Kichcha Sudeepa: ವೇದಿಕೆಯಲ್ಲೇ ಹಿರಿಯ ನಟಿಗೆ ಅವಮಾನ ಮಾಡಿದ್ರಾ ಕಿಚ್ಚ ಸುದೀಪ್?
ಬಿಗ್ ಬಾಸ್ ಕನ್ನಡ ಸೀಜನ್ 11 ಸೀಜನ್‌ನ ಬಲಿಷ್ಠ ಸ್ಪರ್ಧಿ ಟ್ರೋಫಿ ಗೆಲ್ಲುವ ಕನಸಿನ ಹಾದಿಯಲ್ಲಿದ್ದ ಕಿರುತೆರೆ ನಟಿ ಭವ್ಯಾ ಗೌಡ ಅವರು ಕೊನೆಯ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ವಾರಕ್ಕೆ ಬಂದ ಆರು ಜನರ ಪೈಕಿ ಭವ್ಯ ಗೌಡ ಕೂಡ ಒಬ್ಬರಾಗಿದ್ದು, ವಿನ್ನರ್ ಆಗಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಉಳಿದ ಸ್ಪರ್ಧಿಗಳಿಗಿಂತ ಕಡಿಮೆ ವೋಟ್ ಬಂದ ಕಾರಣ ಭವ್ಯ ಗೌಡ ಗ್ರ್ಯಾಂಡ್ ಫಿನಾಲೆಯ ದಿನ ಎಲಿಮಿನೇಟ್ ಆದರು.
ಭವ್ಯ ಗೌಡ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚ ಸುದೀಪ್ ಸ್ವಾಗತಿಸಿ ಮಾತನಾಡಿದ್ದು, ಹೊರಗಡೆ ಕುಳಿತವರಿಗೆ ನೀವು ಬರಬೇಕು ಅಂತಾ ತುಂಬಾ ಆಸೆ ಇತ್ತು ಎಂದು ಹೇಳಿದ್ದಾರೆ. ಸುದೀಪ್ ಈ ರೀತಿ ಹೇಳಿದಾಗ ಎಲ್ಲರೂ ಇಲ್ಲ..ಇಲ್ಲ.. ಎಂದು ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಪ್ರಶ್ನಿಸಿದ ಕಿಚ್ಚ ಸುದೀಪ್ ನೀವು ನಾಮಿನೇಷನ್‌ಗೆ ಭವ್ಯ ಹೆಸರು ತೆಗೆದುಕೊಂಡಿಲ್ಲವೇ ಎಂದು ಕೇಳಿದ್ದಾರೆ. ಇದಕ್ಕೆ ಬಹುತೇಕರು ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಹಿರಿಯ ನಟಿ ಯಮುನಾ ಶ್ರೀನಿಧಿ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಸುದೀಪ್ ಪ್ರತಿಕ್ರಿಯಿಸದ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಾನು ನಾಮಿನೇಷನ್‌ಗೆ ಭವ್ಯ ಹೆಸರು ತೆಗೆದುಕೊಂಡಿಲ್ಲ ಎಂದು ಹಿರಿಯ ನಟಿ ಯಮುನಾ ಶ್ರೀನಿಧಿ ಹೇಳುತ್ತಿದ್ದಂತೆ ಸುದೀಪ್, 'ನೀವು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ನಾಮಿನೇಷನ್‌ಗೆ ಹೆಸರು ತೆಗೆದುಕೊಳ್ಳಬೇಕು ಎಂದರೆ ಮೊದಲು ಮನೆಯೊಳಗೆ ಇರಬೇಕು. ನಿಮಗೆ ಅದರ ಅರ್ಹತೆನೇ ಇಲ್ಲ. ಐದು ಕೋಟಿ ವೋಟ್ ಅಲ್ಲಿ ನಿಮ್ಮೊಂದು ಒಂದಾಗಿರುತ್ತದೆ. ಒಳಗೆ ಬಂದ್ರಿ ಇದ್ದೆ ಅಂತಾ ಹೇಳಿದ್ರಿ ಹೋದ್ರಿ ಅಷ್ಟೇ' ಎಂದು ನೇರವಾಗಿ ಹೇಳಿದ್ದಾರೆ.
ಇದು ಅಲ್ಲಿದ್ದವರಿಗೆ ತಮಾಷೆ ಎನಿಸಿದರೂ ನೋಡುಗರಿಗೆ ನಟಿ ಯಮುನಾ ಶ್ರೀನಿಧಿ ಅವರು ಒಂದು ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದರು ಎನ್ನುವುದನ್ನು ಆಡಿಕೊಂಡಂತೆ ಕಾಣುತ್ತಿತ್ತು. ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಕನ್ನಡ ಸೀಜನ್ 11 ಸೀಜನ್‌ರ ಮನೆಯೊಳಗೆ ಕಾಲಿಟ್ಟ ಮೊದಲ ಹದಿನೇಳು ಜನರ ಪೈಕಿ ಹಿರಿಯ ನಟಿ ಯಮುನಾ ಶ್ರೀನಿಧಿ ಬಲಿಷ್ಠ ಸ್ಪರ್ಧಿಯೇ ಆಗಿದ್ದರು.
ಬಿಗ್ ಬಾಸ್ ಮನೆಯಲ್ಲಿ ಒಂದೇ ವಾರ ಇದ್ದರೂ ಸಹ ಅವರ ಇರುವಿಕೆ ಎಲ್ಲೆಡೆ ಎದ್ದು ಕಾಣುತ್ತಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ, ಬಿಗ್ ಬಾಸ್ ತಂಡದ ಮೊದಲ ಎಲಿಮಿನೇಷನ್‌ನಲ್ಲಿಯೇ ಅವರನ್ನು ಹೊರಗೆ ಕಳುಹಿಸಲಾಯಿತು. ಅವರಗಿಂತೂ ನೀರಸವಾಗಿದ್ದ ಸ್ಪರ್ಧಿಗಳನ್ನು ಮನೆಯಲ್ಲೇ ಇಟ್ಟುಕೊಂಡು ಎಲ್ಲಿ ಧ್ವನಿ ಎತ್ತಬೇಕೋ ಅಲ್ಲಿ ಮಾತನಾಡುತ್ತಿದ್ದ ಯಮುನಾ ಶ್ರೀನಿಧಿ ಅವರನ್ನು ಎಲಿಮಿನೇಟ್ ಮಾಡಿರುವುದು ಅಂದು ಪ್ರೇಕ್ಷಕರ ಪ್ರಶ್ನೆಗೆ ಕಾರಣವಾಗಿತ್ತು.












Click it and Unblock the Notifications