Bigg Boss Kannada: ಪ್ರೆಸ್‌ಮೀಟ್ ಕರೆದ ಲಾಯರ್ ಜಗದೀಶ್
Bigg Boss Kannada: ಬಿಗ್ ಬಾಸ್ ಕನ್ನಡ 11 ಸೀಸನ್‌ನಲ್ಲಿ ಅವಾಚ್ಯಾ ಶಬ್ಭಗಳನ್ನು ಬಳಸಿದ್ದಾರೆ ಎನ್ನುವ ಕಾರಣಕ್ಕೆ ಲಾಯರ್ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಲಾಗಿದೆ. ಬಳಿಕ ಅವರು ಬಿಗ್ ಬಾಸ್, ಅಲ್ಲಿನ ಸ್ಪರ್ಧಿಗಳು, ಕಿಚ್ಚ ಸುದೀಪ್ ಹಾಗೂ ನಡೆದಿರುವ ಘಟನೆಗಳ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇದರ ಬೆನ್ನಲ್ಲೇ ಅಕ್ಟೋಬರ್ 20ಕ್ಕೆ ಪ್ರೆಸ್ ಮೀಟ್ ಕೆರೆದು ಕುತೂಹಲ ಸೃಷ್ಟಿಸಿದ್ದಾರೆ.
ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದಾಗಿದೆ. ಸೀಸನ್ 11ಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸರಿ-ತಪ್ಪುಗಳ ಬಗ್ಗೆ ಮಾತನಾಡುತ್ತಾ ಅಲ್ಲಿನ ಪ್ರತಿಯೊಬ್ಬ ಸದಸ್ಯರಿಗೂ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಈಗಾಗಲೇ ದೊಡ್ಮನೆಯಿಂದ ಹೊರಬಿದ್ದಿರುವ ಲಾಯರ್ ಜದೀಶ್ ಅವರು ಪ್ರೆಸ್ ಮೀಟ್ ಕರೆದಿದ್ದಾರೆ.

ಪ್ರೇಕ್ಷಕರು, ಮಾಧ್ಯಮದವರ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದರೂ ಲಾಯರ್ ಜದೀಶ್ ಅರು ಹೊರಗಡೆ ಇನ್ನೂ ಕಾಣಿಸಿಕೊಂಡಿಲ್ಲ ಎನ್ನುವ ಪ್ರಶ್ನೆಗೆ ಅಕ್ಟೋಬರ್ 20ರ ಬೆಳಗ್ಗೆ 9ಕ್ಕೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಅವರೇ ಸ್ಪಷ್ಟನೆ ಕೊಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನುವ ಕಾರಣಕ್ಕೆ ಲಾಯರ್ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಇದೀಗ ಮಾಧ್ಯಮಗಳ ಮುಂದೆ ಬರಲು ಅವರು ಖಾತರರಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಅವರು ಹೊರಬಂದು ಮೂರು ದಿನಗಳಾಗಿದ್ದು, ಅಕ್ಟೋಬರ್ 20ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸುವುದಾಗಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
"ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್ ಬಾಸ್‌ನಲ್ಲಿ ಭಾಗಿ ಆಗುವ ಅವಕಾಶ ನನಗೆ ಸಿಕ್ಕಿದ್ದು ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್ ಮಾಡಿದ ವೀಕ್ಷಕರು, ನನ್ನ ಅಭಿಮಾನಿ ದೇವರುಗಳಿಗೆ ವಂದನೆಗಳು. ನಾನು ಬಿಗ್ ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ತೇನೆ," ಎಂದು ಲಾಯರ್ ಜಗದೀಶ್ ಅವರು ಹೇಳಿದ್ದಾರೆ.
ಬಿಗ್‌ಬಾಸ್ ಸೀಸನ್ 11ರ ಶೋನಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಗದೀಶ್, ಬಿಗ್ ಬಾಸ್ ಕಾರ್ಯಕ್ರಮ ವ್ಯಕ್ತಿಯ ಜೀವನವನ್ನೇ ತೋರಿಸುವ ಕನ್ನಡಿಯಾಗಿದೆ. ಅಲ್ಲಿ ನನ್ನ ನಿಜ ಮುಖ ನೋಡಿದಾಗ ನನಗೇ ಆಶ್ಚರ್ಯ ಆಯ್ತು. ನನ್ನಲ್ಲಿ ಅಡಗಿದ ಕೋಪ, ಪ್ರತಿಭೆ ಎಲ್ಲವೂ ಅರ್ಥ ಆಗಿದೆ. ನಿಜವಾಗಿಯೂ ನಾವು ಅದೃಷ್ಟವಂತರು ಎಂದು ಜಗದೀಶ್ ಅವರದ್ದು ಎನ್ನಲಾದ ವಾಯ್ಸ್ ನೋಟ್‌ನಲ್ಲಿದೆ.
"ನನ್ನ ಹೀರೋ ಸುದೀಪ್, ನನ್ನನ್ನು ದಯವಿಟ್ಟು ಕ್ಷಮಿಸಬೇಕು. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರಾಗಿದ್ದೀರಿ. ಬಿಗ್ ಬಾಸ್ ಮನೆಯಲ್ಲಿ ನಾನು ನಿಮ್ಮ ಜೊತೆ ಇದ್ದು ನಗಲು ಯತ್ನಿಸಿದೆ. ಈ ವೇಳೆ ನನ್ನಿಂದ ಕೆಲವು ತಪ್ಪುಗಳು ಆಗಿವೆ. ಅದು ನಟನೆ ಅಥವಾ ಮನರಂಜನೆಯ ಒಂದು ಭಾಗ ಅಷ್ಟೆ, ವೈಯುಕ್ತಿಕ ದ್ವೇಷ ಇಲ್ಲ," ಎಂದು ಜಗದೀಶ್ ಎಂದು ಹೇಳಿದ್ದಾರೆ. ಹಾಗಾದರೆ ಅಕ್ಟೋಬರ್ 20ರಂದು ಲಾಯರ್ ಜಗದೀಶ್ ಅವರು ನಡೆಸುವ ಸುದ್ದಿಗೋಷ್ಠಿಯಲ್ಲಿ ಏನೆಲ್ಲ ಹೇಳಲಿದ್ದಾರೆ ಎಂದು ಕೇಳಲು ಇಡೀ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.












Click it and Unblock the Notifications