ಗರ್ಭಿಣಿ ಇದ್ದಾಗಲೇ ಮಗುವಿನ ಲಿಂಗ ಬಹಿರಂಗ: ಡಾಕ್ಟರ್‌ಗೆ ಸಂಕಷ್ಟ ತಂದಿಟ್ರಾ ಖ್ಯಾತ ಯೂಟ್ಯೂಬರ್‌?

ಪೂಜಾ.ಕೆ ರಾಜ್‌ ಹಾಗೂ ಸತೀಶ್ ಈರೇಗೌಡ ಕನ್ನಡ ಯೂಟ್ಯೂಬ್‌ನಲ್ಲಿ ಹೆಚ್ಚು ಹೆಸರು ಮಾಡಿರುವ ದಂಪತಿ. ಯೂಟ್ಯೂಬ್‌ ವಿಡಿಯೋ ಮೂಲಕ ಜನಪ್ರಿಯತೆ ಪಡೆದಿರುವ ಈ ಜೋಡಿ ಕೆಲವು ತಿಂಗಳ ಹಿಂದಷ್ಟೇ ತಮ್ಮ ಎರಡನೇ ಮಗು ಗಂಡು ಮಗುವನ್ನು ಬರ ಮಾಡಿಕೊಂಡಿದ್ದರು. ಜೊತೆಗೆ ಇತ್ತೀಚಿಗಷ್ಟೇ ಮಗುವಿನ ಮುಖ ಕೂಡ ರಿವೀಲ್‌ ಮಾಡಿದ್ದರು. ಮೊದಲು ಮಗಳು, ಈಗ ಮಗ ತುಂಬಿದ ಸಂಸಾರವಾಗಿರುವ ಸತೀಶ್ ಈರೇಗೌಡ ಅವರು ಹೊಸ ಮನೆ ಕೂಡ ಖರೀದಿಸಿದ್ದರು.

ಈ ಎಲ್ಲಾ ಖುಷಿಗಳನ್ನು ತಮ್ಮ ವಿಡಿಯೋ ಮೂಲಕ ಈ ದಂಪತಿ ನೋಡುಗರ ಜೊತೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚಿಗೆ ಪೂಜಾ.ಕೆ ರಾಜ್‌ ತಮ್ಮ ಎರಡನೇ ಪ್ರೆಗ್ನೆನ್ಸಿ ಜರ್ನಿ ಹಂಚಿಕೊಳ್ಳಲು ಹೋಗಿ ಸಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ನಿಮಗೆ ಗಂಡು ಮಗು ಆಗುತ್ತೆ ಅಂತ ಗೊತ್ತಿತ್ತಾ ? ನೀವು ಎಷ್ಟು ಜನ ಮಕ್ಕಳು? ಎನ್ನುವ ವಿಡಿಯೋವನ್ನು ಸೆಪ್ಟೆಂಬರ್‌19ರಂದು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಹೇಳಿದ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ.

Kannada YouTuber Pooja K Raj Second Pregnancy Journey Video Controversy

ಈ ಎರಡನೇ ಮಗುವಿನ ಬಗ್ಗೆ ಮಾತನಾಡಿದ ಪೂಜಾ, ನನಗೆ ಗಂಡು ಮಗು ಅಂತಾ 95% ಖಾತ್ರಿಯಾಗಿದ್ದು ಯಾವಾಗ ಅಂದರೆ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಹೋಗಿದ್ದೆ. ಆಗ ಡಾಕ್ಟರ್‌ ಬಳಿ ಹೇಳಿಕೊಂಡೆ ಗರ್ಭಿಣಿಯಾದವರಿಗೆ ಎಷ್ಟು ಬದಲಾವಣೆಯಾಗುತ್ತದೆ. ಆದರೆ ನನಗೆ ಯಾವ ರೀತಿಯ ಬದಲಾವಣೆ ಕೂಡ ಆಗಿಲ್ಲ. ನಾನು ದಪ್ಪ-ಸಣ್ಣ ಏನೂ ಆಗಲಿಲ್ಲ. ನನಗೆ ವಾಂತಿ, ಸುಸ್ತು, ಬಯಕೆ ಏನೂ ಆಗುತ್ತಿರಲಿಲ್ಲ. ಹೊಟ್ಟೆ ಕೂಡ ಕಾಣಿಸುತ್ತಿರಲಿಲ್ಲ ಯಾಕೆ ಅಂತಾ ಡಾಕ್ಟರ್‌ ಬಳಿ ಕೇಳಿದೆ. ಅವರು ಲಕ್ಕಿ ಅಲಾ ಪೂಜಾ ಖುಷಿ ಪಡು ಅಂದರು.

ನನಗೆ ಏನೂ ಅನ್ನಿಸುತ್ತರಲಿಲ್ಲ ಮೇಡಂ ಅಂದೆ ಅವರು ನಗಾಡಿದರು ಅವರು ಯಾವುದನ್ನೂ ಹೆಚ್ಚು ಮಾತನಾಡುತ್ತಿರಲಿಲ್ಲ ಕೇಳಿದಕ್ಕಷ್ಟೇ ಹೇಳುತ್ತಿದ್ದರು. ಆದರೆ ನಾನು ಕೊನೆಯಲ್ಲಿ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೋಗುವಾಗ ಹೆಣ್ಣು ಮಕ್ಕಳು ಹುಟ್ಟುವಾಗ ಅಂತಹ ಲಕ್ಷಣಗಳು ಇರುತ್ತದೆ ಅಂದರು. ಒಂದು ಮೂವತ್ತು ಸೆಕೆಂಡ್‌ ಹಾಗೇ ನಿಂತುಕೊಂಡು ಬಿಟ್ಟೆ ನಾನು.

Kannada YouTuber Pooja K Raj Second Pregnancy Journey Video Controversy

ಏನೆಂದರು ಅವರು ನಾನೇನು ಕೇಳಿಸಿಕೊಂಡೆ ಅಂತಾ ಒಂದು ನಿಮಿಷ ಯೋಚನೆ ಮಾಡಿ ಅಲ್ಲಿಂದ ಬಂದೆ. ಮನಸ್ಸಿನಲ್ಲಿ ಏನೋ ಒಂಥರಾ ಖುಷಿ ಇತ್ತು. ಅದನ್ನೇ ಯೋಚನೆ ಮಾಡುತ್ತಿದೆ. ಅದೇ ಸಮಯಕ್ಕೆ ಅಕ್ಕನಿಗೆ ಕಾಲ್‌ ಮಾಡಿ ಡಾಕ್ಟರ್‌ ಹೀಗೆ ಹೇಳಿದರು ಅಂತಾ ಹೇಳಿಕೊಂಡು ಸುಮ್ಮನಾದೆ ಎಂದು ವಿಡಿಯೋ ಮಾಡುವ ಭರದಲ್ಲಿ ಪೂಜಾ ಕೆ ರಾಜ್‌ ಗಂಡು ಮಗುವಾಗುತ್ತದೆ ಎಂದು ವೈದ್ಯರು ನಮಗೆ ಮೊದಲೇ ಪರೋಕ್ಷವಾಗಿ ಹೇಳಿದ್ದರು ಎನ್ನುವುದನ್ನು ಹಂಚಿಕೊಂಡಿದ್ದಾರೆ.

ಇನ್ನು ಮನೆಯಲ್ಲಿ ಹೀಗೆ ಸಣ್ಣದಾಗಿ ದೇವರ ಪೂಜೆ ಮಾಡಿಸಿದಾಗ ಅಲ್ಲಿ ಬಂದ ಪುರೋಹಿತರು ನಾವು ಕೇಳದೇ ನಿಮಗೆ ಪುತ್ರ ಪ್ರಾಪ್ತಿ ಆಗಲಿದೆ ಎಂದು ಹೇಳಿದ್ದರು. ಅಲ್ಲದೇ ನಾವು ಇನ್ನೇನು ಮಗು ಹುಟ್ಟಲು ಹದಿನೈದು ದಿನ ಇರುವಾಗ ಕೇಳಿದ ಪುರೋಹಿತರು ಕೂಡ ಪುತ್ರ ಪ್ರಾಪ್ತಿ ಎಂದಿದ್ದರು ಎಂದು ಪೂಜಾ ವಿಡಿಯೋದಲ್ಲಿ ಹೇಳಿದ್ದು, ಪೂಜಾ ಅವರ ಕೆಲವು ಹೇಳಿಕೆಗೆ ನೋಡುಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗಂಡು-ಹೆಣ್ಣು ಎಂದು ಡಾಕ್ಟರ್‌ನ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಸರಿ ಅಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+