Darshan Thoogudeepa: ಕೋಟಿ "ಒಡೆಯ" ನಟ ದರ್ಶನ್ ತಪ್ಪು ದಾರಿ ಹಿಡಿಯಲು ಇದೇ ಪ್ರಮಖ ಕಾರಣವಂತೆ: ಜಗ್ಗೇಶ್ ಕೊಟ್ಟ ಉತ್ತರ ಇಲ್ಲಿದೆ
Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣದ ತನಿಖೆ ಈಗಾಗಲೇ ಬಹುತೇಕ ಮುಕ್ತಾಯವಾಗಿದ್ದು, ಇಂದು (ಸೆಪ್ಟೆಂಬರ್ 13) ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇದರ ನಡುವೆಯೇ ನಟ ದರ್ಶನ್ ಈ ಸ್ಥಿತಿಗೆ ಬರಲು ಯಾರು ಕಾರಣ ಎಂದು ಹಿರಿಯ ನಟ ಜಗ್ಗೇಶ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೆಸಾರ್ಟ್ ರೀತಿಯಲ್ಲೇ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತು ದರ್ಶನ್ ಪಾರ್ಟಿ ಮಾಡುವ ಮೂಲಕ ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ಹರಟೆ ಹೊರೆಯುತ್ತಿರುವ ಫೋಟೋ ಹಾಗೂ ವಿಐಪಿ ಸೆಲ್‌ನಿಂದಲೇ ರೌಡಿಶೀಟರ್‌ಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಅಲ್ಲಿನ 9 ಜೈಲಾಧಿಕಾರಿಗಳನ್ನು ಅಮಾನತುಗೊಳಿಸಿತು.

ಅಷ್ಟೇ ಅಲ್ಲದೆ, ಕೋರ್ಟ್ ಆದೇಶದ ಮೇರೆಗೆ ಪೊಲೀಸರು ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರು. ಅಷ್ಟಾದರೂ ದರ್ಶನ್ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ. ನಿನ್ನೆಯಷ್ಟೇ (ಸೆಪ್ಟೆಂಬರ್ 12) ವಿಜಯಲಕ್ಷ್ಮಿ ಭೇಟಿ ಬಳಿಕ ವಾಪಾಸ್ ತೆರಳುವಾಗ ಮಧ್ಯದ ಬೆರಳನ್ನು ತೋರಿಸುವ ಮೂಲಕ ಅಸಭ್ಯ ವರ್ತನೆ ತೋರಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮತ್ತೊಂದೆಡೆ ದರ್ಶನ್‌ನನ್ನು ಹೊರತರಲು ಪತ್ನು ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಈ ಪ್ರಕರಣದ ವಿಚಾರದಲ್ಲಿ ನಟ ದರ್ಶನ್ ಪರ ವಿರೋಧದ ಚರ್ಚೆಗಳು ಸಹ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಈಗಾಗಲೇ ಹಲವು ನಟ ದರ್ಶನ್ ಸಿನಿಮಾದಲ್ಲಿ ಹಿರೋ ಆಗಿದ್ದು, ನಿಜ ಜೀವನದಲ್ಲಿ ಖಳನಾಯಕನಾಗಿದ್ದಾನೆ ಅಂತಲೂ ಹೇಳಿದ್ದಾರೆ. ಇದೀಗ ಈ ಪ್ರಕರಣದ ಕುರಿತು ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
"ದರ್ಶನ್ ಕೋಟಿ ಲೆಕ್ಕದಲ್ಲಿ ದುಡಿಯುವ ಮತ್ತು ನೂರಾರು ಜನರಿಗೆ ಕೆಲಸ ಕೊಡುವ ನಟ. ಅವರನ್ನು ಪ್ರೀತಿಸುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ ದರ್ಶನ್‌ಗೆ ಮಾರ್ಗದರ್ಶನ ನಿಡುವವರ ಕೊರತೆಯಿದೆ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನುವ ರೀತಿಯಲ್ಲೇ ದರ್ಶನ್ ಕೆಟ್ಟ. ಮನುಷ್ಯನಿಗೆ ತಾಳ್ಮೆ ತುಂಬಾ ಮುಖ್ಯ," ಎಂದು ಹಿರಿಯ ನಟ ಜಗ್ಗೇಶ್ ಬುದ್ಧಿವಾದ ಹೇಳಿದ್ದಾರೆ.
"ನನ್ನ ಪ್ರಕಾರ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದವನ ಮೇಲೆ ಪೊಲೀಸರಿಗೆ ದೂರು ನೀಡಿ ಕಾನೂನಿನ ಮೂಲಕ ಬುದ್ಧಿ ಕಲಿಸಬಹುದಿತ್ತು. ಈ ಮೂಲಕ ನೋಡಿ ನೀವು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಡಿದರೆ, ಇದೇ ಪರಿಸ್ಥಿತಿ ಆಗುತ್ತದೆ ಎಂದು ಸಮಾಜಕ್ಕೆ ದೊಡ್ಡ ಸಂದೇಶವನ್ನೇ ನೀಡಬಹುದಿತ್ತು. ಆದರೆ ಆಗಿದ್ದೇ ಬೇರೆ. ಇದು ಬೇಸರದ ಸಂಗತಿ," ಎಂದು ಹೇಳಿದ್ದಾರೆ.












Click it and Unblock the Notifications