Hanumantha: ಅನುಪಮ, ನಿವೇದಿತಾಗೆ ಟಕ್ಕರ್ ಕೊಟ್ಟ ಹನುಮಂತ- ವೈರಲ್ ಆಯ್ತು ಹಳ್ಳಿ ಹೈದನ ಡೈಲಾಗ್
ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಬಾಯ್ಸ್ v/s ಗರ್ಲ್ಸ್ ಕಾರ್ಯಕ್ರಮದಲ್ಲಿ ಕೆಣಕಲು ಬಂದ ಅನುಪಮ ಹಾಗೂ ನಿವೇದಿತಾಗೆ ಟಕ್ಕರ್ ಕೊಟ್ಟು ಗಪ್‌ಚುಪ್ ಆಗಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು.. ವೇದಿಕೆ ಮೇಲೆ ಹನುಮಂತನನ್ನು ಕೆಣಕಲು ಬಂದ ನಿವೇದಿತಾ ಹಾಗೂ ಅನುಪಮ ಕಪ್‌ಚುಪ್ ಆಗಿದ್ದಾರೆ. ಬಾಯ್ಸ್ v/s ಗರ್ಲ್ಸ್ ಕಾರ್ಯಕ್ರಮದಲ್ಲಿ ಹನುಮಂತ ಅವರು ನಿವೇದಿತಾ ಗೌಡ ಅವರೊಂದಿಗೆ ನಡೆದ ಚರ್ಚೆಯಿಂದಾಗಿ ವೈರಲ್ ಆಗಿದ್ದಾರೆ. ನಿವೇದಿತಾ ಗೌಡ ಅವರ ಉಗುರಿನ ಬಗ್ಗೆ ನಡೆದ ಚರ್ಚೆಗೆ ಹನುಮಂತ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಹನುಮಂತನ ಸ್ಪಷ್ಟ ಹಾಗೂ ಸಮಂಜಸವಾದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

ಬಿಗ್‌ಬಾಸ್ ಸೀಸನ್ 11ರಲ್ಲಿ ವಿಜೇತರಾಗುವ ಮೂಲಕ ಹನುಮಂತ ಫೇಮಸ್ ಆಗಿದ್ದಾರೆ. ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದೆ. ಹನುಮಂತ ಸೈಲೆಂಟ್ ಆಗಿರುವುದು ಹೆಚ್ಚು. ಹಾಗಂತ ಅವರನ್ನು ಯಾರಾದರೂ ಕೆಣಕಲು ಬಂದರೆ ಅದಕ್ಕೆ ಉತ್ತರ ಕೊಡದೆ ಸುಮ್ಮನಾಗುವುದೇ ಇಲ್ಲ.
ಈಗ ಬಾಯ್ಸ್ v/s ಗರ್ಲ್ಸ್ ವೇದಿಕೆ ಮೇಲೆ ನಿವೇದಿತಾ ಗೌಡ ಅವರೊಂದಿಗೆ ತಮ್ಮನ್ನು ಕೆಣಕಲು ಬಂದವರಿಗೆ ಹನುಮಂತ ಖಡಕ್ ಉತ್ತರ ನೀಡಿದ್ದಾರೆ. ಹಾಗಾದರೆ ವೇದಿಕೆ ಮೇಲೆ ಆಗಿದ್ದೇನು? ನಿವೇದಿತ ಬಿಟ್ಟ ಉದ್ದವಾದ ಉಗುರು ತೋರಿಸಿ ಅನುಪಮ ನಿಮಗೆ ಏನನಿಸುತ್ತಿದೆ ಎಂದು ಹನುಮಂತನಿಗೆ ಕೇಳಿದಾಗ ಹನುಮಂತ ಹೇಳಿದ್ದೇನು?
ಅನುಪಮ, ನಿವೇದಿತಾಗೆ ಹನುಮಂತ ಟಕ್ಕರ್!
ಬಾಯ್ಸ್ v/s ಗರ್ಲ್ಸ್ ಶೋ ಫೆಬ್ರವರಿ 1ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಈ ಶೋ ಪ್ರಸಾರವಾಗಲಿದೆ. ಈ ವೇದಿಕೆ ಮೇಲೆ ನಿವೇದಿತ ಗೌಡ ಅವರ ಉಗುರು ಹೆಚ್ಚು ಚರ್ಚೆಯಾಯಿತು. ನಿವೇದಿತಾ ಅವರ ಕೈಗಳಲ್ಲಿ ಎರಡರಿಂದ ಮೂರು ಇಂಚಿನ ಉಗುರು ಸಾಕಷ್ಟು ಗಮನ ಸೆಳೆಯಿತು. ಬಾಯ್ಸ್ v/s ಗರ್ಲ್ಸ್ ಶೋನ ನಿರೂಪಕಿ ಅನುಪಮ ಅವರು ನಿವೇದಿತಾ ಗೌಡ ಅವರ ಉಗುರನ್ನು ಹೊಗಳಿದರು.
ಇದರಿಂದ ಖುಷಿ ಆದ ನಿವೇದಿತಾ ನಾನು ಇದೇ ಉಗುರಲ್ಲಿ ಹಣ್ಣನ್ನು ಕಟ್ ಮಾಡುತ್ತೇನೆ ಎಂದೆಲ್ಲಾ ಹೇಳಿದರು. ಅಲ್ಲದೆ ಇದು ಸಂಪೂರ್ಣ ನ್ಯಾಚುರಲ್ ಉಗುರು ಎಂದು ಹೇಳಿದರು. ನಿವೇದಿತಾ ಹೇಳುವುದನ್ನು ಕೇಳಿ ಹನುಮಂತ ಶಾಕ್ ಆದ. ಈ ವೇಳೆ ಅನುಪಮ ಅವರು ಹನುಮಂತನನ್ನು ನಿವೇದಿತಾ ಉಗುರು ಬಗ್ಗೆ ನಿಮಗೆ ಏನನಿಸುತ್ತಿದೆ ಎಂದು ಪ್ರಶ್ನೆ ಮಾಡುತ್ತಾರೆ.
ಇದಕ್ಕೆ ಹನುಮಂತ ಹೊಡೆದ ಡೈಲಾಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 'ಅದು ಉಗುರು ಅಷ್ಟೆ. ಕೆರೆದುಕೊಳ್ಳಲು ನಾನು ಒಂದು ಉಗುರು ಬಿಟ್ಟಿದ್ದೇನೆ. ಬಿಟ್ಟರೆ ಎಲ್ಲ ಉಗುರುಗಳು ಉದ್ದ ಬರುತ್ತವೆ' ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಹನುಮಂತ. ಹೀಗೆ ಹನುಮಂತ ಸಮಂಜಸವಾದ ಉತ್ತರ ಕೊಟ್ಟು ಒಂದು ಸಂದೇಶವನ್ನು ನೀಡಿದರು. ಹನುಮಂತನ ಈ ಮಾತಿಗೆ ಅನುಪಮ ಹಾಗೂ ನಿವೇದಿತಾ ಗಪ್‌ಚುಪ್ ಆಗಿದ್ದಾರೆ.
ಅಲ್ಲದೆ ಈ ಮಾತಿಗೆ ವೀಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿ ನಗಾಡಿದ್ದಾರೆ. ಒಟ್ಟಿನಲ್ಲಿ ಹನುಮಂತನ ಖಡಕ್ ಮಾತು ಎಲ್ಲರ ಗಮನ ಸೆಲೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.












Click it and Unblock the Notifications