ್‌ ಬಂದಿದೆ. ಅಲ್ಲದೇ ಸಿನಿಮಾ ರಿಲೀಸ್‌ನ ಬಗ್ಗೆ ಸಹ ಮಾಹಿತಿ ಹಂಚಿಕೊಳ್ಳಲಾಗಿದೆ. ಅದೇನು ಎನ್ನುವ ಕಂಪ್ಲೀಟ್ ವಿವರ ಇಲ್ಲಿದೆ.

ಕನ್ನಡಿಗರು ಹಾಗೂ ದೇಶದಾದ್ಯಂತ ಸಿನಿಮಾ ರಸಿಕರು ಕಾತುರದಿಂದ ಕಾಯುತ್ತಿರುವ ಕಾಂತಾರ ಚಾಪ್ಟರ್ - 1 ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಬ್ಯಾಕ್‌ ಟು ಬ್ಯಾಕ್‌ ಅವಘಡಗಳು ಸಂಭವಿಸುತ್ತಲ್ಲೇ ಇವೆ. ಅಲ್ಲದೇ ಸಿನಿಮಾದಲ್ಲಿ ನಟಿಸಿದ್ದ ಸಹ ಕಲಾವಿದರು ಈಚೆಗೆ ಸಾವನ್ನಪ್ಪಿದ್ದು ಸಿನಿಮಾ ತಂಡಕ್ಕೆ ಆಘಾತವನ್ನುಂಟು ಮಾಡಿತ್ತು. ಇದರ ನಡುವೆ ಸಿನಿಮಾ ತಂಡವು ಸಿನಿಮಾ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಿನಿಮಾ ಈ ಹಿಂದೆ ಹೇಳಿದ್ದ ದಿನವೇ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

Kantara Chapter 1 big updates about release date Kantara Chapter part 2 on Oct 2

ಇದೇ ದಿನ ಚಿತ್ರ ಬಿಡುಗಡೆ: ಇನ್ನು ಕಾಂತಾರ ಚಾಪ್ಟರ್ 1 ನಿರೀಕ್ಷೆಯಂತೆ ಚಿತ್ರತಂಡವು ಮೊದಲೇ ಹೇಳಿದ್ದ ದಿನವೇ ಬಿಡುಗಡೆ ಆಗಲಿದೆ. ಕಾಂತಾರದ ಅದ್ಭುತ ಸ್ಟೋರಿಯ ನಂತರ ಸಿನಿರಸಿಕರು ಪಾರ್ಟಿ 2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದು ಕಾಂತಾರ ಸಿನಿಮಾದ ಪೂರ್ವ ಕಥೆ ಆಗಿರಲಿದೆ ಎಂದು ಹೇಳಲಾಗಿದೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ಮೊದಲು 2025ರ ಅಕ್ಟೋಬರ್ 2ರಂದು ನಿಗದಿ ಮಾಡಲಾಗಿತ್ತು. ಆದರೆ, ಇತ್ತೀಚಿನ ಸರಣಿ ದುರಂತದಿಂದಾಗಿ ಈ ಸಿನಿಮಾನ ಬಿಡುಗಡೆ ತಡವಾಗಲಿದೆ ಎನ್ನುವ ಆತಂಕ ಎದುರಾಗಿತ್ತು. ಇದೀಗ ಆ ಗೊಂದಲಗಳಿಗೆ ತೆರೆ ಎಳೆಯಾಗಲಿದ್ದು, ನಿಗದಿತ ದಿನಾಂಕದಂದೇ ಬಿಡುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದ ಸಿನಿಮಾಗಳಲ್ಲಿ ಕಾಂತಾರ ಹಾಗೂ ಕೆಜಿಎಫ್ ಸಿನಿಮಾಗಳು ಮುಂಚೂಣಿಯಲ್ಲಿತ್ತು. ಕಾಂತಾರ ಸಿನಿಮಾಗೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಇದೀಗ ಇದರ ಮುಂದುವರಿದ ಭಾಗವಾಗಿ ಕನ್ನಡದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುವುದಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ.

ಕಾಂತಾರ ಸಿನಿಮಾಕ್ಕೆ ಎದುರಾದ ಪ್ರಮುಖ ಸಮಸ್ಯೆಗಳು

* ಬಸ್‌ ದುರಂತ: ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶನ ಮಾಡುತ್ತಿರುವ "ಕಾಂತಾರ ಚಾಪ್ಟರ್ 1" ಸಿನಿಮಾ ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ತೊಡಕು ಅನುಭವಿಸುತ್ತಿದೆ ಎಂದು ಹೇಳಲಾಗಿದೆ. ಕಳೆದ ನವೆಂಬರ್‌ನಲ್ಲಿ ಕಾಂತಾರ ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ತೆರಳುವಾಗ 20 ಜ್ಯೂನಿಯರ್ ಕಲಾವಿದರಿದ್ದ ಮಿನಿ ಬಸ್‌ ಉಡುಪಿ ಜಿಲ್ಲೆಯ ಬೈಂದೂರಿನ ಜಡ್ಕಲ್ ಎನ್ನುವ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿತ್ತು. ಇದರಲ್ಲಿ 5 ಜನ ಕಲಾವಿದರೆ ಸಣ್ಣಪುಟ್ಟ ಗಾಯಗಳಾಗಿತ್ತು.

* ಈಚೆಗೆ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದ ಕಾಂತಾರ ಸಿನಿಮಾದ ಸಹಕಲಾವಿದ ಎಂ.ಎಫ್‌ ಕಪಿಲ್‌ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿದ್ದ ಚಿತ್ರತಂಡವು ಚಿತ್ರೀಕರಣದ ಸಮಯದಲ್ಲಿ ಈ ದುರಂತ ನಡೆದಿಲ್ಲ. ಈ ಘಟನೆಗೂ ಕಾಂತಾರ ಸಿನಿಮಾ ಚಿತ್ರೀಕರಣಕ್ಕೂ ಸಂಬಂಧವಿಲ್ಲ ಎಂದಿತ್ತು.

* ಅರಣ್ಯ ನಾಶ ಮಾಡಿದ ಆರೋಪ: ಇನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆರೂರು ಗ್ರಾಮದ ಸಮೀಪದಲ್ಲಿ "ಕಾಂತಾರ" ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅರಣ್ಯದಲ್ಲಿ ಸ್ಫೋಟಕ ಬಳಕೆ ಮಾಡುವ ಮೂಲಕ ಅರಣ್ಯ ನಾಶ ಮಾಡಲಾಗಿದೆ ಎನ್ನುವ ಗಂಭೀರ ಆರೋಪವೂ ಕೇಳಿ ಬಂದಿತ್ತು. ಚಿತ್ರೀಕರಣಕ್ಕಾಗಿ ಚಿತ್ರತಂಡವು ಮೊದಲೇ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡಿತ್ತು. ಯಾವುದೇ ಅರಣ್ಯನಾಶ ಮಾಡಿರಲಿಲ್ಲ ಎನ್ನುವ ವಿಷಯ ಆ ಮೇಲೆ ಸ್ಪಷ್ಟವಾಗಿತ್ತು.

* ರಾಕೇಶ್‌ ಪೂಜಾರಿ ನಿಧನ: ಕಾಂತಾರ 1 ಸಿನಿಮಾದ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಿನಿಮಾದಲ್ಲಿ ಅವರು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಮುಗಿದು ಒಂದು ತಿಂಗಳ ನಂತರ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+