ಚಂದನ್ ಶೆಟ್ಟಿ ಬಗ್ಗೆ ಶ್ರೇಯಾಂಕಾ ಪಾಟೀಲ್ ಮಾತು..
ಚಂದನ್ ಶೆಟ್ಟಿ & ನಿವೇದಿತಾ ಗೌಡ ತಮ್ಮ ಡಿವೋರ್ಸ್ ವಿಚಾರ ಹೇಳಿ ಸಂಚಲನ ಸೃಷ್ಟಿಸಿದ್ದಾರೆ. ಹೀಗಿದ್ದಾಗಲೇ ಆರ್‌ಸಿಬಿ ಆಟಗಾರ್ತಿ & ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಲೆಜೆಂಡ್, ಶ್ರೇಯಾಂಕಾ ಪಾಟೀಲ್ ಅವರು ಚಂದನ್ ಶೆಟ್ಟಿ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗ್ತಿದೆ. ಹಾಗಾದ್ರೆ ಶ್ರೇಯಾಂಕಾ ಪಾಟೀಲ್ ಅವರು ಚಂದನ್ ಶೆಟ್ಟಿ ಬಗ್ಗೆ ಹೇಳಿದ್ದೇನು? ಆ ಕುರಿತು ಮಾಹಿತಿಗೆ ಮುಂದೆ ಓದಿ.
ಅಷ್ಟಕ್ಕೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಮದುವೆ ಕೂಡ ಆಗಿದ್ದರು. ರಿಯಾಲಿಟಿ ಶೋನಿಂದಲೇ ಪ್ರೀತಿ ಶುರುವಾಗಿತ್ತು. 2019-ಮೈಸೂರು ಯುವ ದಸರಾ ವೇದಿಕೆಯ ಮೇಲೆಯೇ ಚಂದನ್ ಶೆಟ್ಟಿ ಅವರು, ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು.

ಆಗ ಇದು ವಿವಾದಕ್ಕೆ ಕಾರಣವಾಗಿ ಅಲ್ಲದೆ ಆಗ ಸರ್ಕಾರ ಇವರ ಮೇಲೆ ನಿಷೇಧ ಕೂಡ ಹೇರಿತ್ತು. ಈ ರೀತಿ ವಿವಾದ ಮಾಡಿಕೊಂಡಿದ್ದ ಚಂದನ್ ಶೆಟ್ಟಿ ಭಾರಿ ನಂತರ ಹೆಸರು ಮಾಡಿದ್ದರು. ಈಗ ಅವರು ವಿಚ್ಛೇದನ ಪಡೆದಿದ್ದು, ಈ ಸಮಯದಲ್ಲಿ ಶ್ರೇಯಾಂಕಾ ಪಾಟೀಲ್ ಅವರು ಚಂದನ್ ಬಗ್ಗೆ ನೀಡಿದ ಹೇಳಿಕೆ ವೈರಲ್ ಆಗ್ತಿದೆ. ಹಾಗಾದ್ರೆ ಶ್ರೇಯಾಂಕಾ ಪಾಟೀಲ್ ಅವರು ಇದೀಗ ಚಂದನ್ ಶೆಟ್ಟಿ ಬಗ್ಗೆ ಹೇಳಿರುವುದು ಏನು? ಮುಂದೆ ಓದಿ.
ಚಂದನ್ ಶೆಟ್ಟಿ ಬಗ್ಗೆ ಶ್ರೇಯಾಂಕಾ..
ಅಂದಹಾಗೆ ಚಂದನ್ ಶೆಟ್ಟಿ ಕನ್ನಡದ ಬೆಸ್ಟ್ ರ್ಯಾಪ್ ಸಿಂಗರ್ ಎನ್ನಬಹುದು. ಯಾಕಂದ್ರೆ ಚಂದನ್ ಮಾಡಿರುವ ಹಾಡುಗಳು ಇಂದಿಗೂ ಎಲ್ಲರ ಮನಸ್ಸು ಗೆಲ್ಲುತ್ತವೆ. ಅದೇ ರೀತಿಯಾಗಿ ಇದೀಗ ಚಂದನ್ ಶೆಟ್ಟಿ ಅವರ ಒಂದು ಹಾಡಿಗೆ ಡಾನ್ಸ್ ಮಾಡಿರುವ ಶ್ರೇಯಾಂಕಾ ಪಾಟೀಲ್ ಅವರು, ತಮ್ಮ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಡಾನ್ಸ್ ಮಾಡಿ ಪೋಸ್ಟ್ ಹಾಕಿದ್ದಾರೆ ಆರ್‌ಸಿಬಿ ಕ್ರಿಕೆಟ್ ತಂಡದ ಆಟಗಾರ್ತಿ ಆಗಿರುವ ಶ್ರೇಯಾಂಕಾ ಪಾಟೀಲ್ ಅವರು. ಚಂದನ್ ಶೆಟ್ಟಿ ಹಾಡನ್ನು ಹೊಗಳಿದ್ದಾರೆ.
ಪ್ರೀತಿಯ ಮದುವೆ ಮುರಿದಿದ್ದು ಹೇಗೆ?
ಚಂದನ್ ಶೆಟ್ಟಿ & ನಿವೇದಿತಾ ಇಬ್ಬರೂ ಒಬ್ಬರನ್ನ ಮತ್ತೊಬ್ಬರು ತುಂಬಾ ಇಷ್ಟಪಟ್ಟು ಮದುವೆ ಆಗಿದ್ದರು. ಈ ಇಬ್ಬರ ಪ್ರೀತಿ ಕೋಟಿ ಕೋಟಿ ಜನರ ಹೊಟ್ಟೆ ಉರಿಸಿತ್ತು ಕೂಡ ಆದ್ರೆ ಈಗ ಆಗಿದ್ದು ಉಲ್ಟಾ. ಅದು ಏನಂದ್ರೆ ಇಬ್ಬರು ದೂರವಾಗಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ & ನಿವೇದಿತಾ ವಿಚ್ಛೇದನ ಅಂದ್ರೆ ತಮ್ಮ ಮದುವೆ ಬಂಧನ ಮುರಿಯಲು ಮುಂದಾಗಿದ್ದಾರೆ. ಹೀಗಿದ್ದಾಗಲೇ ಅವರ ಅಭಿಮಾನಿಗಳು ಮಾತ್ರ ಈ ಇಬ್ಬರೂ ಮತ್ತೆ ಒಂದಾಗುತ್ತಾರೆ ಅಂತಿದ್ದಾರೆ.
ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಡಿವೋರ್ಸ್ ವಿಚಾರ ಈಗ ಎಲ್ಲೆಲ್ಲೂ ಸದ್ದು ಮಾಡಿ, ಸುದ್ದಿಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಈ ಜೋಡಿ ಮದುವೆ ಆಗಿದ್ದ ರೀತಿ. ಕರ್ನಾಟಕವೇ ತಿರುಗಿ ನೋಡುವಂತೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮನಸ್ಸು ಗೆದ್ದು ಮದುವೆ ಆಗಿದ್ದರು. ಆದರೆ ಹೀಗೆ ಮದುವೆ ಆಗೋದಕ್ಕೆ ಮೊದಲು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನ ತಂಗಿ.. ತಂಗಿ.. ಅಂತಾ ಕರೆದಿದ್ದರು ಗೊತ್ತಾ?
ತಂಗಿ ಅಂತಾ ಕರೆದಿದ್ದರು ಚಂದನ್!
ಹೌದು, ಬಿಗ್‌ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಸ್ಪರ್ಧೆ ಮಾಡಿದ್ದರು. ಈ ವೇಳೆ ಇಬ್ಬರು ತುಂಬಾ ಕ್ಲೋಸ್ ಆಗಿದ್ದರು. ಆಗ ಅದೇ ಬಿಗ್‌ಬಾಸ್ ಮನೆ ಒಳಗೆ ಮತ್ತೊಬ್ಬರು ಸ್ಪರ್ಧಿ ಜೊತೆಗೆ ಮಾತನಾಡುವಾಗ, ಸ್ವತಃ ಇದೇ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಬಗ್ಗೆ ಮಾತನಾಡಿದ್ದರು. ಆಗ ನಾನು ಮತ್ತು ನಿವೇದಿತಾ, ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಅವರ ರೀತಿ ಎಂದಿದ್ದರು.
ಆಗ ಈ ಮಾತು ಕೇಳಿದ್ದ ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿ, ಅಣ್ಣ & ತಂಗಿನಾ? ಎಂದು ಮರು ಪ್ರಶ್ನೆ ಮಾಡಿದ್ದರು. ಹೌದು ಎಂದು ಚಂದನ್ ಕೂಡ ಉತ್ತರ ನೀಡಿದ್ದರು. ಆದ್ರೆ ಆ ನಂತರ ನಿವೇದಿತಾ ಗೌಡ ಜೊತೆಗೆ ಮದುವೆ ಆಗಿದ್ದರು ಚಂದನ್. ಇದೀಗ ಈ ವಿಡಿಯೋ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗೇ ಜನ ಕೂಡ ಚರ್ಚಿಸುತ್ತಿದ್ದಾರೆ.












Click it and Unblock the Notifications