Bigg Boss Kannada: ಬಿಗ್‌ ಬಾಸ್‌ ಮನೆನಿಂದ ಹೊರಬಿದ್ದ ಲಾಯರ್‌ ಜಗದೀಶ್ ಮೊದಲ ರಿಯಾಕ್ಷನ್‌

Bigg Boss Kannada Season 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಿಂದ ಲಾಯರ್‌ ಕೆ.ಎನ್‌.ಜಗದೀಶ್‌ ಅವರನ್ನು ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ಇದೀಗ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಗ್‌ ಬಾಸ್‌ ಸೀಸನ್‌ 11ರ ಮನೆಯಲ್ಲಿ ಅಶಿಸ್ತು ತೋರಿ, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಲಾಯರ್‌ ಕೆ.ಎನ್‌. ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಇನ್ನು ಹೊರಗೆ ಬಂದ ಬಳಿಕ ಜಗದೀಶ್ ಕೆಲವರಿಗೆ ಕ್ಷಮೆ ಕೇಳಿದ್ದಾರೆ. ಹಾಗಾದರೆ ಯಾರಿಗೆಲ್ಲ ಕ್ಷೆಮೆ ಕೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

K N Jagdish s first reaction after Come out by Bigg Boss Kannada

ಕೆ.ಎನ್‌.ಜಗದೀಶ್ ಅವರು ಬಿಗ್‌ ಬಾಸ್‌ ಮನೆಗೆ ಹೋದಾಗಿನಿಂದ ನಿಯಮಗಳನ್ನು ಬ್ರೇಕ್‌ ಮಾಡುವ ಮೂಲಕ ಸ್ಪರ್ಧಿಗಳ ಜೊತೆ ಜಗಕ್ಕಿಳಿದುಬಿಡುತ್ತಿದ್ದರು. ಅಲ್ಲದೆ, ಬಳಿಕ ಬಿಗ್‌ ಬಾಸ್‌ಗೆ ಚಾಲೆಂಜ್‌ ಹಾಕಿದ್ದರು. ನಂತರ ವಾದರ ಕಥೆ ಕಿಚ್ಚನ ಜೊತೆ ಮಾತನಾಡುವಾಗ, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಅಲ್ಲಿಂದ ಉತ್ತಮ ಮನರಂಜನೆ ನೀಡುತ್ತಾ ಬಂದರು. ಆದರೆ, ಕೊನೆಗೂ ಕೆಲವು ಕಾರಣಗಳಿಂದ ಅವರನ್ನು ಮನೆಯಿಂದ ಹೊರಹಾಕಲಾಯಿತು.

ಏಕ ವಚನದಲ್ಲಿ ಮಾತನಾಡುತ್ತಾ ಮನೆಯವರ ಕೋಪಕ್ಕೆ ಗುರಿಯಾಗಿದ್ದ ಜಗದೀಶ್ ಅವರು ಇತರ ಸ್ಪರ್ಧಿಗಳ ಜೊತೆ ಏಕಾಂಗಿಯಾಗಿ ಜಗಳಕ್ಕಿಳಿದರು. ಈ ವೇಳೆ ಮನೆಯ ಮಹಿಳೆರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಅವರನ್ನು ಮನೆಯಿಂದ ಹೊರಗೆ ಕಳುಸಿಲಾಯಿತು. ಮತ್ತೊಂದೆಡೆ ಜಗದೀಶ್​ ಮೇಲೆ ಕೈ ಮಾಡಿದ ರಂಜಿತ್‌ನ​ನ್ನೂ ಕೂಡ ಹೊರಗೆ ಕಳುಹಿಸಲಾಗಿದೆ.

ಇನ್ನು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದಿರುವ ಜಗದೀಶ್, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶ ರವಾನಿಸಿರುವ ಜಗದೀಶ್, "ನೂರಾರು ಕ್ಯಾಮೆರಾ, ಸಾವಿರಾರು ಬಿಗ್​ಬಾಸ್​ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್‌ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ," ಎಂದು ಹೇಳಿದ್ದಾರೆ.

"ನಿಮ್ಮ ಪ್ರತಿಯೊಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್‌ಬಾಸ್‌ ಪಯಣದ ಯಶಸ್ಸು, ಅದು ನೀವು ನನ್ನ ಮೇಲೆ ಇಟ್ಟ ನಂಬಿಕೆಯಾಗಿದೆ. ಮತ್ತೊಮ್ಮೆ ಕೋಟಿ.. ಕೋಟಿ.. ನಮನ. ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಜೀವನ ಸಾರ್ಥಕವಾಯಿತು. ನನ್ನ ಈ ಹುಟ್ಟು, ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟವನ್ನು ವರ್ಣಿಸಲು ಪದಗಳೇ ಸಾಲದು," ಎಂದು ಬಿಗ್‌ ಬಾಸ್‌​ ಕಾರ್ಯಕ್ರಮ ಹಾಗೂ ಸಮಸ್ತ ಕನ್ನಡಿಗರಿಗೆ ಹೇಳಿದ್ದಾರೆ.

ಅಷ್ಟೇ ಅಲ್ಲದೆ, "ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ. ನೀವೆಲ್ಲ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರು. ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ. ಈ ನಿಟ್ಟಿನಲ್ಲಿ ನನ್ನುಂದ ಕೆಲವು ತಪ್ಪುಗಳು ಆಗಿವೆ. ಅದು ನಟನೆ ಅಥವಾ ಮನರಂಜನೆಯ ಒಂದು ಭಾಗ ಅಷ್ಟೇ," ಎಂದು ಹೇಳಿದ್ದಾರೆ.

"ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ಮಾಧ್ಯಮಗಳನ್ನು ಭೇಟಿಯಾಗಲು ಕಾಯುತ್ತಿದ್ದೇನೆ. ಭಾನುವಾರದಂದು ಜಕ್ಕೂರು ಏರೋಸ್ಪೇಸ್​ ಬಳಿ ಸುದ್ದಿಗೋಷ್ಠಿ ನಡೆಸಲಿದ್ದೇನೆ," ಎನ್ನುವ ಸಂದೇಶವನ್ನು ನೀಡಿದ್ದಾರೆ ಅಂತಾ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+