ದೇವರು ನನ್ನ ಆಯಸ್ಸು ಶಿವಣ್ಣನಿಗೆ ಕೊಡಲಿ ಎಂದು ಪ್ರಾರ್ಥಿಸಿದ ಖ್ಯಾತ ನಟ, ಯಾರು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಆಪರೇಷನ್ ನಿಮಿತ್ತ ಅಮೇರಿಕಾಗೆ ತೆರಳಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎಂದು ಚಿತ್ರರಂಗದ ಇತರ ನಟರು ಕೂಡ ಭಗವಂತನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ನಟ ಸುದೀಪ್ ಸೇರಿದಂತೆ ಹಲವರು ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿ ಬಂದಿದ್ದರು.
ಇನ್ನು ಇಂದು ಶಿವರಾಜ್ ಕುಮಾರ್ ಅವರ ಬಗ್ಗೆ ಸ್ಯಾಂಡಲ್‌ವುಡ್ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾತನಾಡಿದ್ದಾರೆ. ನಮ್ಮ ಇಂಡಸ್ಟ್ರಿಗೆ ಶಿವಣ್ಣ ಗಾಡ್ ಫಾದರ್ ಇದ್ದಂತ. ಅವರ ಆರೋಗ್ಯ ಸುಧಾರಿಸಲಿ, ಲಿವಿಂಗ್ ಲೆಜೆಂಡ್ ಶಿವಣ್ಣನಿಗೆ ಆಪರೇಷನ್ ನಡೀತಿದ್ದು, ಆ ದೇವರು ನನಗೆ ಕೊಟ್ಟಿರುವ ಆಯಸ್ಸು ಶಿವಣ್ಣನಿಗೂ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.

ನಿರ್ದೇಶಕ ಪ್ರೇಮ್ ಕೂಡ ಶಿವಣ್ಣ ಅವರ ಆರೋಗ್ಯ ಸುಧಾರಿಸಲಿ ಎಂದು ಕೋರಿಕೊಂಡಿದ್ದಾರೆ. ಅಮೇರಿಕಾದಲ್ಲಿ ಶಿವಣ್ಣನ ಆಪರೇಷನ್ ನಡೀತಿದೆ. ಅವರು ಎನರ್ಜಿಟಿಕ್ ಆಗಿರಬೇಕು. ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಸದ್ಯ ಅಮೇರಿಕಾದಲ್ಲಿರುವ ನಟ ಶಿವರಾಜ್‌ಕುಮಾರ್ ಅವರಿಗೆ ಇಂದು ರಾತ್ರಿ ಆಪರೇಷನ್ ನಡೆಯಲಿದೆ. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿರುವ ಅವರು ಚಿಕಿತ್ಸೆಗೆಂದು ಕಳೆದ ವಾರ ಕುಟುಂಬ ಸಮೇತರಾಗಿ ಅಮೇರಿಕಾಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಇಂದು ರಾತ್ರಿ 8 ಗಂಟೆಗೆ ಶಿವರಾಜ್ ಕುಮಾರ್ ಅವರಿಗೆ ಆಪರೇಷನ್ ನಡೆಯಲಿದೆ ಎಂದು ವರದಿಯಾಗಿದೆ.
ಆಪರೇಷನ್ ಬಳಿಕ ಅವರು ಅಮೇರಿಕಾದಲ್ಲೇ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಅವರು ಮುಂದಿನ ಜನವರಿ ಕೊನೆಯ ವಾರದಲ್ಲಿ ಆರೋಗ್ಯ ಸುಧಾರಿಸಿಕೊಂಡು ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಶಿವಣ್ಣ ಬೇಗ ಗುಣಮುಖರಾಗಿ ಬರಬೇಕು ಎಂದು ಅವರ ಅಭಿಮಾನಿಗಳು ಎಲ್ಲೆಡೆ ಪೂಜೆ, ಹೋಮ-ಹವನ ಮಾಡಿಸಿದ್ದಾರೆ. ಶಿವಣ್ಣ ಅವರ ಕಾರು ಚಾಲಕರಾದ ಗೋವಿಂದಣ್ಣ ಅವರು ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಅನಾರೋಗ್ಯದ ಹಿನ್ನೆಲೆ ಶಿವರಾಜ್‌ಕುಮಾರ್ ಅವರು ಅಮೇರಿಕಾದ ಮಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಪರೇಷನ್ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಶಿವಣ್ಣ ಅವರು ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಬುಧವಾರ ಅಮೇರಿಕಾಗೆ ತಮ್ಮ ಕುಟುಂಬದೊಂದಿಗೆ ತೆರಳಿದ್ದಾರೆ. ಮಾಹಿತಿಯಂತೆ ಅವರಿಗೆ ಇಂದು ಆಪರೇಷನ್ ನಡೆಯಲಿದೆ.
ಶಿವಣ್ಣ ಅವರೊಂದಿಗೆ ಪತ್ನಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ನಿವೇದಿತಾ ಕೂಡ ಅಮೇರಿಕಾಗೆ ತೆಳಿದ್ದಾರೆ. ಶಿವಣ್ಣ ಅವರ ಸಂಬಂಧಿಯೂ ಆಗಿರುವ ಸಚಿವ ಮಧು ಬಂಗಾರಪ್ಪ ಅವರು ಅಮೇರಿಕಾಗೆ ತೆರಳಲಿದ್ದಾರೆ. ಇನ್ನು ಕಳೆದ ವಾರ ಶಿವಣ್ಣ ಅವರು ಅಮೇರಿಕಾಗೆ ತೆರಳುತ್ತಾರೆ ಎಂಬ ವಿಚಾರ ತಿಳಿದು, ನಟ ಕಿಚ್ಚ ಸುದೀಪ್, ವಿನೋದ್ ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಪ್ರಮುಖರು ಶಿವಣ್ಣ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದರು. ಅಲ್ಲದೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದವರು ಕೂಡ ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications