ಕುಚಿಕು 'ಜಗ್ಗು' ರಿಲೀಸ್‌ಗಾಗಿ ಹಾಸನಾಂಬೆಗೆ ಹರಕೆ ಹೊತ್ತ 'ಕುಂಬಿ'
ನಟ ದರ್ಶನ್ ತೂಗುದೀಪ ಅವರ ಕುಚಿಕು ಬಳಗದಲ್ಲಿರುವ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಇಂದು ಹಾಸನ ಜಿಲ್ಲೆಯಲ್ಲಿರುವ ಪ್ರಸಿದ್ಧ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ದಂಪತಿ ದೇವರ ದರ್ಶನ ಪಡೆದು ನಟ ದರ್ಶನ್ (darshan thoogudeepa) ಅವರಿಗಾಗಿ ಹರಕೆಯೂ ಹೊತ್ತಿದ್ದಾರೆ.
ಹೌದು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ದಂಪತಿ ಇಂದು ಹಾಸನಕ್ಕೆ ತೆರಳಿ ಹಾಸನಾಂಬೆಯ ದರ್ಶನ ಪಡೆದರು. ಈ ವೇಳೆ ಅಭಿಮಾನಿಗಳು ದಂಪತಿ ಕಂಡು ಸೆಲ್ಫಿಗಾಗಿ ಮುಗಿಬಿದ್ದರು. ಬಳಿಕ ದರ್ಶನ ಮುಗಿಸಿ ಬಂದು, ತರುಣ್ ಸುಧೀರ್ ದಂಪತಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೆನೆದು ಮರುಗಿರುವ ತರುಣ್ ಸುಧೀರ್ ಅವರು, ಈ ದೇವಸ್ಥಾನದಲ್ಲಿ ದರ್ಶನ್ ಅವರನ್ನು ನೆನಪು ಮಾಡಿಕೊಂಡರು. ದರ್ಶನ್ ಸರ್ ಈಗ ಇದ್ದಿದ್ದರೆ, ಅವರು ಹಾಸನಾಂಬ ದೇವಿ ದರ್ಶನಕ್ಕೆ ಬರುತ್ತಿದ್ದರು ಎಂದು ಸುಧೀರ್ ಹೇಳಿದ್ದಾರೆ.
ದರ್ಶನ್ ಆದಷ್ಟು ಬೇಗನೆ ಜೈಲಿನಿಂದ ಹೊರಬರಲಿ ಎಂದು ಹಾಸನಾಂಬೆ ದೇವಿ ಬಳಿ ಬೇಡಿಕೊಂಡಿದ್ದೇವೆ ಎಂದು ನಿರ್ದೇಶಕ ತರುಣ್ ಸುಧೀರ್ ದಂಪತಿ ಹೇಳಿದರು.

ನಾನು ಪ್ರತಿ ವರ್ಷವೂ ಹಾಸನಾಂಬೆ ದರ್ಶನಕ್ಕೆ ಬರುತ್ತಿದೆ. ಶೂಟಿಂಗ್ ಕಾರಣದಿಂದ ಕಳೆದ ಬರಲು ಸಾಧ್ಯವಾಗಲಿಲ್ಲ. ಸೋನಲ್ ಬಂದು ದರ್ಶನ ಪಡೆದಿದ್ದರು. ಇನ್ನು ಹಾಸನಾಂಬೆಯ ದರ್ಶನ ಪಡೆದರೆ ಏನೋ ಒಂದು ಪಾಸಿಟಿವ್ ಫೀಲ್ ಸಿಗುತ್ತೆ. ಅಲ್ಲಿ ದೇವಿಯ ಮುಂದೆ ನಿಂತಾಗ ಮನಸ್ಸಿನಲ್ಲಿ ಇರೋದನ್ನ ಹೇಳಿಕೊಳ್ಳಬೇಕು ಅನಿಸುತ್ತದೆ. ಹಾಸನಾಂಬೆಗೆ ಅಷ್ಟು ಶಕ್ತಿ ಇದೆ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲುವಾಸದಲ್ಲಿರುವ ನಟ ದರ್ಶನ್ ಅವರು ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಅರ್ಜಿ ವಜಾ ಆಗಿತು. ಈಗ ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ನಾಳೆಯೇ ದರ್ಶನ್ ಅವರಿಗೆ ಜಾಮೀನು ಸಿಗುತ್ತದಾ? ಇಲ್ಲವಾ? ಎಂಬುದು ತಿಳಿಯಲಿದೆ. ಸಂಬಂಧ ಅಕ್ಟೋಬರ್ 28ರಂದು ಅಂದರೆ ನಾಳೆ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಕಳೆದ ಬಾರಿ ದರ್ಶನ್ ಅವರಿಗೆ ತೀವ್ರ ಬೆನ್ನು ನೋವಿರುವ ಕಾರಣ ಆಪರೇಷನ್‌ಗಾಗಿ ಜಾಮೀನು ಮಂಜೂರು ಮಾಡುವಂತೆ ದರ್ಶನ್ ಪರ ವಕೀಲರು ನ್ಯಾಯಾಧೀಶರ ಮುಂದೆ ಕೋರಿದ್ದರು. ಹೀಗಾಗಿ ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಕೋರ್ಟ್ ಹೇಳಿತ್ತು. ಇನ್ನು ನಾಳೆ ನಡೆಯಲಿರುವ ವಿಚಾರಣೆಯಲ್ಲಿ ಜೈಲಿನ ಅಧಿಕಾರಿಗಳು ದರ್ಶನ್ ಅವರ ವೈದ್ಯಕೀಯ ಸ್ಥಿತಿಗತಿ ಕುರಿತಾದ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದ ದರ್ಶನ್ ಅವರಿಗೆ ಜಾಮೀನು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ನವಗ್ರಹ ರೀರಿಲೀಸ್!
ದರ್ಶನ್ ಹಾಗೂ ತರುಣ್ ಸುಧೀರ್ ನವಗ್ರಹ ಸಿನಿಮಾದಲ್ಲಿ ನಟಿಸಿದ್ದರು. ದರ್ಶನ್ ಜಗ್ಗು ಪಾತ್ರದಲ್ಲಿ ತರುಣ್ ಕುಂಬಿ ಪಾತ್ರದಲ್ಲಿ ಸಖತ್ ಮೋಡಿ ಮಾಡಿದ್ದರು. ಇನ್ನು ನವೆಂಬರ್ 8ರಂದು ಬರೋಬ್ಬರಿ 16 ವರ್ಷಗಳ ಬಳಿಕ ನವಗ್ರಹ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ. ಈ ವೇಳೆಗೆ ದರ್ಶನ್ ಅವರಿಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.












Click it and Unblock the Notifications