Darshan Thoogudeepa: ‘ದರ್ಶನ್ ಒರಿಜಿನಲ್ ಹೆಸರು ಹೇಮಂತ್ ಕುಮಾರ್ ನಾಯ್ಡು ಆಂಧ್ರ ಮೂಲದವರು..’ ಹಿಂಗೆ ಹೇಳಿದ್ಯಾರು?

ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದ ನಟ. ಆದ್ರೆ ಈಗ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ ದರ್ಶನ್ ತೂಗುದೀಪ್ ಅವರು. ಹೀಗಿದ್ದಾಗ ನಟ ದರ್ಶನ್ ಅವರ ನಿಜವಾದ ಹೆಸರು & ಅವರ ಹಿನ್ನೆಲೆ ಏನು? ಎಂಬ ಹಲವು ಪ್ರಶ್ನೆಗಳು ಕಾಡತೊಡಗಿವೆ. ಇದೇ ಸಮಯದಲ್ಲಿ 'ದರ್ಶನ್ ಒರಿಜಿನಲ್ ಹೆಸರು ಹೇಮಂತ್ ಕುಮಾರ್ ನಾಯ್ಡು ಅಂತಾ ಆಂಧ್ರ ಮೂಲದವರು..' ಅಂತಾ ಹೇಳಿಕೆಯನ್ನು ನೀಡುವ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ ಇಲ್ಲೊಬ್ಬರು!

ಹೌದು, ನಟ ದರ್ಶನ್ ಹಾಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿಕೊಂಡು & ದುಡ್ಡು ಮಾಡಿಕೊಂಡು ಇದ್ದರು ಇದರ ಜೊತೆ ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಲಾಭ ಮಾಡುವಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ದರ್ಶನ್ ತೂಗುದೀಪ್ ರೆಡಿ ಮಾಡ್ತಿದ್ರು. ಆದರೆ ಆಗಿದ್ದೆಲ್ಲಾ ಉಲ್ಟಾ, ಪವಿತ್ರಾ ಗೌಡ ಮಾತು ಕೇಳಿ ಹಾಳಾಗಿ ಹೋದೆ ಅನ್ನೋ ನೋವು & ಕೋಪ ಈಗ ನಟ ದರ್ಶನ್ ತೂಗುದೀಪ್ ಅವರಿಗೆ ಕಾಡುತ್ತಿದೆ ಎನ್ನಲಾಗಿದೆ. ಈ ಸಮಯದಲ್ಲೇ, ನಟ ದರ್ಶನ್ ವಿರುದ್ಧ ಇಲ್ಲೊಬ್ಬರು ಗಂಭೀರ ಹೇಳಿಕೆ ನೀಡಿದ್ದಾರೆ. 'ದರ್ಶನ್ ಒರಿಜಿನಲ್ ಹೆಸರು ಹೇಮಂತ್ ಕುಮಾರ್ ನಾಯ್ಡು ಅಂತಾ ಆಂಧ್ರ ಮೂಲದವರು..' ಅಂತಾ ಹೇಳಿಕೆ ನೀಡಿರುವ ಆ ವ್ಯಕ್ತಿ ಯಾರು ಗೊತ್ತೆ? ಮಾಹಿತಿ ಇಲ್ಲಿದೆ ಮುಂದೆ ಓದಿ ತಿಳಿಯೋಣ ಬನ್ನಿ.

Kannada Actor Darshan Thoogudeepa Original Name Is Here

'ಹೇಮಂತ್ ಕುಮಾರ್ ನಾಯ್ಡು'

ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಜೈಲಿಗೆ ಹೋದ ನಂತರ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಳಂಕ ಅಂಟಿಕೊಂಡಿದೆ. ಈ ಘಟನೆ ಬಳಿಕ ನಟ ದರ್ಶನ್ ತೂಗುದೀಪ್ ಅವರನ್ನು ಚಿತ್ರರಂಗ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ ಬ್ಯಾನ್ ಮಾಡಲು ಸಾಧ್ಯ ಇಲ್ಲವೇ, ಇಲ್ಲ ಎಂಬ ಹೇಳಿಕೆಯನ್ನ ಈಗಾಗಲೇ ಸಿನಿಮಾ ಸಂಘದ ಮುಖ್ಯಸ್ಥರು ಹೇಳಿದ್ದಾರೆ.

ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದಾರೆ ಎಂಬ ಆಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಲಾಯರ್ ಜಗದೀಶ್ ಅವರ ಆಡಿಯೋ ಎಂದು ಆರೋಪ ಮಾಡಲಾಗಿರುವ ಆಡಿಯೋದಲ್ಲಿ, 'ದರ್ಶನ್ ಒರಿಜಿನಲ್ ಹೆಸರು ಹೇಮಂತ್ ಕುಮಾರ್ ನಾಯ್ಡು ಅಂತಾ ಆಂಧ್ರ ಮೂಲದವರು..' ಅಂತಾ ಹೇಳಿರುವ ಆಡಿಯೋ ಕಂ ವಿಡಿಯೋ ವೈರಲ್ ಆಗುತ್ತಿದೆ.

ತುಮಕೂರು ಜೈಲಿಗೆ ದರ್ಶನ್ ಶಿಫ್ಟ್?

ದರ್ಶನ್ ತೂಗುದೀಪ್‌ಗೆ ಇದೀಗ ತುಂಬಾ ಕಷ್ಟದ ಸಮಯ ಹೊರಗಿದ್ದಾಗ ಹೀರೋ ಆಗಿ ಮೆರೆದಿದ್ದ & ಮನಸ್ಸಿಗೆ ಬಂದಂತೆ ಹಣ ಖರ್ಚು ಮಾಡಿ ಫಾರಿನ್ ಸುತ್ತಾಡಿ ಬರುತ್ತಿದ್ದ ದರ್ಶನ್‌ಗೆ ಜೈಲು ಊಟ ಗತಿ ಎಂಬಂತಾಗಿದೆ. ರಾಗಿ ಮುದ್ದೆ ಉಂಡು & ಕಂಬಿ ಎಣಿಸಿ ಮಲಗಬೇಕಾದ ಸಮಯವೂ ಬಂದಿದೆ. ಈ ಕಾರಣಕ್ಕೆ ನಟ ದರ್ಶನ್ ಆದಷ್ಟು ಬೇಗ ಹೊರ ಬರಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ನಟ ದರ್ಶನ್ ಅವ್ರು ತುಮಕೂರು ಜೈಲಿಗೆ ಶಿಫ್ಟ್ ಆಗಬಹುದು ಎಂಬ ಸುಳ್ಳು ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಕುರಿತು ಇದುವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಹೇಳಿಕೆ ಸಿಕ್ಕಿಲ್ಲ. ಇಷ್ಟೆಲ್ಲದರ ನಡುವೆ ಇದೀಗ ಲಾಯರ್ ಜಗದೀಶ್ ಅವರದ್ದು ಎಂದು ಹೇಳಲಾಗಿರುವ ಆಡಿಯೋ ಒಂದು ಫುಲ್ ವೈರಲ್ ಆಗುತ್ತಿದೆ.

ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ?

ನಟ ದರ್ಶನ್ ತೂಗುದೀಪ್ ಸಾಕಷ್ಟು ಪ್ರಭಾವಿ ವ್ಯಕ್ತಿ, ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳಿಗೂ ಕೆಲಸ ಮಾಡಿಕೊಡುತ್ತಿದ್ದರು. ಚುನಾವಣೆಯ ವೇಳೆ ಪ್ರಚಾರ ನಡೆಸಿ, ಮತದಾರರ ಗಮನ ಸೆಳೆಯಲು ಸಾಹಯ ಮಾಡುತ್ತಿದ್ದರು ಎಂಬ ಮಾತು ಇದೆ. ಈಗ ಅದೇ ರಾಜಕಾರಣಿಗಳು ನಟ ದರ್ಶನ್ ನೆರವಿಗೆ ಬಂದಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಏನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಬಿರಿಯಾನಿ ಊಟದ ಜೊತೆಗೆ, ಎಣ್ಣೆ ಕೂಡ ಸಪ್ಲೈ ಆಗುತ್ತಿದೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಆರೋಪಗಳಿಗೆ ಯಾವುದೇ ಸಾಕ್ಷಿ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+