ಮಂಜುಗೆ ಕ್ರಶ್ ಆಗಿಲ್ಲ..ಮದುವೆಯಾಗಿಲ್ಲ ಎನ್ನುವ ಬೇಜಾರಿದೆ- ಗೌತಮಿ ಜಾದವ್
ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಒಂದು ಸುಂದರವಾದ ಗೆಳೆತನ ಇತ್ತು. ಗೌತಮಿ ಜಾದವ್, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವೆ ಕಾರ್ಯಕ್ರಮ ಆರಂಭದಲ್ಲೇ ಒಂದೊಳ್ಳೆ ಸ್ನೇಹ ಬೆಳೆದುಕೊಂಡಿತ್ತು. ಅದೇನಾಯ್ತೋ ಗೊತ್ತಿಲ್ಲ ಮೋಕ್ಷಿತಾ ಕೆಲ ದಿನಗಳ ನಂತರ ಇವರಿಬ್ಬರ ಸ್ನೇಹದಿಂದ ಅಂತರ ಕಾಯ್ದುಕೊಂಡರು. ಕೊನೆಯ ದಿನಗಳಲ್ಲಿ ಮತ್ತೆ ಒಂದಾದರು. ಆದರೆ ಗೌತಮಿ ಜಾದವ್ ಮತ್ತು ಉಗ್ರಂ ಮಂಜು, ಗೌತಮಿ ಮನೆಯಿಂದ ಹೊರ ಹೋಗುವ ಕೊನೆ ದಿನದ ವರೆಗೂ ಉತ್ತಮ ಸ್ನೇಹಿತರಾಗಿದ್ದರು.
ಸದ್ಯ ಸಿಂಗಲ್ ಆಗಿರುವ ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ನಂತರ ಮದುವೆ ಮಾಡಿಸುತ್ತೇನೆ, ಹುಡುಗಿ ಹುಡುಕುತ್ತೇನೆ ಅಂತಾ ಗೌತಮಿ ಜಾದವ್ ಹೇಳಿದ್ದರು. ಅಲ್ಲದೇ ಉಗ್ರಂ ಮಂಜು ಅವರ ಡ್ರೀಮ್ ಗರ್ಲ್ ಚಿತ್ರ ಕೂಡ ಬಿಡಿಸಿದ್ದರು. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಗೌತಮಿ ಮಂಜು ಅವರಿಗೆ ಹುಡುಗಿ ಹುಡುಕುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಸ್ವತಃ ಗೌತಮಿ ಉತ್ತರಿಸಿದ್ದಾರೆ.

ವಿಶ್ವ ವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಮಂಜು ಅವರಿಗೆ ಹುಡುಗಿ ಹುಡುಕುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಅಂತಾ ಬಿಗ್ ಬಾಸ್ ಮನೆಯೊಳಗೆ ಹೇಳಿದ್ದೆ. ಆದರೆ ಆ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುವುದಿಲ್ಲ. ಅವರ ಕುಟುಂಬಸ್ಥರು ಇದ್ದಾರೆ. ಅವರ ತಂಗಿಯಂದಿರು ಇದ್ದಾರೆ. ಅವರು ಈಗಾಗಲೇ ನೋಡಿ ಇಟ್ಟಿರಲು ಬಹುದೇನೋ ನನಗೆ ಗೊತ್ತಿಲ್ಲ. ಹುಡುಗಿ ನೋಡ್ತೀನಿ ಮದುವೆ ಮಾಡುತ್ತೇನೆ ಅಂತಾ ಹೇಳಿದ್ದೇನೆ. ಅವರ ಹುಡುಗಿ ಚಿತ್ರ ಕೂಡ ಬಿಡಿಸಿದ್ದೇನೆ' ಎಂದರು.
'ಎಲ್ಲರೂ ಮಂಜಣ್ಣ ಮಂಜಣ್ಣ ಅಂತಾ ಕರೆದು ಕರೆದು ಅವರಿಗೆ ಮದುವೆಯಾಗಿಲ್ಲ ಎನ್ನುವ ಬೇಜಾರು ಇದೆ. ಎಲ್ಲರೂ ಅಣ್ಣಾ ಅಂತಾರೆ ಎನ್ನುವ ಬೇಜಾರು ಮಂಜು ಅವರಿಗೆ ಇದೆ. ಹೀಗಾಗಿ ಹೊರಗಡೆ ಹೋದ ಮೇಲೆ ಅಣ್ಣ ಅಂತಾ ಕರೆಯದೇ ಇರುವ ಒಂದು ಹುಡುಗಿನಾದರೂ ಹುಡುಕಿ ಮದುವೆ ಮಾಡೋಣ ಅಂತಾ ಹೇಳಿದ್ದೇನೆ' ಎಂದು ಹೇಳಿದರು.

'ಮದುವೆ ಬಗ್ಗೆ ಮಂಜು ನನ್ನ ಜೊತೆ ಆಗಾಗ ಮಾತನಾಡುತ್ತಿದ್ದರು. ಬಿಗ್ ಬಾಸ್ ಮನೆಯೊಳಗೆ ಬರುವ ಮುಂಚೆ ಅಪ್ಪ-ಅಮ್ಮನಿಗೆ ಹುಡುಕಲು ಹೇಳಿದ್ದೆ. ಒಂದು ವೇಳೆ ಅವರು ನೋಡಿದ್ದರೆ ನಾನು ಹೋಗಿ ಭೇಟಿಯಾಗಿ ಮದುವೆ ಆಗುತ್ತೇನೆ ಅಂತಾ ಹೇಳಿದ್ದಾರೆ. ಅದರ ಬಗ್ಗೆ ಅತಿಯಾಗಿ ಏನೂ ಮಾತನಾಡಿಲ್ಲ. ಕೆಲಸದ ಬಗ್ಗೆ ತುಂಬಾ ಚರ್ಚೆ ಮಾಡುತ್ತಿದ್ದರು. ತುಂಬಾ ಕೆಲಸ ಇರಬೇಕು, ಕೆಲಸ ಮಾಡುತ್ತಲೇ ಇರಬೇಕು ಎನ್ನುತ್ತಿದ್ದರು'.
'ಅಪ್ಪ-ಅಮ್ಮ ಹುಡುಗಿ ನೋಡಿದರೆ ಮದುವೆ ಆಗುತ್ತೇನೆ ಎನ್ನುವ ರೀತಿ ಅವರು ಇದ್ದರು. ಒಂದು ಸೆಕೆಂಡ್‌ಗೆ ಕ್ರಶ್ ಆಗಿದೆ ಅಂತೆಲ್ಲಾ ಹೇಳೇ ಇಲ್ಲ. ನನ್ನ ಹತ್ತಿರನೂ ಹೇಳಿಕೊಂಡಿಲ್ಲ. ಅವರಿಗೂ ಕ್ರಶ್ ಆಗಿಲ್ಲ. ಒಂದು ವೇಳೆ ಆಗಿದ್ದರೆ ನನಗೆ ಗೊತ್ತಾಗುತ್ತಿತ್ತು. ಗೊತ್ತಾಗಿನೂ ಅದನ್ನು ಎಂಟರ್‌ಟೈನ್ ಮಾಡುವಳು ನಾನಲ್ಲ. ನನಗೂ ಫ್ಯಾಮಿಲಿ ಜವಾಬ್ದಾರಿ ಇದೆ' ಎಂದು ಗೌತಮಿ ಜಾದವ್ ಹೇಳಿದರು.












Click it and Unblock the Notifications