Bigg Boss Kannada: ಬಿಗ್‌ಬಾಸ್ ಮನೆಯಿಂದ ಹುಚ್ಚ ವೆಂಕಟ್ ನಂಬರ್ 2 ಔಟ್!
ಬಿಗ್‌ಬಾಸ್ ಮನೆಯಿಂದ ರಂಜಿತ್ ಹಾಗೂ ಜಗದೀಶ್ ಔಟ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಕಾರಣ ಅವರಿಬ್ಬರನ್ನು ಬಿಗ್‌ಬಾಸ್ ಮನೆಯಿಂದ ಹೊರಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಜಗದೀಶ್ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ತೆಗೆಸಿಕೊಂಡ ಫೋಟೋ ಕೂಡ ಈ ವಿಷಯವನ್ನು ಖಾತ್ರಿಪಡಿಸಿದೆ. ಬಿಗ್‌ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವಷ್ಟು ದೊಡ್ಡದಾಗಿ ಜಗಳ ನಡೆದಿದೆ ಎನ್ನುವ ಸುದ್ದಿ ಕೇಳಿ ನೆಟ್ಟಿಗರು ಹುಚ್ಚ ವೆಂಕಟ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಹೌದು... ನಿನ್ನೆಯ ಎಪಿಸೋಡ್‌ನಲ್ಲಿ ಜಗದೀಶ್ ಹಾಗೂ ಇತರ ಸ್ಪರ್ಧಿಗಳ ನಡುವೆ ದೊಡ್ಡ ಜಗಳವೇ ನಡೆದುಹೋಗಿತ್ತು. ಅದು ಮುಂದುವರೆದು ಇಂದು ದೊಡ್ಡ ಗಲಾಟೆಯಾಗಿದೆ. ಅಲ್ಲದೆ ಉಗ್ರಂ ಮಂಜು ಹಾಗೂ ಜಗದೀಶ್ ಅವರ ನಡುವೆಯೂ ಕಳೆದ ದಿನದ ಎಪಿಸೋಡ್‌ನಲ್ಲಿ ಜಗಳವಾಗಿತ್ತು. ಆ ಜಗಳ ವಿಕೋಪಕ್ಕೆ ತಿರುಗಿ ಇಂದು ಸ್ಪರ್ಧಿಗಳಾದ ರಂಜಿತ್ ಹಾಗೂ ಜಗದೀಶ್ ನಡುವೆ ನೇರಾ ನೇರ ಫೈಟ್ ಆಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಬಿಗ್‌ಬಾಸ್ ಮನೆಯಿಂದ ರಂಜಿತ್ ಹಾಗೂ ಜಗದೀಶ್ ಅವರನ್ನು ಹೊರಗೆ ಕಳುಹಿಸಲಾಗಿದೆ.

ರಂಜಿತ್ ಹಾಗೂ ಜಗದೀಶ್ ಮಾನಸ ವಿಚಾರಕ್ಕೆ ಜಗಳ ಆಡಿದ್ದಾರೆ ಎನ್ನಲಾಗುತ್ತಿದೆ. ಕಾರಣ ಏನೇ ಇರಲಿ, ಬಿಗ್‌ಬಾಸ್ ಇತಿಹಾಸಲ್ಲಿ ಈ ಹಿಂದೆ ಇಂತಹ ಗಲಾಟೆ ನಡೆದಿದ್ದು ಹುಚ್ಚ ವೆಂಕಟ್ ಇದ್ದಾಗ. ಆದರೆ ಹುಚ್ಚ ವೆಂಕಟ್ ಹಲ್ಲೆ ಮಾಡಿ ಹೊರಬಂದಿದ್ದರು. ಆದರೂ ಬಿಗ್‌ಬಾಸ್ ಎರಡನೇ ಅತಿಥಿಯಾಗಿ ಬಿಗ್‌ಬಾಸ್ ಮನೆಗೆ ಕಳುಹಿಸಿದ್ದರು. ಆದರೂ ಹುಚ್ಚ ವೆಂಕಟ್ ಪ್ರಥಮ್ ಮೇಲೆ ಕೈ ಮಾಡಿದ್ದರು. ಜೊತೆಗೆ ನಟಿ ಸಂಯುಕ್ತ ಹೆಗಡೆ ಸಮೀರ್ ಆಚಾರ್ಯ ಮೇಲೆ ಕೈ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದರು.
ಹುಚ್ಚ ವೆಂಕಟ್ ನೆನಪು ಮಾಡಿಕೊಂಡ ನೆಟ್ಟಿಗರು
ಪ್ರಸ್ತುತ ನಡೆದ ಘಟನೆಯಿಂದಾಗಿ ಜನ ಹುಚ್ಚಾ ವೆಂಕಟ್ ಅವರನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಹುಚ್ಚ ವೆಂಕಟ್ ಒಬ್ಬ ನಟ. ಬಿಗ್‌ಬಾಸ್ ಶೋಗೆ ಸ್ಪರ್ಧಿಸಿದಾಗ ಅವರೊಂದಿಗೆ ಇತರ ಸ್ಪರ್ಧಿಗಳು ಮಾತನಾಡುವುದಿರಲಿ ಅವರ ಸುತ್ತ ಸುಳಿದಾಡುವುದು ಕಷ್ಟವಿತ್ತು. ಅತ್ಯಂತ ಕೋಪದಿಂದ ಇತರ ಸ್ಪರ್ಧಿಗಳೊಂದಿಗೆ ಜಗಳವಾಡುತ್ತಾ ಕೆಣಕುತ್ತಾ ಬಿಗ್‌ಬಾಸ್ ಶೋನ ಹೈಲೆಟ್ ಆಗಿದ್ದರು ಹುಚ್ಚ ವೆಂಕಟ್.
ಅಲ್ಲದೆ ಬಿಗ್‌ಬಾಸ್ ಮನೆಯಲ್ಲಿ ಅವರ ಕಾಮನ್ ಡೈಲಗ್ ಕೂಡ ಸಾಕಷ್ಟು ಸದ್ದು ಮಾಡಿತ್ತು. ಹುಚ್ಚ ವೆಂಕಟ್ ಅವರು ಕೋಪದಿಂದ ಹೇಳುವ 'ನನ್ ಮಗನ್..' ಎನ್ನುವ ಮಾತು ಒಂದು ಡೈಲಾಗ್ ಆಗಿ ಪರಿವರ್ತನೆ ಆಯ್ತು. ಬಿಗ್‌ಬಾಸ್ ಅಭಿಮಾನಿಗಳು ಆ ಡೈಲಾಗ್ ಹೇಳುವ ಮೂಲಕ ರೀಲ್ಸ್‌ಗಳನ್ನು ಮಾಡಲು ಶುರು ಮಾಡಿದರು. ಒಟ್ಟಿನಲ್ಲಿ ಹುಚ್ಚ ವೆಂಕಟ್ ಬಿಗ್‌ಬಾಸ್ ಶೋಗೆ ಹೆಚ್ಚು ಟಿಆರ್‌ಪಿ ತಂದು ಕೊಟ್ಟ ಸ್ಪರ್ಧಿ ಅಂದರೆ ತಪ್ಪಾಗಲಿಕ್ಕಿಲ್ಲ.

ಹುಚ್ಚ ವೆಂಕಟ್ ನಂಬರ್ 2
ಇದೇ ಕಾರಣಕ್ಕೆ ಅವರು ಎರಡನೇ ಅತಿಥಿಯಾಗಿ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿದ್ದರು. ಆಗಲೂ ಹುಚ್ಚ ವೆಂಕಟ್ ತಮ್ಮ ಕೋಪಕ್ಕೆ ಕಡಿವಾಣ ಹಾಕಲೇ ಇಲ್ಲ. ಮನೆಯ ಇತರ ಸ್ಪರ್ಧಿಗಳೊಂದಿಗೆ ಗಲಾಟೆ ಶುರು ಮಾಡಿದರು. ಈ ವ್ಯಕ್ತಿಯೊಂದಿಗೆ ಬಿಗ್‌ಬಾಸ್ ಮನೆಯಲ್ಲಿ ಇರಲು ಸ್ಪರ್ಧಿಗಳಿಗೆ ಬಿಸಿ ತುಪ್ಪವಾಗಿತ್ತು. ಮಾನಸಿಕವಾಗಿ ತಾಳ್ಮೆ ಕಳೆದುಕೊಂಡಿದ್ದ ಹುಚ್ಚ ವೆಂಕಟ್ ಅವರೊಂದಿಗೆ ಇತರ ಸ್ಪರ್ಧಿಗಳು ಇರುವುದು ಸುಲಭವಿರಲಿಲ್ಲ. ಇದೇ ಗಾಳಿ ಪ್ರಸ್ತುತ ಬಿಗ್‌ಬಾಸ್ ಸೀಸನ್ 11ಕ್ಕೂ ಬೀಸಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಸೀಸನ್‌ನಲ್ಲೂ ಹುಚ್ಚ ವೆಂಕಟ್ ನಂಬರ್ 2 ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿ ಹೊರ ಹೋಗಿದ್ದಾರೆ ಎನ್ನುತ್ತಿದ್ದಾರೆ ಬಿಗ್‌ಬಾಸ್ ಅಭಿಮಾನಿಗಳು.
ಬಿಗ್‌ಬಾಸ್ ನಿಯಮ ಮೀರಿದ ಜಗದೀಶ್
ಬಿಗ್‌ಬಾಸ್ ಮನೆ ಪ್ರವೇಶಿಸಿದಾಗಿನಿಂದಲೂ ಜಗದೀಶ್ ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಡುತ್ತಿರುವ ವಿಚಾರ ಗೊತ್ತೇ ಇದೆ. ಮನೆಯ ಯಾವ ಸ್ಪರ್ಧಿಯೊಂದಿಗೂ ಜಗದೀಶ್ ಹೊಂದಿಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗೂ ಜಗಳ, ಗಲಾಟೆ. ಬಿಗ್‌ಬಾಸ್ ನಿಯಮದ ಪ್ರಕಾರ ಸ್ಪರ್ಧಿಗಳು ಕೆಲ ನಿಯಮಗಳನ್ನು ಪಾಲಿಸಬೇಕು. ಎಂತಹ ಸಮಯ ಬಂದರೂ ಕೂಡ ಸ್ಪರ್ಧಿಗಳು ಕೈಕೈ ಮಿಲಾಸುವಂತಿಲ್ಲ. ಪರಸ್ಪರ ಹೊಡೆದಾಡಿಕೊಳ್ಳುವಂತಿಲ್ಲ. ಹೀಗಿದ್ದರೂ ಜಗದೀಶ್ ಮನೆ ಮಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಅವರೊಂದಿಗೆ ಜಗಳವಾಡಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಜಗದೀಶ್ ಹಾಗೂ ರಂಜಿತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.
ನೆಟ್ಟಿಗರು ಅಭಿಪ್ರಾಯವೇನು?
ಬಿಗ್‌ಬಾಸ್ ಮನೆ ಎಲ್ಲವನ್ನೂ ಕಲಿಸುತ್ತದೆ. ವಿಶೇಷವಾಗಿ ತಾಳ್ಮೆ. ಆದರೆ ಜಗದೀಶ್ ಅವರಿಗೆ ಏನೋ ಸಮಸ್ಯೆ ಇದೆ ಎನ್ನುವಂತೆ ಕಾಣಿಸುತ್ತಿದೆ ಎಂದು ಜನ ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಅವರು ಒಂದು ದಿನದಲ್ಲಿ ಹಲವಾರು ರೀತಿ ಬದಲಾಗುತ್ತಾರೆ. ಅವರ ಮಾತು ಅವರ ನಡೆ ವಿಭಿನ್ನವಾಗಿರುತ್ತದೆ. ಮಾನಸಿಕವಾಗಿ ಅವರಿಗೆ ಏನೋ ಸಮಸ್ಯೆ ಇದೆ. ಅವರಿಂದಾಗಿ ಮನೆಯ ವಾತಾವರಣ ಹಾಳಾಗಿದೆ. ಇಂತಹ ವಾತಾವರಣ ಹುಚ್ಚ ವೆಂಕಟ್ ಇದ್ದಾಗ ಸೃಷ್ಟಿಯಾಗಿತ್ತು ಎಂದು ಬಿಗ್‌ಬಾಸ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications