ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ ಸಂಚಲನ ಮೂಡಿಸಿದ್ದಾರೆ. "ಕಾಟನ್‌ಪೇಟೆ" ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನಟರು ಹಾಗೂ ನಿರ್ದೇಶಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ವೇಳೆ ಅವರು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (ಅಪ್ಪು) ಕುರಿತು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿವೆ. ಪುನೀತ್ ಹೀರೋ ಆಗಿದ್ದು ರಾಜ್‌ಕುಮಾರ್ ಇಂದ ಅಲ್ಲ, ನನ್ನಿಂದ ಎಂದಿದ್ದಾರೆ ಕನಕಪುರ ಶ್ರೀನಿವಾಸ್.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್, ತಮ್ಮ ಸಿನಿಮಾ ಜೀವನದಲ್ಲಿ ಅನೇಕರು ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. "ನನ್ನನ್ನು ಮೋಸ ಮಾಡಿದವರಲ್ಲಿ ಹಲವರು ಇಂದು ಜೈಲಿಗೆ ಹೋಗಿದ್ದಾರೆ, ಕೆಲವರು ಈಗ ಜೀವಂತರೇ ಇಲ್ಲ. ನಾನು ಪುರಿ ಜಗನ್ನಾಥ್ ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದು ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸಿನಿಮಾ ಮಾಡಿಸಿದ್ದೆ. ಸ್ಯಾಂಡಲ್‌ವುಡ್‌ಗೆ ಪುನೀತ್ ಎಂಬ ಹೀರೋ ಬರಲು ನಾನು ಕಾರಣ ಎಂದು ಎದೆತಟ್ಟಿಕೊಂಡು ಹೇಳುತ್ತೇನೆ" ಎಂದು ಹೇಳಿದರು.

ರಾಜ್‌ಕುಮಾರ್ ಇಂದ ಹೀರೋ ಆಗಿಲ್ಲ
ಇದರ ಜೊತೆಗೆ ಅವರು ರಾಜ್‌ಕುಮಾರ್ ಕುಟುಂಬದ ಪಾತ್ರವನ್ನು ಪರೋಕ್ಷವಾಗಿ ಪ್ರಶ್ನಿಸುವ ರೀತಿಯಲ್ಲೂ ಮಾತನಾಡಿದರು. "ರಾಜ್‌ಕುಮಾರ್ ಕುಟುಂಬದಿಂದ ಅಲ್ಲ, ಕನಕಪುರ ಶ್ರೀನಿವಾಸ್‌ನಿಂದ ಒಬ್ಬ ಹೀರೋ ಬಂದ" ಎಂದು ಹೇಳಿಕೆ ನೀಡಿದ ಅವರು, ತಾವು ಮಾಡಿದ ಸಹಾಯಕ್ಕೂ ಪ್ರತಿಯಾಗಿ ಮೋಸ ಎದುರಿಸಿದ್ದೇನೆ ಎಂದು ಆರೋಪಿಸಿದರು. "ಕನಕಪುರ ಶ್ರೀನಿವಾಸ್ ಇಂದ ಒಬ್ಬ ಹೀರೋ ಬಂದ. ಆದರೂ ನನಗೆ ಮೋಸ ಮಾಡಿದ್ರು. ಈಗ ಅವರು ಇದ್ದಾರಾ? ದೇವರು ಕರ್ಕೊಂಡ" ಎಂದರು. "ನಾನು ಮೋಸಗಾರ ಎಂದು ಹೇಳಿದವರನ್ನು ದೇವರು ಮೇಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಅವರೆಲ್ಲರಿಗೂ ಒಳ್ಳೆಯದಾಗಲಿ. ಆದರೆ ನನಗೆ ಅವರು ತುಂಬಾ ನೋವು ನೀಡಿದ್ದಾರೆ" ಎಂದು ಭಾವೋದ್ರೇಕದಿಂದ ಹೇಳಿದರು.
ಹಣಕಾಸು ವ್ಯವಹಾರಗಳ ಕುರಿತಾಗಿ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸ್, "ಆ ಸಮಯದಲ್ಲಿ ಮೂಟೆ ಮೂಟೆ ಹಣ ಕೊಟ್ಟಿದ್ದೆ. ಈಗ ನಮ್ಮ ಹಣ ವಾಪಸ್ ಕೊಡಿ ಎಂದು ಕೇಳಿದರೂ ಯಾರೂ ಗಮನ ಕೊಡುತ್ತಿಲ್ಲ. ನಾನು ಹಣ ಕೊಟ್ಟವರಲ್ಲಿ ಕೆಲವರು ಇಲ್ಲದಿದ್ದರೂ ಅವರ ಆಸ್ತಿ ಹೆಚ್ಚಾಗಿದೆ. ಬಾಡಿಗೆ ಬರುತ್ತಿದೆ. ಆದರೆ ನನ್ನ ಹಣ ಮಾತ್ರ ಮರಳಿ ಸಿಗಲಿಲ್ಲ" ಎಂದು ಹೇಳಿದರು.
ಈ ಹೇಳಿಕೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿ, ದಿವಂಗತ ನಟರ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಶ್ರೀನಿವಾಸ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇತ್ತ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜ್‌ಕುಮಾರ್ ಕುಟುಂಬದವರು ಅಥವಾ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ಸದಸ್ಯರು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸ್ಯಾಂಡಲ್‌ವುಡ್ ವಲಯದಲ್ಲಿಯೂ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications