Rajamouli: ಕನ್ನಡಿಗ, ಬಾಹುಬಲಿ ನಿರ್ದೇಶಕ ರಾಜಮೌಳಿ ವಿರುದ್ಧ ಗಂಭೀರ ಆರೋಪ, ಏನದು ?
Rajamouli: ಕನ್ನಡಿಗ ಹಾಗೂ ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ನಿರ್ದೇಶಕ ಎಸ್.ಎಸ್ ರಾಜಮೌಳಿಯ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದ್ದು. ಇಡೀ ಭಾರತೀಯ ಚಿತ್ರರಂಗವೇ ಈ ವಿಷಯ ಕೇಳಿ ಆಘಾತಕ್ಕೆ ಒಳಗಾಗಿದೆ. ತೆಲುಗು ಚಿತ್ರರಂಗದ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿಯೇ ಹೊಸ ಸಿನಿಮಾ ಶೈಲಿಗೆ ಕೈ ಹಾಕಿ ಅದರಲ್ಲಿ ಸಕ್ಸಸ್ ಸಹ ಆಗಿರುವ ರಾಜಮೌಳಿ ಅವರ ಮೇಲೆ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಈ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ದೇಶದ ಪ್ರಮುಖ ನಿರ್ದೇಶಕರಲ್ಲಿ ಹಾಗೂ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ರಾಜಮೌಳಿ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ರಾಜಮೌಳಿ ಅವರು ಅವರ ಆತ್ಮೀಯ ಗೆಳಯರೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.

ಅವರ ಸ್ನೇಹಿತ ಶ್ರೀನಿವಾಸ ರಾವ್ ಎನ್ನುವವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ರಾಜಮೌಳಿ ಅವರ ಬಗ್ಗೆ ಸೆಲ್ಫಿ ವಿಡಿಯೋ ಮಾಡಿರುವ ಅವರು, ಚಿತ್ರಹಿಂಸೆ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ಸಹ ಅವರು ಪತ್ರ ಬರೆದಿದ್ದಾರೆ. ರಾಜಮೌಳಿ ಅವರು ನೀಡುತ್ತಿರುವ ಕಿರುಕುಳದಿಂದ ತಪ್ಪಿಸಿಕೊಳ್ಳಲು ಈಗ ಇರುವ ಏಕೈಕ ಆಯ್ಕೆಯೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದು. ಇದೀಗ ಈ ವಿಷಯ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ರಾಜಮೌಳಿಗಾಗಿ ಜೀವಮಾನವನ್ನೇ ಮುಡಿಪಾಗಿ ಇರಿಸಿದೆ...
ಇನ್ನು ಈ ವಿಡಿಯೋದಲ್ಲಿ ಶ್ರೀನಿವಾಸ್ ಅವರು ರಾಜಮೌಳಿಗಾಗಿ ನಾನು ಇಡೀ ಜೀವಮಾನವನ್ನೇ ಮುಡಿಪಾಗಿರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಸೆಲ್ಫಿ ವಿಡಿಯೋ ಹಾಗೂ ಪತ್ರವನ್ನು ಅವರು ಬರೆದಿದ್ದರು. ನಾನು ಹಾಗೂ ರಾಜಮೌಳಿ ಅವರು ಬರೋಬ್ಬರಿ 34 ವರ್ಷಗಳಿಂದ ಸ್ನೇಹಿತರು. ಅವರಿಗಾಗಿ ನಾನು ಮದುವೆಯನ್ನೂ ಆಗದೆ ನನ್ನ ಜೀವನವನ್ನೇ ತ್ಯಾಗ ಮಾಡಿದ್ದೇನೆ.
ರಾಜಮೌಳಿ ಅವರು ನಿರ್ದೇಶಕರಾಗಿ ಬೆಳೆಯಲು ಸಹಾಯ ಮಾಡುವುದಕ್ಕಾಗಿ ಅವಿರತ ಶ್ರಮಿಸಿದ್ದೇನೆ. ಮದುವೆಯನ್ನೂ ಆಗದೆ ಬ್ರಹ್ಮಚಾರಿಯಾಗಿಯೇ ಉಳಿದೆ. ಆದರೆ, ಈ ಉಪಕಾರಕ್ಕೆ ಬದಲಾಗಿ ರಾಜಮೌಳಿ ಅವರು ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ. ಈಗ ಅವರು ನನಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ. ಹೀಗಾಗಿ ಸಾಯುವುದಕ್ಕೆ ಯೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಪತ್ರದಲ್ಲಿ ಯಮದೊಂಗ ಚಿತ್ರದ ಸಹಾಯಕ ನಿರ್ದೇಶಕರ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಶ್ರೀನಿವಾಸ್ ನಾಪತ್ತೆ ?
ಇನ್ನು ನಿರ್ದೇಶಕ ರಾಜಮೌಳಿ ಅವರ ಬಗ್ಗೆ ಆರೋಪ ಮಾಡಿರುವ ಶ್ರೀನಿವಾಸ್ ಅವರು ಏಕಾಏಕಿ ನಾಪತ್ತೆಯಾಗಿದ್ದು. ಇದು ಇನ್ನಷ್ಟು ಅನುಮಾನ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಯಾಕೆಂದರೆ ರಾಜಮೌಳಿ ಅವರ ಬಗ್ಗೆ ಪತ್ರ ಹಾಗೂ ವಿಡಿಯೋ ಮಾಡಿದ ಕೂಡಲೇ ಅವರ ಬಗ್ಗೆ ಯಾವುದೇ ಸುಳಿವು ಸಹ ಪತ್ತೆಯಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications