Hanumantha: ಹನುಮಂತ - ತ್ರಿವಿಕ್ರಮ್ ತಾಯಂದಿರ ಹೇಳಿಕೆ, ಜನರ ರಿಯಾಕ್ಷನ್ ವಿಡಿಯೋ ವೈರಲ್!

Hanumantha: ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿದಿದೆ. ಆದರೆ ಈ ಬಾರಿ ಬಿಗ್‌ಬಾಸ್‌ ಸೀಸನ್ ಮುಕ್ತಾಯವಾದರೂ ಸಹ ಬಿಗ್‌ಬಾಸ್‌ ಸ್ಪರ್ಧಿಗಳ ಮಾತು ಜೋರಾಗಿದೆ. ಬಿಗ್ ಬಾಸ್ ಮುಕ್ತಾಯವಾಗಿ ಇಂದಿಗೆ ಒಂದು ವಾರವಾಗಿದೆ. ಆದರೆ ಈ ಬಾರಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಪೋಷಕರ ಮಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದೀಗ ಈ ಬಾರಿಯ ಬಿಗ್‌ಬಾಸ್‌ನ ವಿನ್ನರ್ ಹನುಮಂತ ಹಾಗೂ ರನ್ನರ್ ಆಫ್‌ ಆಗಿರುವ ತ್ರಿವಿಕ್ರಮ್ ಅವರ ತಾಯಂದಿರು ಮಾತನಾಡಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇಬ್ಬರು ಸ್ಪರ್ಧಿಗಳ ತಾಯಂದಿರು ಮಾತನಾಡಿರುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಜನ ಹಳ್ಳಿ ಹಾಗೂ ಸಿಟಿ ಜನರ ನಡುವೆ ಇರುವ ವ್ಯತ್ಯಾಸ ಇದೆ ಅಂತ ಹೇಳುತ್ತಿದ್ದಾರೆ.

Hanumantha and Trivikram Mother s Difference Statements Video Viral

ಬಿಗ್‌ಬಾಸ್‌ ಕನ್ನಡ ಈ ಬಾರಿ ಬೇರೆ ಬೇರೆ ಕಾರಣಕ್ಕೆ ಜೋರಾಗಿ ಚರ್ಚೆ ನಡೆದಿತ್ತು. ಈ ಬಾರಿಯ ಬಿಗ್‌ಬಾಸ್‌ ಕಿರೀಟವನ್ನು ಹನುಮಂತ ಅವರು ಎತ್ತಿಹಿಡಿದಿದ್ದಾರೆ. ಆದರೆ ಹನುಮಂತ ಅವರು ಗೆದ್ದಿರುವ ಬಗ್ಗೆ ತ್ರಿವಿಕ್ರಮ್ ಅವರ ತಾಯಿ ಹೇಳಿರುವ ಮಾತು ಭಾರೀ ವೈರಲ್‌ ಆಗಿದ್ದು.

ಸಾರ್ವಜನಿಕರಿಂದ ಟೀಕೆಗೂ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಹನುಮಂತ ಅವರ ತಾಯಿ ಮಾತನಾಡಿರುವ ವಿಡಿಯೋ ಸಹ ವೈರಲ್‌ ಆಗಿದೆ. ಜನ ಎರಡೂ ವಿಡಿಯೋಗಳನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ತ್ರಿವಿಕ್ರಮ್‌ ಅವರ ತಾಯಿ ಹೇಳಿದ್ದೇನು: ನನಗೆ ಹನುಮಂತನಲ್ಲಿ ಏನು ಕಾಣಿಸಲಿಲ್ಲ. ಅವನಿಗೆ ಸಿಗುವುದು ಬೇರೆ ಯಾರಿಗೇ ಸಿಕ್ಕಿದ್ದರು ಖುಷಿಯಾಗುತ್ತಿತ್ತು. ನಾನು ನನ್ನ ಮಗನಿಗೇ ಸಿಗಬೇಕಿತ್ತು ಅಂತ ಅಲ್ಲ. ಅಷ್ಟು ಜನರಲ್ಲಿ ಬೇರೆ ಯಾರಿಗೇ ಸಿಕ್ಕಿದ್ದರೂ ನನಗೆ ಖುಷಿಯಾಗುತ್ತಿತ್ತು.

ಬೇರೆ ಯಾರಿಗಾದರೂ ಸಿಗಬಹುದಾಗಿತ್ತು ಎಂದು ‌ತ್ರಿವಿಕ್ರಮ್ ಅವರ ತಾಯಿ ಹೇಳಿರುವ ವಿಡಿಯೋ ವೈರಲ್ ಆಗಿತ್ತು. ತ್ರಿವಿಕ್ರಮ್ ಅವರ ತಾಯಿ ಹೇಳಿರುವ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು. ಈ ವಿಡಿಯೋ ವೈರಲ್ ಆಗಿದೆ. ಈಗಾಗಲೇ ಈ ಬಗ್ಗೆ ತ್ರಿವಿಕ್ರಮ್‌ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಈ ವಿಡಿಯೋ ವೈರಲ್ ಆಗುತ್ತಿದೆ.

ಹನುಮಂತ ಅವರ ತಾಯಿ ಹೇಳಿದ್ದೇನು: ಇನ್ನು ಬಿಗ್‌ಬಾಸ್‌ ಸ್ಪರ್ಧಿಗಳ ಬಗ್ಗೆ ಹನುಮಂತ ಅವರ ತಾಯಿ ಸಹ ಮಾತನಾಡಿದ್ದು ಅವರ ವಿಡಿಯೋ ಸಹ ವೈರಲ್ ಆಗಿದೆ. ಅವರು ಸಹ ಬಿಗ್‌ಬಾಸ್‌ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದು. ಯಾರಾದರೂ ಕಪ್‌ ಗೆಲ್ಲಲಿ ಆದರೆ ಎಲ್ಲರೂ ಚಂದ ಇರ್ಲಿಪಾ ಎಂದಿದ್ದರು. ಈ ವಿಡಿಯೋವನ್ನು ಜನ ಮೆಚ್ಚಿಕೊಂಡಿದ್ದಾರೆ.

ಹಳ್ಳಿ - ಸಿಟಿ ವ್ಯತ್ಯಾಸ ಎಂದು ಹೇಳುತ್ತಿರುವ ಜನ: ಬಿಗ್‌ಬಾಸ್‌ ಸ್ಪರ್ಧಿಗಳ ಪೋಷಕರು ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು. ಜನ ಸಿಟಿ ಹಾಗೂ ಹಳ್ಳಿಯ ಜನರಿಗೆ ಇರುವ ವ್ಯತ್ಯಾಸ ಇಷ್ಟೇ ಅಂತ ಹೇಳುತ್ತಿದ್ದಾರೆ. ಹಳ್ಳಿಯ ಜನ ವಿಶಾಲವಾಗಿ ಯೋಚನೆ ಮಾಡುತ್ತಾರೆ ಎಲ್ಲರೊಂದಿಗೂ ಹಂಚಿ ತಿನ್ನುವ ಮನೋಭಾವ ಅವರದ್ದು. ಆದರೆ ಸಿಟಿ ಜನ ಸೀಮಿತವಾಗಿ ಯೋಚನೆ ಮಾಡುತ್ತಾರೆ ಎಂದು ಜನ ಹೇಳುತ್ತಿದ್ದಾರೆ. ಸಿಟಿ ಹಾಗೂ ಹಳ್ಳಿ ಜನರ ನಡುವಿನ ವ್ಯತ್ಯಾಸಕ್ಕೆ ಈ ವಿಡಿಯೋ ಉದಾಹರಣೆ ಎಂದು ಜನ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+