ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಮೋಹಕ ತಾರೆ ರಮ್ಯಾ!

ಸ್ಯಾಂಡಲ್‌ವುಡ್‌ನ ಮೋಹಕತಾರೆ ನಟಿ ರಮ್ಯಾ ಅವರು ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ರಾಜಕೀಯಕ್ಕೂ ಹೋಗಿದ್ದರು. ಆದರೆ ಅಭಿಮಾನಿಗಳಿಗೆ ನಟಿ ರಮ್ಯಾ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಮಹಾದಾಸೆ. ಈಗ ಅಭಿಮಾನಿಗಳ ಈ ಆಸೆ ಈಡೇರುವ ಕಾಲ ಕೂಡಿಬಂದಿದೆ.

ಹೌದು ಹಲವು ವರ್ಷಗಳ ನಂತರ ರಮ್ಯಾ ಅವರು ಸಿನಿಮಾ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಷ್ಟಕ್ಕೂ ನಟಿ ರಮ್ಯಾ ಅವರು ಇತ್ತೀಚೆಗೆ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲವಲ್ಲ? ಎಂದು ತಲೆಕೆಡಿಸಿಕೊಳ್ಳಬೇಡಿ. ಅಸಲಿಗೆ ಇದು ರಮ್ಯಾ ಅಭಿನಯದ ಸಿನಿಮಾದ ರೀರಿಲೀಸ್‌ ಕೂಡ ಅಲ್ಲ. ಬದಲಿಗೆ ನೀವು ನೋಡಿರದ ಹೊಸ ಸಿನಿಮಾ.

Kannada Actress Ramya Movie Rakta Kashmir Is Releasing Soon

ಎಲ್ಲ ಅಂದುಕೊಂಡಂತಾಗಿದ್ದರೆ ಈ ಸಿನಿಮಾ ಹತ್ತಾರು ವರ್ಷಗಳ ಹಿಂದೆಯೇ ರಿಲೀಸ್‌ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅಂದು ಸೆಟ್ಟೇರಿದ್ದ ಸಿನಿಮಾ ಥಿಯೇಟರ್‌ಗಳಿಗೆ ಬರಲು ಸಾಧ್ಯವಾಗಿರಲಿಲ್ಲ. ಇಷ್ಟು ವರ್ಷಗಳ ತೊಡಕಿನ ನಂತರ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

ಇನ್ನೂ ಖುಷಿಯ ವಿಚಾರ ಅಂದ್ರೆ ಈ ಸಿನಿಮಾದ ಹೀರೋ ರಿಯಲ್‌ ಸ್ಟಾರ್‌ ಉಪೇಂದ್ರ. ಹೌದು ಉಪ್ಪಿ ಹಾಗೂ ರಮ್ಯಾ ನಟಿಸಿದ್ದ ಈ ಸಿನಿಮಾ ಬರೋಬ್ಬರಿ 17 ವರ್ಷಗಳ ನಂತರ ರಿಲೀಸ್‌ ಆಗುತ್ತಿರುವುದು ಸ್ಯಾಂಡಲ್‌ವುಡ್‌ನಲ್ಲೇ ಅಪರೂಪದ ಸಂಗತಿ ಎಂದು ಹೇಳಲಾಗುತ್ತಿದೆ.

Kannada Actress Ramya Movie Rakta Kashmir Is Releasing Soon

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು 2007ರಲ್ಲಿ ಈ ಸಿನಿಮಾ ಘೋಷಿಸಿದ್ರು. ಆಗಿನ ಕಾಲಕ್ಕೇ ಇದು ಬಿಗ್‌ ಬಜೆಟ್‌ ಸಿನಿಮಾ ಎಂದು ಹೇಳಲಾಗಿತ್ತು. ಮೊದಲಿಗೆ ಭೀಮೂಸ್‍ ಬ್ಯಾಂಗ್‍ ಬ್ಯಾಂಗ್‍ ಕಿಡ್ಸ್ ಎಂದು ಟೈಟಲ್‌ ಇಡಲಾಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾ ವಿಚಾರ ಸಖತ್‌ ಸದ್ದು ಮಾಡಿತ್ತು. ಶೂಟಿಂಗ್‌ ಕೂಡ ಪೂರ್ಣಗೊಂಡು ರಿಲೀಸ್‌ ಆಗಲು ವಿಘ್ನಗಳು ಎದುರಾಗಿದ್ದವು. ಈಗ ರಕ್ತ ಕಾಶ್ಮೀರ ಎನ್ನುವ ಟೈಟಲ್‌ ಮೂಲಕ ಸಿನಿಮಾ ರಿಲೀಸ್‌ ಆಗಲು ರೆಡಿಯಾಗಿದೆ.

ಆಗಿನ ಕಾಲಕ್ಕೆ ಬಿಗ್​ ಬಜೆಟ್ ಸಿನಿಮಾ ಆಗಿತ್ತು. ಗ್ರಾಫಿಕ್ಸ್‌ ಕೂಡ ಬಳಸುವುದಾಗಿ ಹೇಳಿಕೊಂಡಿತ್ತು. ಈ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿತ್ತು. ಅಂಬರೀಷ್‌ ಸೇರಿ ಹಲವು ಹಿರಿಯ ನಟರು ಈ ಸಿನಿಮಾಗೆ ಶುಭಕೋರಿದ್ದರು. ಶೂಟಿಂಗ್‌ ಕೂಡ ಮುಗಿದು, ಪ್ರೊಡಕ್ಷನ್‌ ಕೆಲಸಗಳು ಸಹ ನಡೆದಿತ್ತು ಎನ್ನಲಾಗಿದೆ. ಆದರೆ, ಹಲವು ಕಾರಣಗಳಿಂದ ಈ ಸಿನಿಮಾ ಥಿಯೇಟರ್‌ಗಳಿಗೆ ಬರಲು ಸಾಧ್ಯವೇ ಆಗಲಿಲ್ಲ.

ಈಗ ಈ ಸಿನಿಮಾ ಹಲವು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವುದರಿಂದ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. ಭಯೋತ್ಪಾದನೆ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದೆ. ಈ ಸಿನಿಮಾಗೆ ಕಥೆ, ಚಿತ್ರಕಥೆಯನ್ನು ರಾಜೇಂದ್ರಸಿಂಗ್ ಬಾಬು ಅವರೇ ಬರೆದಿದ್ದು, ರಮೇಶ್ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದು, ರಿಯಲ್‌ ಸ್ಟಾರ್‌ ಉಪೇಂದ್ರ, ರಮ್ಯಾ, ದೊಡ್ಡಣ್ಣ, ಓಂಪ್ರಕಾಶ್ ರಾವ್ ಸೇರಿ ದೊಡ್ಡ ತಾರಾಗಣವೇ ಇದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+