'ನಾನು ಹಲವು ಬಾರಿ ಮದುವೆಯಾಗಿದ್ದೇನೆ..' ನಟಿ ರಮ್ಯಾ ಶಾಕಿಂಗ್ ಹೇಳಿಕೆ
ಸ್ಯಾಂಡಲ್‌ವುಡ್ ಕ್ವೀನ್ ಹಾಗೂ ಮೋಹಕತಾರೆ ರಮ್ಯಾ ಅವರ ಮದುವೆ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಈ ಬಗ್ಗೆ ನಟಿ ರಮ್ಯಾ ಕೂಡ ಆಗಾಗ ಬಂದು ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಇತ್ತೀಚೆಗೂ ರಮ್ಯಾ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ರಮ್ಯಾ ಖುದ್ದು ಮಾತನಾಡಿದ್ದಾರೆ.
ಮೋಹಕ ತಾರೆ ರಮ್ಯಾಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆಯಂತೆ. ನಟಿ ರಮ್ಯಾ ಅವರು ಇದೇ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿತ್ತು.

ರಮ್ಯಾ ಅವರ ಮದುವೆ ಕುರಿತು ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ರಮ್ಯಾ ಅವರ ಅಭಿಮಾನಿಗಳು ಸಾಕಷ್ಟು ಭಾರೀ ರಮ್ಯಾ ಅವರ ಬಳಿ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನ ಮುಂದಿಟ್ಟಿದ್ದರು. ಈ ಬಗ್ಗೆ ಎಲ್ಲಿಯೂ ಸ್ಪಷ್ಟ ಉತ್ತರ ಕೊಡದೆ ರಮ್ಯಾ ಸೈಲೆಂಟ್ ಆಗುತ್ತಿದ್ದರು. ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿ ರಮ್ಯಾ ಅವರ ಮದುವೆ ಬಹುತೇಕ ಫಿಕ್ಸ್ ಆಗಿದೆ ಎಂದು ವರದಿಯಾಗಿತ್ತು.
ಅಲ್ಲದೆ ಸದ್ಯದಲ್ಲೇ ರಮ್ಯಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ. ನವೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ರಮ್ಯಾ ಅವರು ಉದ್ಯಮಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ. ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಅವರನ್ನು ರಮ್ಯಾ ವಿವಾಹ ಆಗಲಿದ್ದಾರೆ ಎನ್ನುವ ಸುದ್ದಿ ಸಖತ್ ಸದ್ದು ಮಾಡಿತ್ತು.
ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ನಟಿ ರಮ್ಯಾ, ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ʼಮಾಧ್ಯಮಗಳಿಂದ ನಾನು ಹಲವಾರು ಬಾರಿ ಮದುವೆಯಾಗಿದ್ದೇನೆ, ನಾನು ಇದರ ಲೆಕ್ಕ ಕಳೆದುಕೊಂಡಿದ್ದೇನೆ. ಒಂದು ವೇಳೆ ನಾನು ಮದುವೆ ಮಾಡಿಕೊಳ್ಳುವುದಾದರೆ ಆ ವಿಚಾರವನ್ನು ನಾನೇ ನಿಮಗೆ ಹೇಳುತ್ತೇನೆ. ದಯವಿಟ್ಟು ಆಧಾರವಿಲ್ಲದೆ ಎಲ್ಲಿಂದಲೋ ಬರುವ ಈ ವದಂತಿಗಳನ್ನು ನಂಬುವುದನ್ನು ನಿಲ್ಲಿಸಿʼ ಎಂದು ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ. ರಮ್ಯಾ ಅವರ ಮದುವೆ ಕಣ್ತುಂಬಿಕೊಳ್ಳಬೇಕು ಎಂದಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.

ರಮ್ಯಾ ಅವರು ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್ ಮೋಹಕ ತಾರೆ ಅಂತಲೇ ಫೇಮಸ್. ರಮ್ಯಾ ಅವರ ಮತ್ತೊಂದು ಹೆಸರು ದಿವ್ಯಾ ಸ್ಪಂದನಾ. ರಮ್ಯಾ ಅವರಿಗೆ ಇಂಟರ್ನೆಟ್‌ನಲ್ಲಿರುವ ಮಾಹಿತಿ ಪ್ರಕಾರ ಈಗ 41 ವರ್ಷ ವಯಸ್ಸು. ಪುನೀತ್ ರಾಜ್‌ಕುಮಾರ್ ಅಭಿನಯದ ʼಅಭಿʼ ಚಿತ್ರದ ಮೂಲಕ 2003ರಲ್ಲಿ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.












Click it and Unblock the Notifications