ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿ ಯಾರನ್ನಾದ್ರೂ ಗರ್ಭಿಣಿ ಮಾಡಬಹುದು: ನಟಿ ಕಂಗನಾ

ಸಿನಿಮಾ ನಟಿಯರು ತಮ್ಮ ನಟನೆಯ ಜೊತೆಗೆ ವಿವಾದಗಳಿಂದಲೂ ಹೆಚ್ಚು ಗಮನ ಸೆಳೆಯುತ್ತಾರೆ. ಈ ಪೈಕಿ ಬಾಲಿವುಡ್‌ ನಟಿ, ರಾಜಕಾರಣಿ ಕಂಗನಾ ರನೌತ್ (Kangana Ranaut) ಕೂಡ ಪ್ರಮುಖರು. ತಮ್ಮ ನೇರ ಹಾಗೂ ಬೋಲ್ಡ್‌ ಹೇಳಿಕೆಗಳಿಂದಲೇ ಕಂಗನಾ ಇತ್ತೀಚೆಗೆ ದೇಶದೆಲ್ಲೆಡೆ ಸುದ್ದಿಯಾಗುತ್ತಿದ್ದಾರೆ. ಇನ್ನು ಈಗಿನ ಯುವಜನರು ಡೇಟಿಂಗ್‌, ಲಿವ್‌-ಇನ್‌ ರಿಲೇಷನ್‌ಶಿಪ್‌ (Live-In Relationship) ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಈ ಡೇಟಿಂಗ್‌ ಅಪ್ಲಿಕೇಷನ್‌ಗಳು ಹಾಗೂ ಲಿವ್‌-ಇನ್‌ ರಿಲೇಷನ್‌ಶಿಪ್‌ ಬಗ್ಗೆ ಕಂಗನಾ ಅಚ್ಚರಿ ಹೇಳಿಕೆಗಳನ್ನು ನೀಡಿದ್ದು, ಈ ವಿಡಿಯೋ ಭಾರೀ ವೈರಲ್‌ ಆಗಿ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ಸಂದರ್ಶನದಲ್ಲಿ ಅವರು ಸಂದರ್ಶನದಲ್ಲಿ, 'ಆಧುನಿಕ ಡೇಟಿಂಗ್ ಸಂಸ್ಕೃತಿಯು ಸಾಮಾನ್ಯ ಜನರಿಗೆ ಅವಮಾನಕರ ಮತ್ತು ಅನರ್ಹ ಎಂದು ಕರೆದಿದ್ದಾರೆ. ಪ್ರತಿಯೊಬ್ಬರಿಗೂ ಆರ್ಥಿಕ, ದೈಹಿಕ ಅಥವಾ ಇನ್ಯಾವುದೇ ವಿಚಾರಗಳಲ್ಲಿ ಅಗತ್ಯತೆ ಇರುತ್ತೆ. ಪ್ರತಿಯೊಬ್ಬ ಮಹಿಳೆ ಮತ್ತು ಪುರುಷನಿಗೂ ಅಗತ್ಯತೆಗಳಿವೆ. ಆದರೆ ನಾವು ಅವುಗಳನ್ನು ಹೇಗೆ ಪರಿಹರಿಸುತ್ತೇವೆ? ಎನ್ನುವುದೇ ದೊಡ್ಡ ಪ್ರಶ್ನೆ. ನಾವು ಅದನ್ನು ಸೊಗಸಾಗಿ ಮಾಡುತ್ತೇವೆಯೇ ಅಥವಾ ಪ್ರತಿ ರಾತ್ರಿ ಹೆಚ್ಚು ಒರಟಾಗಿ ಮಾಡುತ್ತೇವೆಯೇ? ಈಗ ಡೇಟಿಂಗ್ ಎಂದರೆ ಅದೇ ಆಗಿದೆ. ಇದು ಭಯಾನಕ ಪರಿಸ್ಥಿತಿಯಲ್ಲಿದೆ' ಎಂದಿದ್ದಾರೆ ಕಂಗನಾ.

Kangana Ranaut Bold Statement On Live-In Relationships Men Can Impregnate And Run Away

'ಡೇಟಿಂಗ್‌ ಆಪ್‌ನಲ್ಲಿ ಸಿಗೋರು ಡೇಂಜರ್'

'ನಾನು ಎಂದಿಗೂ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಇರಲು ಬಯಸಲಿಲ್ಲ. ಅದು ನಮ್ಮ ಸಮಾಜಕ್ಕೆ ಮಾರಕ. ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿಯು ಡೇಟಿಂಗ್ ಅಪ್ಲಿಕೇಶನ್‌ ಬಳಸಲು ಇಷ್ಟಪಡಲ್ಲ ಎಂದು ನಾನು ಭಾವಿಸುತ್ತೇನೆ. ಆತ್ಮವಿಶ್ವಾಸದ ಕೊರತೆಯಿರುವ ಜನರು ಅಂತಹ ಸ್ಥಳಗಳಿಗೆ ಹೋಗುತ್ತಾರೆ. ಅಂತಹ ಅಪ್ಲಿಕೇಶನ್‌ಗಳನ್ನು ಬಳಸುವ ಜನರೊಂದಿಗೆ ಮಾತುಕತೆ ನಡೆಸುವುದನ್ನು ಊಹಿಸಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ನೀವು ಕೆಲಸ ಮಾಡುವ ಕಚೇರಿಗಳಲ್ಲಿ ಅಥವಾ ನೀವು ಓದುವ ಕಾಲೇಜುಗಳಲ್ಲಿ, ಮದುವೆಗಾಗಿ ನಿಮ್ಮ ಪೋಷಕರು ನಿಮಗಾಗಿ ಹುಡುಕುವ ಪಾರ್ಟ್‌ನರ್‌ಗಳಲ್ಲಿ ನೀವು ಒಳ್ಳೆಯ ಜನರನ್ನು ಕಾಣುತ್ತೀರಿ. ಡೇಟಿಂಗ್ ಆ್ಯಪ್‌ಗಳಲ್ಲಿ ನನ್ನಂತಹ ಜನರು ನಿಮಗೆ ಸಿಗೋದಿಲ್ಲ. ಅಲ್ಲಿ ನೀವು ಜೀವನದಲ್ಲಿ ಏನನ್ನೂ ಸಾಧಿಸದ ಜನರು, ಸೋತವರನ್ನು ಮಾತ್ರ ಕಾಣುತ್ತೀರಿ' ಎಂದು ಸಲಹೆ ನೀಡಿದ್ದಾರೆ.

Kangana Ranaut Bold Statement On Live-In Relationships Men Can Impregnate And Run Away

'ಪುರುಷರು ಬೇಟೆಗಾರರು'

ಲಿವ್-ಇನ್ ರಿಲೇಷನ್‌ಶಿಪ್‌ ಬಗ್ಗೆ ಮಾತನಾಡಿರುವ ಕಂಗನಾ, 'ನಮ್ಮ ಸಮಾಜದಲ್ಲಿ ಮದುವೆಗಳು ತುಂಬಾ ಮುಖ್ಯ. ಅದು ಪುರುಷನು ತನ್ನ ಹೆಂಡತಿಗೆ ನಿಷ್ಠನಾಗಿರಲು ನೀಡುವ ಪ್ರತಿಜ್ಞೆ. ಆದರೆ ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ಸಂಬಂಧಗಳು ಹೆಚ್ಚಾಗಿವೆ. ಇದು ಮಹಿಳಾ ಸ್ನೇಹಿ ವಿಷಯವಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ವಿರೋಧಿಸಿದ್ದಾರೆ. ನಾಳೆ ನೀವು ಲಿವ್-ಇನ್ ಸಂಬಂಧದ ಸಮಯದಲ್ಲಿ ಗರ್ಭಿಣಿಯಾದರೆ, ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ಪುರುಷರು ಬೇಟೆಗಾರರಿದ್ದಂತೆ. ಅವರು ಯಾವುದೇ ಮಹಿಳೆಗೆ ಗರ್ಭಧರಿಸಿ ಓಡಿ ಹೋಗಬಹುದು. ಆಗ ಗರ್ಭಪಾತ ಮಾಡಿಸಿಕೊಳ್ಳಲು ಯಾರು ನಿಮಗೆ ಸಹಾಯ ಮಾಡುತ್ತಾರೆ?' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+