Thug Lifeಗೆ ತಗ್ಗದ ಕನ್ನಡಿಗರು, ಕಮಲ್‌ಗೆ ತಕ್ಕ ಶಾಸ್ತಿ ಎನ್ನುವಂತಿದೆ 2ನೇ ದಿನದ ಕಲೆಕ್ಷನ್
ತಮಿಳು ನಟ ಕಮಲ್ ಹಾಸನ್ ಅವರು ತಮ್ಮ ಸಿನಿಮಾ ಬಿಡುಗಡೆ ಹೊತ್ತಲ್ಲೇ ಕನ್ನಡಿಗರನ್ನು ಎದುರು ಹಾಕಿಕೊಂಡರು. ಇದರ ಪರಿಣಾಮ ಅವರ ಕನಸಿನ ಥಗ್‌ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಲಿಲ್ಲ. ಕಮಲ್ ಹಾಸನ್ ಕನ್ನಡಿಗರ ಕ್ಷಮೆಯೂ ಕೇಳಲಿಲ್ಲ. ಹೈಕೋರ್ಟ್ ಮೆಟ್ಟಿಲೇರಿದರೂ ಅವರ ಥಗ್‌ಲೈಫ್ ಸಿನಿಮಾ ಕನ್ನಡಿಗರ ಮುಂದೆ ತೆರೆ ಕಾಣಲಿಲ್ಲ. ಆದರೆ, ಕರ್ನಾಟಕ ಹೊರತುಪಡಿಸಿ ಉಳಿದೆಲ್ಲ ಕಡೆ ಈ ಸಿನಿಮಾ ಬಿಡುಗಡೆಯೇನೋ ಆಗಿದೆ. ಆದರೆ, ಎರಡನೇ ದಿನದ ಕಲೆಕ್ಷನ್ ನೋಡಿದರೆ, ಕಮಲ್ ಹಾಸನ್‌ಗೆ ಮತ್ತೆ ತಕ್ಕ ಶಾಸ್ತಿ ಆಯ್ತಾ? ಎನ್ನುವಂತಿದೆ. ಈ ಸಿನಿಮಾ ಮೂಲಕ ಭರ್ಜರಿ ಹಿಟ್ ನಿರೀಕ್ಷೆಯಲ್ಲಿದ್ದ ಕಮಲ್‌ಗೆ ತೀವ್ರ ಮುಖಭಂಗವಾಗಿ ಎಂದು ಹೇಳಲಾಗುತ್ತಿದೆ. ಹಾಗಾದರೆ ಥಗ್ ಲೈಫ್ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.
ಕಮಲ್ ಹಾಸನ್ ಮತ್ತು ಮಣಿರತ್ನಂ ಅವರ ಬಹು ನಿರೀಕ್ಷಿತ ಸಿನಿಮಾ ಥಗ್ ಲೈಫ್ ಎರಡನೇ ದಿನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ವರದಿಯಾಗಿದೆ. ಈ ಚಿತ್ರವು 2ನೇ ದಿನದಂದು ಭಾರತದಲ್ಲಿ ಎಲ್ಲ ಭಾಷೆಗಳಲ್ಲಿ ಸೇರಿ ಕೇವಲ 7.50 ಕೋಟಿ ರೂಪಾಯಿಯಷ್ಟೇ ಗಳಿಕೆ ಮಾಡಿದೆ. ಮೊದಲ ದಿನ ಆರಂಭಿಕ 15.5 ಕೋಟಿ ರೂಪಾಯಿ ಕಂಡಿದ್ದ ಗಳಿಕೆಯೂ ತೀವ್ರ ಕುಸಿತ ಕಂಡಿದೆ. ಒಟ್ಟು ಎರಡು ದಿನಗಳಲ್ಲಿ 23 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

ಕನ್ನಡ ಹೊರತಪಡಿಸಿ ಇತರೆ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಥಗ್ ಲೈಫ್‌ನ ತಮಿಳು ಆವೃತ್ತಿಯು ಶುಕ್ರವಾರ ಒಟ್ಟಾರೆ 31.41ರಷ್ಟು ಸಾಧಾರಣ ಆಕ್ಯುಪೆನ್ಸಿ ದರವನ್ನು ಕಾಯ್ದುಕೊಂಡಿದೆ. ತಮಿಳುನಾಡಿನಲ್ಲಿ ಕೂಡ ಈ ಸಿನಿಮಾಗೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಥಗ್ ಲೈಫ್ ತಮಿಳಿನಲ್ಲಿಯೂ ಅಷ್ಟೇನೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಎರಡು ದಿನಗಳ ₹23 ಕೋಟಿ ಗಳಿಕೆಯು ಕಮಲ್ ಹಾಸನ್ ಅವರ ಕೊನೆಯ ಬಾಕ್ಸ್ ಆಫೀಸ್ ಹಿಟ್ ಚಿತ್ರ ವಿಕ್ರಮ್‌ಗಿಂತ ಬಹಳ ಕಡಿಮೆ ಎನ್ನಲಾಗಿದೆ.
ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದ ಈ ಸಿನಿಮಾ 2022ರಲ್ಲಿ ಬಿಡುಗಡೆಯಾಗಿ ಮೊದಲೆರಡು ದಿನಗಳಲ್ಲಿ ₹60 ಕೋಟಿ ಗಳಿಸಿತ್ತು. ಕಳೆದ ವರ್ಷ ಬಿಡುಗಡೆಯಾದ ʼಇಂಡಿಯನ್ 2ʼ ಕೂಡ ಉತ್ತಮ ಪ್ರದರ್ಶನ ನೀಡಿತ್ತು. ಮೊದಲ ಎರಡು ದಿನಗಳಲ್ಲಿ ₹44 ಕೋಟಿ ಗಳಿಸಿತ್ತು. ಆದರೆ ಥಗ್‌ಲೈಫ್ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಡಲಾಗಿತ್ತು. ಕನ್ನಡ ಭಾಷೆಯ ಕುರಿತು ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗದ ಕಾರಣ ಥಗ್ ಲೈಫ್ ನಷ್ಟ ಅನುಭವಿಸಿದೆ ಎಂದೂ ಹೇಳಲಾಗುತ್ತಿದೆ. ಏಕೆಂದರೆ ತಮಿಳು ಸಿನಿಮಾಗಳು ಕರ್ನಾಟಕದಲ್ಲೂ ತಮಿಳು ಭಾಷೆಯಲ್ಲೇ ತೆರೆಕಂಡು ಭರ್ಜರಿ ಹಿಟ್ ನೀಡುತ್ತಿದ್ದವು. ಆದರೆ ಕನ್ನಡಿಗರನ್ನ ಕೆಣಕಿದ್ದಕ್ಕೆ ಕಮಲ್ ಹಾಸನ್ ಸಿನಿಮಾ ವಿರುದ್ಧ ಕನ್ನಡಿಗರು ದಂಗೆ ಎದ್ದಿದ್ದರು. ಹೀಗಾಗಿ ಬಿಡುಗಡೆಯಾಗದೆ ಬಾಕ್ಸಾಫೀಸ್‌ನಲ್ಲಿ ನೆಲಕಚ್ಚುತ್ತಿದ್ದೆ ಎಂದು ಹೇಳಲಾಗುತ್ತಿದೆ.












Click it and Unblock the Notifications