ಹೊಂಬಾಳೆಯಿಂದ ಬಿಗ್ ಅಪ್ಡೇಟ್, ಬಾಲಿವುಡ್ ಟಾಪ್ ನಟನ ಜೊತೆ ಸಿನಿಮಾ ಘೋಷಣೆ
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಕನ್ನಡದ ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದೆ. ಮೊದಲಿಗೆ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಹೊಂಬಾಳೆ ಮಲಯಾಳಂ, ಟಾಲಿವುಡ್‌ನ ಟಾಪ್ ನಟರ ಸಿನಿಮಾಗಳನ್ನು ಮಾಡಿ ಹಿಟ್ ನೀಡಿದೆ. ಇದೀಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿರುವ ಹೊಂಬಾಳೆ ಖ್ಯಾತ ನಟನೊಂದಿಗೆ ಸಿನಿಮಾ ಘೋಷಿಸಿದೆ. ಕರ್ನಾಟಕದ ಮಣ್ಣಿಂದ ಜಾಗತಿಕ ರಂಗದೆಡೆಗೆ ಸಾಗುವ ನಮ್ಮ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.
ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾದ ಹೃತಿಕ್ ರೋಷನ್ (Hrithik Roshan) ಅವರೊಂದಿಗೆ ಹೊಂಬಾಳೆ ತನ್ನ ಮುಂದಿನ ಸಿನಿಮಾ ಘೋಷಣೆ ಮಾಡಿದೆ. ಈ ಮೂಲಕ ಬಾಲಿವುಡ್ ಅನ್ನೂ ಶೇಕ್ ಮಾಡಲು ಮುಂದಾಗಿದೆ. ಭಾರತೀಯ ಚಿತ್ರರಂಗದ ಪ್ರಮುಖ ನಟ ಹೃತಿಕ್ ರೋಷನ್ ಅವರೊಂದಿಗೆ ನಮ್ಮ ಹೊಂಬಾಳೆ ತಂಡದ ಹೊಸ ಸಿನಿಮಾ ಬಗ್ಗೆ ಘೋಷಿಸಲು ಸಂತಸ ಹಾಗೂ ಹೆಮ್ಮೆಯಾಗುತ್ತಿದೆ. ಈ ಹೊಸ ಚಿತ್ರ, ನಮ್ಮ ಹೊಸ ಶೈಲಿಯ ಕಥಾ ನಿರೂಪಣೆ ಹಾಗೂ ಹೃತಿಕ್ ರೋಷನ್ ಅವರ ಅಪ್ರತಿಮ ಅಭಿನಯಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿಕೊಂಡಿದೆ.

ಹೃತಿಕ್ ರೋಷನ್ ಅವರನ್ನು ಗ್ರೀಕ್ ದೇವರು ಎಂದು ಕರೆಯುತ್ತಾರೆ. ಅವರು ಹೃದಯಗಳನ್ನು ಆಳುತ್ತಾರೆ, ಮಿತಿಗಳನ್ನು ಮುರಿದುಬಿಟ್ಟಿದ್ದಾರೆ ಮತ್ತು ಅವನು ನಿಜವಾಗಿಯೂ ಯಾವ ವಿದ್ಯಮಾನವನ್ನು ಹೊಂದಿದ್ದಾರೆಂದು ನಾವು ನೋಡುತ್ತೇವೆ! ಹೃತಿಕ್ ಅವರನ್ನು ಹೊಂಬಾಳೆ ಕುಟುಂಬಕ್ಕೆ ಸಹಯೋಗಕ್ಕಾಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ. ಇದು ವರ್ಷಗಳ ಕಾಲ ನಡೆಯುತ್ತಿದ್ದು, ಧೈರ್ಯ, ಭವ್ಯತೆ ಮತ್ತು ವೈಭವದ ಕಥೆಯು ತೆರೆದುಕೊಳ್ಳಲಿದೆ. ಅಲ್ಲಿ ತೀವ್ರತೆಯು ಕಲ್ಪನೆಯನ್ನು ಭೇಟಿಯಾಗಲಿದ್ದು, ಬಿಗ್ ಬ್ಯಾಂಗ್ ಶುರುವಾಗಲಿದೆ ಎಂದು ಕುತೂಹಲ ಮೂಡಿಸಿದೆ.
ಆರಂಭದಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೊಂಬಾಳೆ, ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆಯಿತು. ಬಳಿಕ ಕೆಜಿಎಸ್ ಸರಣಿ ಚಾಪ್ಟರ್ 2 ಕೂಡ ರಿಲೀಸ್ ಮಾಡಿ ತನ್ನ ಮೈಲಿಗಲ್ಲು ಸಾಧಿಸಿತು. ಸದ್ಯ ಟಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಹೊಂಬಾಳೆ, ನಟ ಪ್ರಭಾಸ್ ಅವರಿಗೆ ಸಲಾರ್ ಸಿನಿಮಾ ಮಾಡಿ ಗೆದ್ದಿದೆ. ಸಲಾರ್-2 ಕೂಡ ಸೆಟ್ಟೇರಲಿದ್ದು, ಸದ್ಯ ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಬ್ಯುಸಿಯಾಗಿದೆ.
ಈ ಹಿಂದೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾವನ್ನು ಕೂಡ ಹೊಂಬಾಳೆ ನಿರ್ಮಾಣ ಮಾಡಿತ್ತು. ಇದರ ಸರಣಿ ಸಿನಿಮಾ ಕೂಡ ಶೂಟಿಂಗ್ ನಡೆಯುತ್ತಿದೆ. ಮಲಯಾಳಂ ನಟ ಫಹಾದ್ ಫಾಸಿಲ್‌ಗೂ ಒಂದು ಸಿನಿಮಾ ಮಾಡಿದೆ. ಇದೀಗ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಹಲವು ಸಿನಿಮಾಗಳಿಗೆ ಕೈಹಾಕಿದೆ. ತಮ್ಮ ಮುಂದಿನ ಪ್ರಾಜೆಕ್ಟ್ ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ಘೋಷಣೆ ಮಾಡಿ ಸರ್‌ಪ್ರೈಸ್ ನೀಡಿದೆ. ಯಶ್ ನಟನೆಯ ಕೆಜಿಎಫ್ ಚಾಪ್ಟರ್ 3 ಕೂಡ ಸದ್ಯದಲ್ಲೇ ಸೆಟ್ಟೇರಲಿದ್ದು, ಹಿಟ್ ಅಭಿಮಾನಿಗಳು ಈ ಸಿನಿಮಾಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.












Click it and Unblock the Notifications