Bigg Boss: ಕ್ಯಾಪ್ಟನ್ ಆದ ಗೌತಮಿ: ಗೌತಮಿ ಜೊತೆಗೆ ಆಡಲ್ಲ ಎಂದ ಮೋಕ್ಷಿತಾಗೆ ಭಾರೀ ಮುಖಭಂಗ!
ನಾನು ಗೌತಮಿ ಜೊತೆಗೆ ಮಾತ್ರ ಕ್ಯಾಪ್ಟನ್ಸಿ ಟಾಸ್ಕ್ ಆಡಲ್ಲ ಎಂದು ಪಟ್ಟು ಹಿಡಿದಿದ್ದ ಮೋಕ್ಷಿತಾಗೆ ಭಾರೀ ಮುಖಭಂಗವಾಗಿದೆ. ಯಾಕೆಂದರೆ ಗೌತಮಿ ಅವರು ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಉತ್ತಮವಾಗಿ ಆಡಿ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದರಿಂದ ಗೌತಮಿ ಜೊತೆಗೆ ಆಡಿದರೆ ಸೋಲುವ ಭಯ ಹೊಂದಿದ್ದ ಮೋಕ್ಷಿತಾಗೆ ಈಗ ಮುಜುಗರವಾಗಿದೆ. ಮನೆಯ ಇತರ ಸದಸ್ಯರು ಗೌತಮಿ ಆಟಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗೌತಮಿ ಖುಷಿಯಾಗಿ ಕ್ಯಾಪ್ಟನ್ ರೂಮ್ ಪ್ರವೇಶ ಮಾಡಿರುವುದು ಕೂಡ ಇಂದಿನ ಸಂಚಿಕೆ ನೋಡುವ ಕುತೂಹಲವನ್ನು ಹೆಚ್ಚಿಸಿದೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು, ಗೌತಮಿ ಹಾಗೂ ಮೋಕ್ಷಿತಾ ಒಂದೇ ಟೀಂ ಅಂತ ಹೇಳಲಾಗುತ್ತಿತ್ತು. ಆದರೆ ಮಹಾರಾಜ ಟಾಸ್ಕ್ ವೇಳೆ ಮಂಜು ಹಾಗೂ ಗೌತಮಿ ವಿರುದ್ಧ ಮೋಕ್ಷಿತಾ ಕೋಪ ಮಾಡಿಕೊಂಡಿದ್ದರು. ಆ ಕೋಪದಿಂದಲೇ ಗುಂಪುಗಾರಿಕೆಯಿಂದ ಹೊರಬಂದ ಮೋಕ್ಷಿತಾ ಕ್ಯಾಪ್ಟನ್ಸ್ ಟಾಸ್ಕ್ ಅನ್ನು ಆಡಲು ಗೌತಮಿ ಸಹಾಯವನ್ನು ಕೇಳಲ್ಲ ಎಂದು ಪಟ್ಟು ಹಿಡಿದಿದ್ದರು.

ಇದರಿಂದ ಬಿಗ್‌ಬಾಸ್ ಮೋಕ್ಷಿತಾಗೆ ದೊಡ್ಡ ತಲೆದಂಡವೇ ನೀಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಸಹ ನೀಡಿದ್ದರು. ಆದರೂ ಕೂಡ ಮೋಕ್ಷಿತಾ ಗೌತಮಿಯೊಂದಿಗೆ ಆಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದಲೇ ಹೊರಗುಳಿದ ಮೋಕ್ಷಿತಾಳನ್ನು ಬಿಟ್ಟು ಗೌತಮಿಗೆ ಕ್ಯಾಪ್ಟನ್ ಟಾಸ್ಕ್ ಆಡಲು ಅವಕಾಶ ನೀಡಲಾಗುತ್ತದೆ.
ಈ ವೇಳೆ ಗೌತಮಿ ಉತ್ತಮವಾಗಿ ಆಟ ಆಡಿ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದು ಗೌತಮಿ ಅವರಿಗಿರುವ ಶ್ರದ್ಧೆ ಹಾಗೂ ಗೆಲ್ಲುವ ಛಲಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇತ್ತೀಚೆಗೆ ಗೌತಮ ಹಾಗೂ ಮಂಜು ಇವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಂಜು ಹಾಗೂ ಗೌತಮಿ ಅವರು ಹಾಕಿಕೊಂಡಿದ್ದ ಸ್ಪಾಂಜ್‌ಗೆ ಹೆಚ್ಚು ಚೂರಿ ಚುಚ್ಚಲಾಗಿತ್ತು. ಮನೆಯ ಇತರ ಸದಸ್ಯರೂ ಕೂಡ ಇವರನ್ನೇ ಟಾರ್ಗೇಡ್ ಮಾಡಿದ್ದರು. ಇದರಿಂದ ಮನೆಯಿಂದ ಹೊರಹೋಗುವ ಭಯ ಗೌತಮಿ ಅವರಿಗೆ ಆಟದಲ್ಲಿನ ಗಂಭೀರತೆಯನ್ನು ಹೆಚ್ಚಿಸಿತ್ತು.
ಆದರೆ ಇದೆಲ್ಲವನ್ನೂ ಸವಾಲಾಗಿ ಸ್ವೀಕರಿಸಿದ ಗೌತಮಿ ಮೆಣಸಿನಿಕಾಯಿ ಹಗಲಕಾಯಿ ತಿಂದಷ್ಟೇ ಸುಲಭವಾಗಿ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಆಡಿ ಮನೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇದರಿಂದ ಮೋಕ್ಷಿತಾಗೆ ಭಾರೀ ಮುಖಭಂಗವಾಗಿದೆ. 'ನಾನು ಸ್ವಾಭಿಮಾನ ಬಿಟ್ಟು ಆಡಲ್ಲ. ಗೌತಮಿ ಜೊತೆಗೆ ಆಡಿದರೆ ಸೋಲು ಖಚಿತ' ಎಂದೆಲ್ಲಾ ಯೋಚಿಸಿದ್ದ ಮೋಕ್ಷಿತಾಗೆ ಆಟದ ಮೂಲಕ ಗೌತಮಿ ಉತ್ತರ ಕೊಟ್ಟಿದ್ದಾರೆ.
ಗೌತಮಿ ಜೊತೆಗೆ ಆಡಲ್ಲ ಎಂದಿದ್ದ ಮೋಕ್ಷಿತಾ ಕ್ಯಾಪ್ಟನ್ ಗೌತಮಿ ಮಾತು ಕೇಳ್ತಾರಾ ಎನ್ನುವ ಕುತೂಹಲ ಮೋಡಿದೆ. ಮೂಮದಿನ ದಿನಗಳಲ್ಲಿ ಬಿಗ್‌ಬಾಸ್ ಇನ್ನಷ್ಟು ಕುತೂಹಲ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ ಟಾಸ್ಕ್ ವಿಚಾರದಲ್ಲಿ ಗೌತಮಿ ಅವರು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಇದರಿಂದ ಮನೆ ಮಂದಿಗೆಲ್ಲಾ ಪರೋಕ್ಷವಾಗಿ ಕೂಡ ಉತ್ತರ ಕೊಟ್ಟಿದ್ದಾರೆ. ಇನ್ನುಮುಂದಿನ ಆಟ ಹೇಗಿರಲಿದೆ ಎನ್ನುವುದನ್ನು ಕಾದು ನೊಡಬೇಕಿದೆ.












Click it and Unblock the Notifications