Darshan Thoogudeepa: ಕನ್ನಡ ಚಿತ್ರರಂಗಕ್ಕೆ ನಟ ದರ್ಶನ್‌ ಎಷ್ಟು ಮುಖ್ಯ? ಕುಚಿಕು ಬಗ್ಗೆ ಕಿಚ್ಚ ಅಚ್ಚರಿ ಮಾತು

ನಟ ದರ್ಶನ್‌ ಹಾಗೂ ನಟ ಕಿಚ್ಚ ಸುದೀಪ್‌ ಅವರು ಕುಚಿಕು ಗೆಳೆಯರಾಗಿದ್ದವರು. ಆದರೆ, ಕಾರಣಾಂತರಗಳಿಂದ ಅವರು ಸದ್ಯ ದೂರವಾಗಿದ್ದಾರೆ. ಮತ್ತೆ ಈ ಇಬ್ಬರನ್ನು ಒಟ್ಟಾಗಿ ನೋಡಬೇಕು ಎನ್ನುವುದು ಹಲವರ ಆಸೆ. ಇದೀಗ ಮ್ಯಾಕ್ಸ್‌ ಸಿನಿಮಾದ ಸಕ್ಸಸ್‌ನಲ್ಲಿರುವ ನಟ ಕಿಚ್ಚ ಸುದೀಪ್‌ ಅವರು ದರ್ಶನ್‌ ಅವರ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದರ್ಶನ್‌ ಅವರು ಎಷ್ಟು ಮುಖ್ಯ ಎಂದೂ ವಿವರಿಸಿದ್ದಾರೆ.

ಮ್ಯಾಕ್ಸ್‌ ಸಿನಿಮಾದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸುದೀಪ್‌ ದರ್ಶನ್‌ ಅವರನ್ನು ನೆನೆದಿದ್ದಾರೆ. ಯಶ್‌, ದರ್ಶನ್‌, ಉಪ್ಪಿ ಸರ್‌, ಧ್ರುವ, ಶಿವಣ್ಣ ಪ್ರತಿಯೊಬ್ಬರೂ ಸೇರಿದ್ರೇನೆ ಕನ್ನಡ ಚಿತ್ರರಂಗ ಎಂದು ಸುದೀಪ್‌ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಅಲ್ಲದೆ ದರ್ಶನ್‌ ಅಭಿಮಾನಿಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ದರ್ಶನ್‌ ಅಭಿಮಾನಿಗಳ ಬಗ್ಗೆ ಬೈಬೇಡಿ, ಅವರಿಗೆ ಏನಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಅವರು ನೋವಲ್ಲಿದ್ದು, ಏನು ಮಾಡಬೇಕು ಎನ್ನುವುದು ಎಂದು ಅರ್ಥವಾಗ್ತಿಲ್ಲ ಎಂದಿದ್ದೆ. ಹೀಗಾಗಿ ಎಲ್ಲದಕ್ಕೂ ನಾನು ಟಾಂಟ್‌ ಯಾಕೆ ಕೊಡಬೇಕು? ಎಂದು ಹೇಳಿದ್ದಾರೆ.

Kannada Actor Sudeep Praises Darshan Thoogudeepa As A Key Pillar Of Sandalwood

ನಾವೆಲ್ಲ ಬಹಳ ಚಿಕ್ಕವರು. ಇಂದು ಚಿತ್ರರಂಗ ಬಹಳ ಸೊರಗುತ್ತಿದೆ ಎನ್ನುವಾಗ ನಾವೆಲ್ಲ ಸೇರಿ ಸಿನಿಮಾ ಉಳಿಸಬೇಕಾ? ಅಥವಾ ಈ ತರ ಟಾಂಟ್‌ ಕೊಡಬೇಕಾ? ಇದರಿಂದ ನಮಗೆಲ್ಲ ಏನು ಸಿಗುತ್ತೆ ಎಂದು ಸುದೀಪ್‌ ಕೇಳಿದ್ದಾರೆ. ನಾವು ಛತ್ರಪತಿಯೂ ಅಲ್ಲ, ಚಕ್ರವರ್ತಿಯೂ ಅಲ್ಲ, ಒಂದಲ್ಲ ಒಂದು ದಿನ ಹೋಗುವವರೇ. ಇದ್ದಾಗ ಸಿನಿಮಾದೊಂದಿಗೆ ಬೆಳೆಯೋಣ, ಒಳ್ಳೆಯ ಸಿನಿಮಾಗಳನ್ನು ಮಾಡೋಣ. ಎಲ್ಲರೂ ನನಗೆ ಸಹೋದರರಂತೆ ಇದ್ದವರು ಎಂದು ಸುದೀಪ್‌ ಹೇಳಿದ್ದಾರೆ.

ಈಗ ಎಲ್ಲರ ಅಭಿಮಾನಿಗಳು ಯಶ್ ಬಾಸ್, ಧ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಎಂದೇ ಕರೆಯುತ್ತಾರೆ. ಎಲ್ಲರಿಗೂ ಅವರವರ ಅಭಿಮಾನಿಗಳು ಬಾಸ್‌ ಎಂದೇ ಕರೆಯುತ್ತಾರೆ. ನನಗೂ ಹಾಗೂ ದರ್ಶನ್​ ನಡುವೆ ಏನೂ ಇಲ್ಲ. ದರ್ಶನ್‌ ಕೂಡ ಬಹಳ ಕಷ್ಟಪಟ್ಟು ಮೇಲೆ ಬಂದವರು. ಚಿತ್ರರಂಗದ ಪ್ರತಿಯೊಬ್ಬರು ಕೂಡ ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ. ಸ್ಯಾಂಡಲ್‌ವುಡ್‌ ಇಂದು ಬಹಳ ನೋವಲ್ಲಿದೆ. ಚಿತ್ರರಂಗ ಬೆಳೆಯಬೇಕು ಎಂದರೆ ಇಂತಹ ವಿವಾದಗಳು ಮಾಡುವುದು ಬೇಡ ಎಂದು ಇತ್ತೀಚೆಗೆ ಹುಟ್ಟಿಕೊಂಡ ಬಾಸ್‌ ವಿವಾದಕ್ಕೆ ಸುದೀಪ್ ತೆರೆ ಎಳೆದಿದ್ದಾರೆ.

Kannada Actor Sudeep Praises Darshan Thoogudeepa As A Key Pillar Of Sandalwood

ನನ್ನ ಅಭಿಮಾನಿಗಳು ಬೇರೆ ಎಲ್ಲ ನಟ ಸಿನಿಮಾಗಳನ್ನು ನೋಡುತ್ತಾರೆ. ಹಾಗೆಯೇ ಬೇರೆ ನಟರ ಅಭಿಮಾನಿಗಳು ನನ್ನ ಸಿನಿಮಾಗಳನ್ನೂ ನೋಡ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ನಡೆಯುವುದಕ್ಕೆ ಏನೋ ಒಂದು ರೀತಿ ಬಿಂಬಿಸುವುದು ತಪ್ಪು. ನಮಗೆ ಅಹಂಕಾರ ಇದೆ ಎಂದು ಭಾವಿಸುವುದು ತಪ್ಪು. ಹಿರಿಯರು ಕನ್ನಡ ಚಿತ್ರರಂಗವನ್ನು ಹೊತ್ತು ಬೆಳೆಸಿದ್ದಾರೆ. ಇಂದು ಆ ಭಾರವನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ನಾವು ಅದನ್ನು ಮತ್ತಷ್ಟು ಬೆಳೆಸಿ ಮುಂದಿನ ತಲೆಮಾರಿನವರಿಗೆ ಕೊಡಬೇಕಿದೆ ಎಂದು ಸುದೀಪ್‌ ಕರೆ ನೀಡಿದ್ದಾರೆ. ಜೊತೆಗೆ ದರ್ಶನ್‌ ಚಿತ್ರರಂಗಕ್ಕೆ ಎಷ್ಟು ಮುಖ್ಯ ಎಂಬುದನ್ನೂ ಸುದೀಪ್‌ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+