'ಮತ್ತೊಬ್ಬ ನಟನ ಮಾತು ಕೇಳಿ ಕಿಚ್ಚ ಸುದೀಪ್‌ಗೆ ರಾಗಿಣಿ ಅವಮಾನ ಮಾಡಿದ್ರು'
ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಅಸಮಾಧಾನ ಹೊರಹಾಕಿದ್ದು, ತಮಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ಕೊಟ್ಟ ಕಿಚ್ಚ ಸುದೀಪ್ ಅವರಿಗೆ ರಾಗಿಣಿ ಅವಮಾನ ಮಾಡಿದರು ಎನ್ನುವ ಆರೋಪ ಮಾಡಿದ್ದಾರೆ. ಬೆಂಗಳೂರಿನ ಖ್ಯಾತ ವಕೀಲರು ಹಾಗೂ ಸಾಮಾಜಿಕ ಹೋರಾಟಗಾರ ಪ್ರಖ್ಯಾತ್ ಗೌಡ ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
'ರಾಗಿಣಿ ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಮೂಲ ಕಾರಣ ನಟ ಕಿಚ್ಚ ಸುದೀಪ್ ಅವರು. ರಾಗಿಣಿ ಅವರದು ಯಾವುದೂ ಸಿನಿಮಾ ಇಲ್ಲದೇ ಇದ್ದಾಗ ಸುದೀಪ್ ಅವರು ಒಬ್ಬ ಸ್ಟಾರ್ ನಟ. ರಾಗಿಣಿ ಏನೂ ಅಲ್ಲ ಅವತ್ತು. ಅಂತಹ ಒಂದು ಹೊಸ ಹುಡುಗಿಗೆ ಅದರಲ್ಲೂ ಬೇರೆ ರಾಜ್ಯದ ಹುಡುಗಿಗೆ ಸುದೀಪ್ ಅಂತಹ ಒಳ್ಳೆಯ ಅವಕಾಶ ಕೊಡುತ್ತಾರೆ ಎಂದರೆ ದೊಡ್ಡ ವಿಚಾರ. ಆ ಸಮಯದಲ್ಲಿ ಆಕೆಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ವೀರಮದಕರಿ ಸಿನಿಮಾ ಮಾಡುವ ಸಮಯದಲ್ಲಿ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ'.

'ಆಕೆಯ ಹೋಳಿ ಸಿನಿಮಾ ಶುರು ಸಹ ಆಗಿರಲಿಲ್ಲ. ಹೊಸ ನಟನ ಜೊತೆ ಹೋಳಿ ಸಿನಿಮಾ ಒಪ್ಪಿಕೊಂಡಿದ್ದರು. ಇಂತಹ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಒಂದು ಅವಕಾಶ ಕೊಡುತ್ತಾರೆ. ಯಾಕೆಂದರೆ ಒಬ್ಬ ಹೆಣ್ಣು ಮಗಳಿಗೆ ಸಹಾಯವಾಗಲಿ ಅಂತಾ. ಅದಾಗ ಮೇಲೆ ಕೆಂಪೇಗೌಡದಲ್ಲಿಯೂ ಅವಕಾಶ ಕೊಡುತ್ತಾರೆ. ಎರಡು ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತದೆ. ಅದಾಗ ಮೇಲೆ ನಟಿ ರಾಗಿಣಿ ಸುದೀಪ್ ಅವರಿಗೆ ಅಗೌರವಯುತವಾಗಿ ನಡೆದುಕೊಳ್ಳುತ್ತಾರೆ' ಎಂದರು.
'ಸುದೀಪ್ ಅವರು ನನಗೆ ಒಂದು ಅವಕಾಶ ಕೊಟ್ಟಿದ್ದಾರೆ ಎನ್ನುವುದನ್ನು ಕಡೆಗಣಿಸಿ, ಸುದೀಪ್ ಅವರು ಏನೂ ಅಲ್ಲವೇ ಅಲ್ಲ ನನಗೆ, ತಾನು ನಡೆದದ್ದೇ ದಾರಿ ಎನ್ನುವ ತರ ಅವರೇ ನಿರ್ಧಾರ ತೆಗೆದುಕೊಂಡು ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ. ಇದು ಒಳಗಡೆಯಿಂದ ಬಂದಿರುವಂತಹ ಮಾಹಿತಿ. ಸುದೀಪ್ ಅವರ ಆಪ್ತ ವಲಯಕ್ಕೆ ಇದರ ಬಗ್ಗೆ ಇನ್ನೂ ಹೆಚ್ಚಾಗಿ ಗೊತ್ತು ನನಗಿಂತ ಜಾಸ್ತಿ. ಹೀಗಾಗಿ ಸುದೀಪ್ ಅವರು ಆಕೆಯ ವಿಚಾರದಲ್ಲಿ ಸುಮ್ಮನಾಗಿ ಹೋಗುತ್ತಾರೆ'.

'ರಾಗಿಣಿ ಅವಕಾಶ ತೆಗೆದುಕೊಂಡರು, ಬಳಸಿಕೊಂಡರು, ದೊಡ್ಡ ನಟಿಯಾದರು. ಸಿನಿಮಾ ರಂಗದಲ್ಲಿ ಸುದೀಪ್ ಅವರು ಅನೇಕರಿಗೆ ಗಾಡ್‌ಫಾದರ್ ಆಗಿದ್ದಾರೆ. ಆದರೆ ಈಕೆ ಎರಡನೇ ಸಿನಿಮಾಗೆ ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಿದರು. ಇನ್ನೊಬ್ಬ ನಟನ ಮಾತು ಕೇಳಿಕೊಂಡು ಹೀಗೆ ಮಾಡಿದರು. ಅವಕಾಶ, ಸಂಭಾವನೆ ಎಲ್ಲಾ ರೀತಿಯಲ್ಲೂ ಹೀಗೆ ಮಾಡಿ ತನಗೆ ಬೇಕಾದ ನಿರ್ಧಾರ ಮಾಡಿದರು. ಅವತ್ತಿನಿಂದ ಸುದೀಪ್ ಅವರು ಕೂಡ ಸುಮ್ಮನಾಗಿ ಬಿಟ್ಟರು' ಎಂದು ಪ್ರಖ್ಯಾತ್ ಗೌಡ ಹೇಳಿದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications