ಲೀಲಾವತಿ & ವಿನೋದ್ ರಾಜ್ ಕೊಲೆಗೆ ಪ್ರಯತ್ನ ನಡೆದಿತ್ತಾ? ಗುಂಡು ಹಾರಿಸಿದ್ದು ಯಾರು?
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರನ್ನು ಕೊಲೆ ಮಾಡಲು ನಡೆದಿದ್ದ ಪ್ರಯತ್ನಗಳು ಒಂದಲ್ಲ.. ಎರಡಲ್ಲ.. ಅದರಲ್ಲೂ ಹಲವು ಕನ್ನಡ ಸಿನಿಮಾ ಸ್ಟಾರ್‌ಗಳನ್ನು ಗುಟ್ಟಾಗಿ ಕೊಲೆ ಮಾಡಿ ಕಥೆ ಮುಗಿಸಿದ್ದಾರೆ ಅನ್ನೋ ಆರೋಪ ಇದೆ. ಹೀಗಿದ್ದಾಗ ಕನ್ನಡದ ಮೈಕಲ್ ಜಾಕ್ಸನ್ ಅಂತಾ ಹೆಸರು ಪಡೆದಿದ್ದ & ಕೀರ್ತಿ ಗಳಿಸಿದ್ದ ವಿನೋದ್ ರಾಜ್ ಕಥೆಯನ್ನೇ ಮುಗಿಸಲು ಪ್ರಯತ್ನ ಮಾಡಿದ್ದು ಯಾರು? ವಿನೋದ್ ರಾಜ್ & ಅವರ ತಾಯಿ ಮೇಲೆ ಗುಂಡು ಹಾರಿಸಿದ ಸಮಯದಲ್ಲಿ ಏನಾಗಿತ್ತು? ಅವರೇ ಹೇಳಿದ್ದಾರೆ ವಿಡಿಯೋ ನೋಡೋಣ ಬನ್ನಿ.
ವಿನೋದ್ ರಾಜ್ ಅವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿ, ಜೀವನದಲ್ಲಿ ಪರದಾಡಿದ್ದರು. ವಿನೋದ್ ರಾಜ್ ಅವರ ತೋಟಕ್ಕೆ ಅಂದ್ರೆ ಬೆಂಗಳೂರು ಹೊರ ವಲಯದ ನೆಲಮಂಗಲ ಬಳಿ ಇರುವ ತೋಟಕ್ಕೆ, ಪದೇ ಪದೇ ಕಿರಾತಕರು ಬೆಂಕಿ ಹಚ್ಚಿದ್ದು ಕೂಡ ಉಂಟು. ಹೀಗಿದ್ದಾಗ ಹಿರಿಯ ನಟಿ ಲೀಲಾವತಿ ಅವರು ಹಾಗೂ ಅವರ ಮಗ ವಿನೋದ್ ರಾಜ್ ಸಾಕಷ್ಟು ಕಣ್ಣೀರು ಹಾಕಿದ್ದರು. ಅಲ್ಲದೆ ತಮಗೆ ಆಗುತ್ತಿರುವ ಕಷ್ಟವನ್ನು ವಿವರಿಸಿದ್ದರು.

ಹೀಗಿದ್ದರೂ ವಿನೋದ್ ರಾಜ್ ಅವರಿಗೆ ಕಷ್ಟ ಕೊಡುತ್ತಿದ್ದ ಕಿರಾತಕರು ಸೈಲೆಂಟ್ ಆಗಿರಲಿಲ್ಲ. ಅದ್ರಲ್ಲೂ ವಿನೋದ್ ರಾಜ್ ಮತ್ತು ಅವರ ತಾಯಿ ಲೀಲಾವತಿ ಮೇಲೆ ಗುಂಡಿನ ದಾಳಿ ಮಾಡಿ ಕೊಲೆಗೆ ಕೂಡ ಪ್ರಯತ್ನ ಮಾಡಲಾಗಿತ್ತು ಎಂಬ ವಿನೋದ್ ರಾಜ್ ಅವರ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ! ಬೆಂಗಳೂರಿನ ಶಾಂತಲಾ ಸಿಲ್ಕ್ಸ್ ಬಳಿ ವಿನೋದ್ ರಾಜ್ & ವಿನೋದ್ ರಾಜ್ ಅವರ ತಾಯಿ ಲೀಲಾವತಿ ಅವರ ಮೇಲೆ ನಡೆದ ಗುಂಡಿನ ದಾಳಿಯ ಭಯಾನಕ ಕ್ಷಣ ಹೇಗಿತ್ತು ಅನ್ನೋದನ್ನ ಅವರೇ ವಿವರಿಸಿದ್ದಾರೆ ವಿಡಿಯೋ ನೋಡಿ.
ಜೀವ ಉಳಿದಿದ್ದೇ ಹೆಚ್ಚು ಅಂತಿದ್ದಾರೆ!
ವಿನೋದ್ ರಾಜ್ ಅವರು ಏನು ಹೇಳಿದರು ಅಂತಾ ವಿಡಿಯೋ ನೋಡಿದ್ರಲ್ಲ? ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ಶಾಂತಲಾ ಸಿಲ್ಕ್ಸ್ ಸಮೀಪದಲ್ಲೇ ಈ ರೀತಿಯಾಗಿ ನಟ ವಿನೋದ್ ರಾಜ್ & ಅವರ ತಾಯಿ ಲೀಲಾವತಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು, ಎಂಬ ಆರೋಪ ಮಾಡಿದ್ದಾರೆ ವಿನೋದ್ ರಾಜ್. ಹೀಗಿದ್ರೂ, ಪಕ್ಕದಲ್ಲಿ ಹೋದ ಟಿಪ್ಪರ್ ಲಾರಿ ಟಯರ್‌ಗೆ ಕಲ್ಲು ಸಿಲುಕಿ ಅದು ನಿಮ್ಮ ಕಾರಿಗೆ ಬಡಿದಿದೆ ಅಂತಾ ಹೇಳಿ, ಕೇಸ್ ಅಲ್ಲೇ ಮುಚ್ಚಿ ಹಾಕಲು ಪ್ರಯತ್ನ ನಡೆಯಿತು ಎಂಬ ಗಂಭೀರ ಆರೋಪ ಮಾಡಿದ್ದಾರೆ ವಿನೋದ್ ರಾಜ್ ಅವರು.
ದರ್ಶನ್ ಪರ ವಿನೋದ್ ರಾಜ್!
ವಿನೋದ್ ರಾಜ್ & ದರ್ಶನ್ ತೂಗುದೀಪ್ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅಣ್ಣನಂತೆ ವಿನೋದ್ ರಾಜ್ ಅವರನ್ನು ಗೌರವ ಕೊಟ್ಟು ದರ್ಶನ್ ತೂಗುದೀಪ್ ಮಾತನಾಡಿಸುತ್ತಾರೆ. ಈ ಕಾರಣಕ್ಕೆ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದ ನಟ ವಿನೋದ್ ರಾಜ್ ಅವರು ಇತ್ತೀಚೆಗೆ ಕಣ್ಣೀರು ಹಾಕಿಕೊಂಡು ಮಾತನಾಡಿದ್ದರು. ಹೀಗಿದ್ದಾಗ ತಮ್ಮ ಮೇಲೆ ಗುಂಡಿನ ದಾಳಿ ನಡೆದಿತ್ತು ಎಂಬ ಸ್ಫೋಟಕ ಆರೋಪವನ್ನು ಕೂಡ ಮಾಡಿದ್ದಾರೆ.












Click it and Unblock the Notifications