ಕನ್ನಡ ನಟನಿಗೆ ಮಾಲ್‌ನಲ್ಲೇ ಗೂಸಾ ಕೊಟ್ಟ ಮಹಿಳಾ ಫ್ಯಾನ್! ಕಾರಣ ಆ ಒಂದು ಸೀನ್
ಸಿನಿಮಾಗಳು ಕೆಲವರು ತುಂಬಾ ಹತ್ತಿರಕ್ಕೆ ಕನೆಕ್ಟ್ ಆಗಿಬಿಡುತ್ತವೆ. ಕೆಲ ದೃಶ್ಯಗಳು ಅವರ ಭಾವನೆಗಳ ಮೇಲೆ ದಾಳಿ ಮಾಡಿದಾಗ ಮಿತಿಮೀರಿದ ಅಭಿಮಾನ ಒಮ್ಮೊಮ್ಮೆ ಏನನ್ನು ಬೇಕಾದರೂ ಮಾಡುವ ಹಂತಕ್ಕೆ ಕೊಂಡೊಯ್ಯುತ್ತದೆ. ಇಂತದ್ದೇ ಘಟನೆಯೊಂದು ಸಿನಿಮಾವೊಂದರ ರಿಲೀಸ್ ವೇಳೆ ಸಂಭವಿಸಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಲವ್ ರೆಡ್ಡಿ (LoveReddy) ಸಿನಿಮಾದಲ್ಲಿ ಕನ್ನಡ ಖ್ಯಾತ ಕಿರುತೆರೆ ನಟ ಕೂಡ ನಟಿಸಿದ್ದರು. ಇವರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು ಎನ್ನಲಾಗಿದೆ. ಈ ಸಿನಿಮಾ ಹಲವು ಮಾಲ್ ಹಾಗೂ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ. ಇನ್ನು ಚಿತ್ರತಂಡ ಕೂಡ ಸಿನಿಮಾ ಬಗ್ಗೆ ಪ್ರೇಕ್ಷಕರು ಏನಂತಾರೆ? ಎಂದು ತಿಳಿಯಲು ಮಾಲ್‌ಗೆ ತೆರಳಿದ್ದರು. ಈ ವೇಳೆ ಸಿನಿಮಾದಲ್ಲಿ ವಿಲನ್ ಆಗಿದ್ದ ಕನ್ನಡದ ನಟನ ಮೇಲೆ ಮಹಿಳೆಯೊಬ್ಬರು ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.

ಕನ್ನಡದ ಕಿರುತೆರೆಯಲ್ಲಿ ಮಿಂಚಿರುವ ನಟ ಎನ್.ಟಿ.ರಾಮಸ್ವಾಮಿ ಅವರು ಈ ಸಿನಿಮಾದಲ್ಲಿ ತಂದೆಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ಎನ್.ಟಿ.ರಾಮಸ್ವಾಮಿ ಅವರು ಮಗಳ ಮೇಲೆ ಹಲ್ಲೆ ನಡೆಸಿ ದಂಪತಿಯನ್ನು ದೂರ ಮಾಡಿರುವ ದೃಶ್ಯವಿದೆ. ಈ ದೃಶ್ಯವು ಮಹಿಳೆಯ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
#LoveReddy చిత్ర నటుడిపై ప్రేక్షకురాలి దాడి..
— Ramesh Pammy (@rameshpammy) October 24, 2024
హైదరాబాద్ నిజాంపేట జీపీఆర్ మాల్ లో ఘటన
సినిమా క్లైమాక్స్ చూసి ఎమోషనల్ అయిన ఒక ప్రేక్షకురాలు థియేటర్స్ విజిట్ కు వెళ్లిన చిత్రబృందంలోని తండ్రి పాత్రను పోషించిన ఎన్ టీ రామస్వామి అనే నటుడు నిజంగానే ఆ ప్రేమజంటను విడిదీశాడని కోపంతో తిడుతూ… pic.twitter.com/FY9uuXTUlC
ಶೋ ಮುಗಿದ ನಂತರ ಇಡೀ ಚಿತ್ರತಂಡ ಪರದೆಯ ಮುಂಭಾಗಕ್ಕೆ ಬಂದು ಈ ಸಿನಿಮಾ ಹೇಗಿದೆ ಎಂದು ಪ್ರೇಕ್ಷಕರನ್ನು ಕೇಳುತ್ತಿದ್ದರು. ಇವರೊಂದಿಗೆ ಎನ್.ಟಿ.ರಾಮಸ್ವಾಮಿ ಕೂಡ ವೇದಿಕೆಯಲ್ಲೇ ಇದ್ದರು. ಈ ವೇಳೆ ಏಕಾಏಕಿ ಓಡಿ ಬಂದ ಮಹಿಳಾ ಪ್ರೇಕ್ಷಕಿಯು ರಾಮಸ್ವಾಮಿ ಅವರಿಗೆ ಕಪಾಳಮೋಕ್ಷ ಮಾಡಿ, ಕೋಪದಿಂದ ವರ್ತಿಸಿದ್ದಾರೆ.
ಈ ಘಟನೆಯಿಂದ ಅಲ್ಲಿದ್ದವರೆಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಬಳಿಕ ಆ ಅಭಿಮಾನಿಯನ್ನು ಅಲ್ಲಿದ್ದವರು ತಡೆದಿದ್ದಾರೆ. ರಾಮಸ್ವಾಮಿ ಅವರು ಕೂಡ ಮಹಿಳೆಯಿಂದ ಹಲ್ಲೆಗೆ ಒಳಪಟ್ಟು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲವ್ ರೆಡ್ಡಿ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರವನ್ನು ಕನ್ನಡದ ನಟ ಎನ್.ಟಿ.ರಾಮಸ್ವಾಮಿ ನಿರ್ವಹಿಸಿದ್ದರು. ಅದರಲ್ಲಿ ರಾಮಸ್ವಾಮಿ ಅವರು ತಮ್ಮ ಪುತ್ರಿಯ ಮೇಲೆ ಕಲ್ಲಿನಿಂದ ಒಡೆಯುವ ದೃಶ್ಯವಿದೆ. ಇನ್ನು ಇದೇ ದೃಶ್ಯದಿಂದ ಮಹಿಳೆ ಕೆರಳಿ, ನಿಜವಾಗಿಯೂ ಆ ನಟ ವಿಲನ್ ಎಂದು ಭಾವಿಸಿ ಕಪಾಳ ಮೋಕ್ಷ ಮಾಡಿದ್ದಾರೆ.
ಅಲ್ಲದೆ ತೆಲುಗಿನಲ್ಲಿ ಪ್ರೇಮಿಗಳು ದೂರ ಮಾಡ್ತೀಯೇನೋ..? ಎಂದು ಕೋಪದಲ್ಲೇ ರಾಮಸ್ವಾಮಿ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಶರ್ಟ್ ಎಳೆದಾಡಿದ್ದಾರೆ. ಕೆಲವರು ಸಿನಿಮಾಗಳನ್ನು ಯಾವ ರೀತಿ ಮಿತಿಮೀರಿ ಹಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ಉದಾಹರಣೆಯಾಗಿದೆ.
ಇನ್ನು ಈ ಘಟನೆ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ಘಟನೆ ನಿಜವಾಗಿಯೂ ನಡೆದಿದೆಯೇ? ಅಥವಾ ಸಿನಿಮಾ ಪ್ರಚಾರಕ್ಕೆ ಗಿಮಿಕ್ ಇರಬಹುದಾ? ಎಂದೂ ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ದೃಶ್ಯದಲ್ಲಿ ಈ ನಟನಿಗೆ ಕಪಾಳಮೋಕ್ಷ ಮಾಡಿದಾಗ ಅಲ್ಲಿದ್ದ ಕೆಲವರಿಗೆ ಗಂಭೀರತೆಯೇ ಇರಲಿಲ್ಲ. ಎಲ್ಲ ಪ್ಲ್ಯಾನ್ ಮಾಡಿ ಮಾಡಿರಬಹುದು. ಇದಕ್ಕೆ ನಮ್ಮ ಕನ್ನಡದ ನಟನನ್ನೇ ಬಳಸಿಕೊಳ್ಳಬೇಕಿತ್ತಾ? ಎಂದು ಬೇಸರ ಕೂಡ ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications