Get Updates
Get notified of breaking news, exclusive insights, and must-see stories!

Kannadada Kotyadhipati: ಕನ್ನಡದ ಕೋಟ್ಯಾಧಿಪತಿ ಮತ್ತೆ ಶುರು... ಪುನೀತ್ ರಾಜ್‌ಕುಮಾರ್ ಅವರ ಜಾಗಕ್ಕೆ ಇವರೇ...

'ಕನ್ನಡದ ಕೋಟ್ಯಾಧಿಪತಿ' ಕನ್ನಡಿಗರ ಮನೆ, ಮನಸ್ಸು ಗೆಲ್ಲುವ ಜೊತೆಗೆ ಬಡವರಿಗೆ ವರ ಎನ್ನುವಂತೆ ರೂಪುಗೊಂಡಿತ್ತು. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯ ಈ ಕಾರ್ಯಕ್ರಮ ನೋಡಲು ಕೋಟಿ ಕೋಟಿ ಕನ್ನಡಿಗರು ಕಾದು ಕೂತಿರುತ್ತಿದ್ದರು. ಆದರೆ, ಅಪ್ಪು ಪುನೀತ್ ರಾಜ್‌ಕುಮಾರ್ ಅವರು ಈಗ ನಮ್ಮ ಜೊತೆ ಇಲ್ಲ. 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಕೂಡ ನಡೆಯುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗಲೇ, ಪುನೀತ್ ರಾಜ್‌ಕುಮಾರ್ ಅವರ ಜಾಗಕ್ಕೆ ಇವರೇ ಹೊಸ ಆಂಕರ್ ಅಂತೆ!

ಕನ್ನಡದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಿ ಕೋಟಿ ಕೋಟಿ ಹಣ ಗೆಲ್ಲಬಹುದು, ಈ ಮೂಲಕ ತಮ್ಮ ಜೀವನದಲ್ಲಿ ಸೆಟಲ್ ಆಗಬಹುದು ಅಂತಾ ಕನಸು ಕಟ್ಟಿಕೊಂಡ ಜನರ ಸಂಖ್ಯೆಯೇ ಹೆಚ್ಚಾಗಿ ಇತ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟು, ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದರು.

Kannada Kotyadhipathi May Be Kiccha Sudeep To Take Over The Puneeth Rajkumar s Place

ಹೀಗಿದ್ದಾಗಲೇ, 2021 ರಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಂದ್ರೆ ಅಪ್ಪು ಅವರು ಕನ್ನಡಿಗರನ್ನ ಬಿಟ್ಟು ಹೋದ ನಂತರದಲ್ಲಿ ಈ ಕಾರ್ಯಕ್ರಮ ಕೂಡ ಅನಾಥವಾಗಿತ್ತು... ಆದರೆ ಇದೀಗ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಭರ್ಜರಿ ಆಂಕರ್ ರೆಡಿಯಾಗಿದ್ದಾರಂತೆ! ಅರೆರೆ ಹಾಗಾದ್ರೆ ಯಾರದು ಹೊಸ ಆಂಕರ್? ಏನಿದು ಸುದ್ದಿ? ಮುಂದೆ ಓದಿ.

'ಕನ್ನಡದ ಕೋಟ್ಯಾಧಿಪತಿ'ಗೆ ಹೊಸ ಸ್ಟಾರ್...

ಹಿಂದಿ ಭಾಷೆಯಲ್ಲಿ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮ ಮೂಡಿ ಬರುತ್ತಿತ್ತು. ಈ ಕಾರ್ಯಕ್ರಮದ ಕನ್ನಡ ವರ್ಷನ್ 'ಕನ್ನಡದ ಕೋಟ್ಯಾಧಿಪತಿ'. ಹೀಗೆ ಕನ್ನಡದಲ್ಲಿ ಆರಂಭ ಆಗಿದ್ದ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಕೋಟಿ ಕೋಟಿ ಜನರ ಮನಸ್ಸು ಗೆದ್ದು ದೊಡ್ಡ ಸಾಧನೆ ಮಾಡಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಅವರು ಕೊನೆಯುಸಿರು ಎಳೆದ ನಂತರ ಮುಂದೆ 'ಕನ್ನಡದ ಕೋಟ್ಯಾಧಿಪತಿ' ನಡೆಸಿಕೊಡುವುದು ಯಾರು? ಅಂತಾ ಚರ್ಚೆ ಜೋರಾಗಿತ್ತು...

ಪವರ್ ಸ್ಟಾರ್ ಜಾಗಕ್ಕೆ ಕಿಚ್ಚ ಸುದೀಪ್ ಅವರು?

ಇದೀಗ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರೇ ಆಂಕರ್ ಎಂಬ ಸುದ್ದಿ ಹಬ್ಬಿದ್ದು ಹಲ್‌ಚಲ್ ಕೂಡ ಶುರುವಾಗಿದೆ. ರಿಯಾಲಿಟಿ ಶೋಗಳಲ್ಲಿ ಕಿಚ್ಚ ಸುದೀಪ್ ಅವರನ್ನ ಮೀರಿಸುವ ಮತ್ತೊಬ್ಬ ಕನ್ನಡದ ನಿರೂಪಕ ಇಲ್ಲ ಅನ್ನೋದು ಅವರ ಅಭಿಮಾನಿ ಬಳಗದ ಮಾತು.

ಹೀಗಿದ್ದಾಗಲೇ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು & ಕನ್ನಡಿಗ ಕಿಚ್ಚ ಸುದೀಪ್ ಅವರು ಜೀವದ ಗೆಳೆಯರು. ಹೀಗಿದ್ದಾಗ, ಪುನೀತ್ ರಾಜ್‌ಕುಮಾರ್ ಅವರು ಬಿಟ್ಟು ಹೋಗಿರುವ ಕಾರ್ಯಕ್ರಮ ಮತ್ತೆ ಶುರು ಮಾಡಲು ಕಿಚ್ಚ ಸುದೀಪ್ ಅವರು ಇದೀಗ ಮುಂದೆ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಸುದ್ದಿ ಯಾವಾಗ ಕನ್ಫರ್ಮ್ ಆಗುತ್ತೆ?

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರೇ ಆಂಕರ್ ಎಂಬ ಸುದ್ದಿ ಹಬ್ಬಿದ್ದರೂ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳು ಸಿಕ್ಕಿಲ್ಲ. ಹೀಗಾಗಿ ಕುತೂಹಲ ಕೂಡ ಮತ್ತಷ್ಟು ಹೆಚ್ಚಾಗಿದ್ದು. ಇದಕ್ಕೆ ವಿವರಣೆ ಸಿಗಬೇಕು ಅಂದ್ರೆ ಮತ್ತಷ್ಟು ದಿನಗಳ ಕಾಲ ಫ್ಯಾನ್ಸ್ ಕಾಯಬೇಕಿದೆ. ಈಗಾಗಲೇ ಕಿಚ್ಚ ಸುದೀಪ್ ಅವರು, 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮದ ನಿರೂಪಣೆಯನ್ನ ಇನ್ಮುಂದೆ ಮಾಡುವುದಿಲ್ಲ ಎಂದಿರುವುದು ಕೂಡ ಕುತೂಹಲ ಕೆರಳುವಂತೆ ಮಾಡಿದೆ.

ಕನ್ನಡದ ಸೂಪರ್ ಕಾರ್ಯಕ್ರಮ ಆಗಿತ್ತು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಹೊಣೆ ಹೊತ್ತು, ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದರು. ಅದ್ರಲ್ಲೂ ಕನ್ನಡ ಮಾತ್ರವಲ್ಲ, ಬೇರೆ ಬೇರೆ ಭಾಷೆಯ ಜನರು ಕೂಡ ಈ ಕಾರ್ಯಕ್ರಮ ವೀಕ್ಷಣೆ ಮಾಡುತ್ತಾ, ಗ್ರೇಟ್ ಅನ್ನೋ ಮಾತನ್ನ ಹೇಳುತ್ತಿದ್ದರು. ಹೀಗಾಗಿ ಅಪ್ಪು ಅವರು ಅಗಲಿದ ನಂತರ, ಮತ್ತೆ ಆ ಕಾರ್ಯಕ್ರಮ ಶುರುವಾಗುತ್ತಾ? ಎಂಬ ಅನುಮಾನ ಮೂಡಿತ್ತು. ಆದರೆ ಇದೀಗ ಫ್ಯಾನ್ಸ್ ಎದೆಯಲ್ಲಿ ಹೊಸ ತಂಗಾಳಿ ಮೂಡಿದಂತೆ ಆಗಿದ್ದು, ಈ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆ ಇದೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಾಗಿ...

ಕರ್ನಾಟಕ ಮಾತ್ರವಲ್ಲದೆ ಭಾರತದ ಹಲವು ರಾಜ್ಯಗಳಲ್ಲಿ ಕೂಡ ಕನ್ನಡದ ಕೋಟ್ಯಾಧಿಪತಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾಕಂದ್ರೆ ಅಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ಕೂಡ ನಡೆದುಕೊಂಡು ಬಂದಿದೆ. ಹೀಗಿದ್ದಾಗಲೇ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಯಾವಾಗ ಶುರುವಾಗುತ್ತೆ? ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಅವರ ಪ್ರಶ್ನೆಗಳಿಗೆ ಈಗ ಅತಿ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ. ಮತ್ತೊಂದು ಕಡೆ ಕಿಚ್ಚ ಸುದೀಪ್‌ರ ನಿರೂಪಣೆ ಗ್ಯಾರಂಟಿ ಆಗೋದರೆ, ಮತ್ತಷ್ಟು ಕುತೂಹಲ ಹೆಚ್ಚಾಗಲಿದೆ.

ಕೋಟಿ ಕೋಟಿ ರೂಪಾಯಿ ಗೆಲ್ಲುವ ಅವಕಾಶ!

ಕನ್ನಡದ ಟಿವಿ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ಈ ಪೈಕಿ ರಿಯಾಲಿಟಿ ಶೋಗಳ ಅಬ್ಬರ ಬಲು ಜೋರಾಗೇ ಇದೆ. ಅದರಲ್ಲೂ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಕರ್ನಾಟಕ ಮಾತ್ರವಲ್ಲದೆ ಭಾರತದ ಹಲವು ರಾಜ್ಯಗಳಲ್ಲಿ ಕೂಡ ಹೆಸರು ಮಾಡಿದೆ. ಇದೇ, ಇದೇ ಕಾರಣಕ್ಕೆ ಕೋಟಿ ಕೋಟಿ ಜನರು ಕೂಡ ಹೊಸ ಸೀಸನ್ ಯಾವಾಗ ಬರುತ್ತೆ? ಎಂಬ ಭಾರಿ ಕುತೂಹಲ ಇಟ್ಟುಕೊಂಡು ಕಾಯುತ್ತಿದ್ದಾರೆ. ಆದಷ್ಟು ಬೇಗ, ಈ ಕುತೂಹಲಕ್ಕೆ ತಕ್ಕ ಉತ್ತರ ಸಿಗುವ ನಿರೀಕ್ಷೆ ಕೂಡ ದಟ್ಟವಾಗಿದೆ. ಹೀಗಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡಲು ಕನ್ನಡಿಗರು ಕಾಯುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+