ನಟ ಗಣೇಶ್ ಕೋಳಿಫಾರಂನಲ್ಲಿ ವಾಚ್‌ಮ್ಯಾನ್ ಆಗಿದ್ದ: ಹೀಗಂದಿದ್ಯಾರು?
ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಯಾವುದೇ ಹಿನ್ನೆಲೆ ಇಲ್ಲದೆ ಸ್ಯಾಂಡಲ್‌ವುಡ್‌ನ ಟಾಪ್ ನಟರಲ್ಲಿ ಸ್ಥಾನ ಪಡೆದಿದ್ದು ಗೊತ್ತೇ ಇದೆ. ಕಾಮಿಡಿ ಟೈಂ ಗಣೇಶ್ ಎಂದೇ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರು ಚಿತ್ರರಂಗಕ್ಕೆ ನಾಯಕನಟರಾಗಿ ಎಂಟ್ರಿ ಕೊಟ್ಟು ದಶಕಗಳೇ ಉರುಳಿವೆ. ನಟನೆಗೂ ಮುನ್ನ ಅವರು ಆರ್ಕೆಸ್ಟಾಗ್ರಳಲ್ಲಿ ಸಿಂಗರ್, ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದ್ದಾಗಿ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದರು. ಇದೀಗ ಅವರು ಕೋಳಿಫಾರಂನಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡಿದ್ದ ವಿಚಾರ ಕೂಡ ಬಹಿರಂಗವಾಗಿದೆ.
ಮೊದಲಿಗೆ ಲೈವ್ ಕಾರ್ಯಕ್ರಮದ ಮೂಲಕ ಗಣೇಶ್ ಅವರು ಗುರುತಿಸಿಕೊಂಡಿದ್ದರು. ನಮಸ್ಕಾರ, ನಮಸ್ಕಾರ, ನಮಸ್ಕಾರ ಎನ್ನುವ ಟ್ರೆಂಡ್ ಹುಟ್ಟುಹಾಕಿದ್ದರು. ನಂತರ ಮುಂಗಾರು ಮಳೆ ಸಿನಿಮಾ ಮೂಲಕ ಅವರು ಹಿಟ್ ನೀಡಿದ್ದರು. ಅಂದಿನಿಂದಲೂ ಅವರಿಗೆ ಮಳೆ ಹುಡುಗ ಎನ್ನುವ ಹೆಸರಿದೆ. ಅವರ ಕೌಟುಂಬಿಕ ಹಿನ್ನೆಲೆ ಹಾಗೂ ಆರಂಭಿಕ ಜೀವನದ ಕೆಲ ಅಚ್ಚರಿ ವಿಚಾರಗಳು ಇದೀಗ ರಿವೀಲ್ ಆಗಿದೆ. ಹೌದು, ಈ ವಿಚಾರವನ್ನು ಹಿರಿಯ ನಟ ಜಗ್ಗೇಶ್ ರಿವೀಲ್ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಗ್ಗೇಶ್, ಗಣೇಶ್, ಪ್ರಜ್ವಲ್ ದೇವರಾಜ್ ಭಾಗವಹಿಸಿದ್ದರು. ಈ ವೇಳೆ ಗಣೇಶ್ ಅವರನ್ನು ಉಲ್ಲೇಖಿಸಿ ಜಗ್ಗೇಶ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗಣೇಶ್ ನನ್ನ ಪ್ರತಿಕೃತಿ ಇದ್ದಂಗೆ, ಅವನು ಕೂಡ ನನ್ನಂತೆ ಹಳ್ಳಿಯಿಂದ ಬಂದವನು, ಅವನು ನನ್ನಂತೆ ಬಡತನದಿಂದಲೇ ಬಂದವನು ಎಂದು ಜಗ್ಗೇಶ್ ಕೊಂಡಾಡಿದ್ದಾರೆ.
ಗಣೇಶ್ ಕೂಡ ನನ್ನಂತೆ ಸಿನಿಮಾ ಬಗ್ಗೆ ಕನಸು ಕಂಡವನು, ಹಂತ ಹಂತವಾಗಿ ಬೆಳೆದವನು. ತಂದೆ ತಾಯಿಯನ್ನ ಕೂಡ ನನ್ನಂತೆ ಪ್ರೀತಿಸಿ ಪೂಜಿಸಿದವನು. ಅವನ ಬೆಳವಣಿಗೆ ನೋಡಿದರೆ ತುಂಬಾ ಖುಷಿಯಾಗುತ್ತೆ. ಅಡಕಮಾರನಹಳ್ಳಿಯಲ್ಲಿ ಯಾವುದೋ ಗ್ಯಾರೇಜೋ, ಕೋಳಿಫಾರಂನಲ್ಲೋ ವಾಚ್‌ಮ್ಯಾನ್ ಆಗಿ ಕೆಲಸ ಮಾಡಿ, ಅಲ್ಲಿಂದ ಬಂದು ತನ್ನ ಪ್ರತಿಭೆಯಿಂದ ಇಂದು ಇಡೀ ಕರ್ನಾಟಕದ ಹೆಣ್ಣುಮಕ್ಕಳಿಗೆ ಹುಳ ಬಿಡ್ತಿದ್ದಾನೆ ಎಂದು ಕಾಲೆಳೆದಿದ್ದಾರೆ. ಗಣೇಶ್ ತುಂಬಾ ಬ್ಯೂಟಿಫುಲ್ ಫೆಲೋ, ಲವ್ ಸ್ಟೋರಿಗಳು ಅದೂ ಇದೆಲ್ಲ ತುಂಬಾ ಸಖತ್ತಾಗಿ ಮಾಡ್ತಾನೆ, ಅವನನ್ನ ನೋಡಿದ್ರೆ ನನಗೆ ಹೊಟ್ಟೆಕಿಚ್ಚಿದೆ. ನಾನು ಕೂಡ ಅವನ ವಯಸ್ಸಿಗೆ ವಾಪಸ್ ಹೋಗಬೇಕು ಅನಿಸುತ್ತೆ ಎಂದು ಜಗ್ಗೇಶ್ ಹೇಳಿದ್ದಾರೆ.
ನಿಮ್ಮಪ್ಪ ದೇವರಾಜ್ ರೀತಿ ಆಗಬೇಡ
ಇನ್ನು ದೇವರಾಜ್ ಅವರ ಮಗ ಪ್ರಜ್ವಲ್ ಬಗ್ಗೆ ಏನೂ ಹೇಳೋದಿಲ್ಲ. ಅವರಪ್ಪ ನಾನು ಎಲ್‌ಬೋರ್ಡ್‌ಗಳು, ನಾವೆಲ್ಲ ಒಟ್ಟಿಗೆ ಇರುತ್ತಿದ್ದೆವು. ಆಗ ಯಾವ ಸಿನಿಮಾದಲ್ಲಿ ನೋಡಿದ್ರೂ ದೇವರಾಜ್ ಅವರ ಹೆಸರು ಇರ್ತಿತ್ತು, ನಮ್ಮ ಹೆಸರೇ ಇರುತ್ತಿರಲಿಲ್ಲ. ಆದರೂ ದೇವರಾಜ್ ಅವರು ಎಂತಹ ಅದ್ಭುತ ಪ್ರತಿಭೆ ಅಂದ್ರೆ, ಒಂದು ಗೆಟಪ್ ಚೇಂಜ್ ಮಾಡಿದ್ರೆ ಸಾಕು ಎಲ್ಲ ಪಾತ್ರಗಳಲ್ಲೂ ನೀರು ಕುಡಿದಂತೆ ಅಭಿನಯಿಸುತ್ತಿದ್ದರು. ಆದರೆ ದೇವರಾಜ್ ಅವರ ಬಗ್ಗೆ ಒಂದು ಕಂಪ್ಲೇಂಟ್ ವಿಚಾರ ಅಂದ್ರೆ ಅವರು ಹೆಚ್ಚಾಗಿ ಕಾರ್ಯಕ್ರಮಗಳಿಗೆ ಬರೋದಿಲ್ಲ, ಆದ್ರೆ ಅವರ ಮಗನಾಗಿ ನೀನು ಹಾಗೆ ಆಗಬೇಡ ಎಂದು ಪ್ರಜ್ವಲ್ ದೇವರಾಜ್‌ಗೆ ಜಗ್ಗೇಶ್ ಕಿವಿಮಾತು ಹೇಳಿದ್ದಾರೆ.












Click it and Unblock the Notifications