Get Updates
Get notified of breaking news, exclusive insights, and must-see stories!

ಭಾಷೆ, ನೆಲ ಹಾಗೂ ಜಲ ವಿಚಾರದಲ್ಲಿ ರಾಜಿ ಇಲ್ಲ: ಕನ್ನಡಿಗರ ಕ್ಷಮೆ ಕೇಳುವಂತೆ ಕಮಲ್‌ ಹಾಸನ್‌ಗೆ ಕರ್ನಾಟಕ ಹೈಕೋರ್ಟ್‌ ಸೂಚನೆ!

Kamal Haasan: ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಅವರು ನೀಡಿರುವ ಹೇಳಿಕೆಯು ಇದೀಗ ತಾರಕಕ್ಕೇರಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಹೈ - ಕೋರ್ಟ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದೆ. ಕಮಲ್‌ ಹಾಸನ್‌ ಅವರು ಕರ್ನಾಟಕದಲ್ಲಿ ಅವರ ತಮಿಳುಚಿತ್ರ ಥಗ್ ಲೈಫ್ ಬಿಡುಗಡೆ ಮಾಡುವುದಕ್ಕೆ ಅವಕಾಶ ನೀಡಬೇಕು ಹಾಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಹೈ - ಕೋರ್ಟ್‌ ಈ ಸಂಬಂಧ ಕಮಲ್‌ ಹಾಸನ್‌ ಅವರಿಗೆ ಮಹತ್ವದ ಸೂಚನೆ ನೀಡಿದೆ. ಕಮಲ್‌ ಹಾಸನ್‌ ಕನ್ನಡ vs ತಮಿಳು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಕ್ಷಮೆ ಕೇಳುವಂತೆ ಕಮಲ್‌ಗೆ ಹೈಕೋರ್ಟ್‌ನಿಂದ ಸೂಚನೆ ನೀಡಿದೆ. ಈ ಪ್ರಕರಣದ ಅಂತಿಮ ತೀರ್ಪನ್ನು ಮಧ್ಯಾಹ್ನ 2.30ಕ್ಕೆ ಪ್ರಕಟಿಸಲಿದೆ. ಈಗ ಕೋರ್ಟ್‌ ಹೇಳಿರುವುದೇನು ಎನ್ನುವ ವಿವರ ಇಲ್ಲಿದೆ.

ತಮಿಳು ಚಿತ್ರ ಥಗ್ ಲೈಫ್ ಪ್ರದರ್ಶನದ ಮೇಲೆ ನಿಷೇಧ ಹೇರುವುದನ್ನು ಪ್ರಶ್ನಿಸಿ ಕಮಲ್‌ ಹಾಸನ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕರ್ನಾಟಕ ಹೈಕೋರ್ಟ್ ಮಂಗಳವಾರ ನಟ-ರಾಜಕಾರಣಿ ಕಮಲ್ ಹಾಸನ್ ಅವರ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದೆ. ಕಮಲ್‌ ಹಾಸನ್‌ ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Kamal Haasan Kannada vs Tamil controversy High Court asks Kamal to apologize to Kannadigas

ತಮಿಳು ಭಾಷೆ ಕನ್ನಡದ ತಾಯಿ, ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಕಮಲ್‌ ಹಾಸನ್‌ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕಮಲ್‌ ಅವರು ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ್ದನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠ ಪ್ರಶ್ನಿಸಿದೆ.

ದೇಶದ ಯಾವುದೇ ಜನರ ಭಾವನೆಗಳನ್ನು ನೋವುಂಟು ಮಾಡುವುದಕ್ಕೆ ಯಾರಿಗೂ ಹಕ್ಕಿಲ್ಲ. ಜಲ, ನೀಲಾ, ಭಾಷೆ - ಮೂರು ವಿಷಯಗಳು ಮುಖ್ಯ. ಈ ದೇಶದ ವಿಭಜನೆಯು ಭಾಷಾವಾರು ವಿಷಯವಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಈ ಹೇಳಿಕೆಯಿಂದಾಗಿ ಇದೀಗ ಅಶಾಂತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯ ಹೇಳಿತು ಎಂದು ಲೈವ್ ಲಾ ವರದಿ ಮಾಡಿದೆ.

ಕಮಲ್‌ಗೆ ಕೋರ್ಟ್‌ ತರಾಟೆ: ಇನ್ನು ನಟ ಕಮಲ್‌ ಹಾಸನ್‌ ಅವರ ಹೇಳಿಕೆಗೆ ಹೈ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನೀವು ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿ. ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ ಎಂದು ನೀವು ಹೇಗೆ ಹೇಳಬಹುದು, ನೀವು ಇತಿಹಾಸಕಾರರೇ ಅಥವಾ ನೀವು ಭಾಷಾಶಾಸ್ತ್ರಜ್ಞರೇ ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ ಎಂದು ವರದಿಯಾಗಿದೆ.

ಇನ್ನು ಈ ವಿಚಾರವನ್ನು ಸರಳವಾಗಿ ಇತ್ಯಾರ್ಥ ಮಾಡಿಕೊಳ್ಳಬಹುದಾಗಿತ್ತು ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಒಂದು ಕ್ಷಮೆ ಕೇಳುವ ಮೂಲಕ ಎಲ್ಲವೂ ಇತ್ಯಾರ್ಥವಾಗುತ್ತಿತ್ತು. ಇದೀಗ ನೀವು ವಾಣಿಜ್ಯ ಹಿತಾಸಕ್ತಿಗಾಗಿ & ನೀವೇ ಸೃಷ್ಟಿಸಿದ ಸನ್ನಿವೇಶದಿಂದಾಗಿ ಪೊಲೀಸ್ ರಕ್ಷಣೆಯನ್ನು ಕೇಳುತ್ತಿದ್ದೀರಿ ಎಂದು ಹೇಳಿದೆ.

ಏನಿದು ಪ್ರಕರಣ: ಇನ್ನು ನಟ ಕಮಲ್‌ ಹಾಸನ್‌ ಅವರು ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳುವ ಮೂಲಕ ಈ ವಿವಾದ ಸೃಷ್ಟಿಯಾಗಿತ್ತು. ಇದಕ್ಕೆ ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು. ಕಮಲ್‌ ಹಾಸನ್‌ ಅವರು ಕ್ಷಮೆ ಕೇಳಬೇಕು ಎಂದು ಇದೀಗ ಕೋರ್ಟ್‌ ಹೇಳಿದೆ. ಆದರೆ ಅಂತಿಮ ತೀರ್ಪು ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

ಇನ್ನು ಕಮಲ್‌ ಹಾಸನ್‌ ಅವರು ಈ ವಿಚಾರವಾಗಿ ಕ್ಷಮೆ ಕೇಳದೆ ಇದ್ದರೆ, ಅವರ ಸಿನಿಮಾ ಥಗ್‌ ಲೈಫ್‌ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್‌ ಅಥವಾ ಬಹಿಷ್ಕಾರ ಮಾಡುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಹೇಳಿತ್ತು. ಹೀಗಾಗಿ ಕಮಲ್‌ ಕೋರ್ಟ್‌ ಮೊರೆ ಹೋಗಿದ್ದರು.

ಕಮಲ್‌ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿಂದ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಥಗ್‌ ಲೈಫ್‌ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸದಂತೆ ಹಾಗೂ ರಕ್ಷಣೆ ನೀಡುವಂತೆ ಕೋರಲಾಗಿತ್ತು. ಪೊಲೀಸ್‌ ರಕ್ಷಣೆ ನೀಡಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಕನ್ನಡ ಭಾಷೆಯ ವಿಚಾರದಲ್ಲಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ನಟ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮೊದಲು ಕನ್ನಡಿಗರ ಕ್ಷಮೆಯಾಚಿಸಿ ಎಂದು ತಾಕೀತು ಮಾಡಿದ ನ್ಯಾಯಾಧೀಶರು.

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ʼನಲ್ಲಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು,@ikamalhaasan ಕ್ಷಮೆ ಕೇಳಿದರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ ? ಅವರೇನು ಇತಿಹಾಸಕಾರರಾ ? ಈ ಹಿಂದೆ ತಮಿಳುನಾಡಿನ ರಾಜಗೋಪಾಲಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಮೊದಲು ಕ್ಷಮೆ ಕೇಳಲಿ ಎಂದು ಕರ್ನಾಟಕ ಹೈಕೋರ್ಟ್‌ ತಾಕೀತು ಮಾಡಿದೆ ಎಂದು ಜೆಡಿಎಸ್‌ ಸಹ ಪೋಸ್ಟ್‌ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+