ಗೋಲ್ಡನ್ ಸ್ಟಾರ್ ಗಣೇಶ್: ಆ ಒಂದು ಸಿನಿಮಾದಿಂದ ಕೋಟಿ ಲೆಕ್ಕದಲ್ಲಿ ಸಂಭಾವನೆ ಹೆಚ್ಚಳ, ಈಗ ಎಷ್ಟಿದೆ?
ಬೆಂಗಳೂರು, ಜುಲೈ 02: ರೋಮ್ಯಾಂಟಿಕ್ ಹಿರೋ ಆಗಿ ದಶಕಗಳಿಂದಲೂ ನಟಿಸುತ್ತಾ ಬಂದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದೊಂದೆ ಸಕ್ಸಸ್ ಅನ್ನು ತಮ್ಮದಾಗಿಸಿಕೊಂಡು ಬಂದವರು. ಇಂದು ಅವರ ಜನ್ಮದಿನ. ಆಪ್ತರು, ಸಹ ಕಲಾವಿದರು, ಕುಟುಂಬಸ್ಥರು, ಮೇಲಾಗಿ ಸಾಕಷ್ಟು ಅಭಿಮಾನಿಗಳು ವಿಷ್ ಮಾಡುತ್ತಿದ್ದಾರೆ. ಹೊಸ ವಸಂತಕ್ಕೆ ಕಾಲಿಟ್ಟಿರುವ ಅವರು ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರ 'ಕೃಷ್ಣಂ ಪ್ರಣಯಂ ಸಖಿ' ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಅದರ ಬೆನ್ನಲ್ಲೆ ಗಣೇಶ್ ಅವರ ಸಂಭಾವನೆ ಸಹ ಹೆಚ್ಚಾಗಿದೆ...
ಜುಲೈ 02ರಂದು ಗಣೇಶ್ ಅವರ ಹುಟ್ಟು ಹಬ್ಬ ಪ್ರಯುಕ್ತ ಅವರ ಮುಂದಿನ ಪ್ರಾಜೆಕ್ಟ್‌ಗಳು ಬಹಿರಂಗೊಂಡಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಫ್ಯಾನ್ಸ್‌ಗಾಗಿ ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿಯೇ ಶೂಟಿಂಗ್‌ನಲ್ಲಿರುವ ಕಾರಣ ಅವರು ಅಭಿಮಾನಿಗಳಿಗೆ ಮನೆ ಮುಂದು ಬಂದು ಹುಟ್ಟು ಹಬ್ಬ ಆಚರಿಸುವುದು ಬೇಡ. ನಾನು ನಿಮಗೆ ಸಿಗಲ್ಲ. ದಯಮಾಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಅಲ್ಲಿದ್ದೇ ನನಗೆ ಆಶಿರ್ವದಿಸಿ ಎಂದು ಕೇಳಿಕೊಂಡಿದ್ದರು.

ಸಾಮಾನ್ಯ ನಟನಾಗಿದ್ದ ಗಣೇಶ ಅವರು ಯೋಗರಾಜ್ ಭಟ್ ಅವರ 'ಮುಂಗಾರು ಮಳೆ' ಸಿನಿಮಾ ತೆರೆಗೆ ಬಂದ ಬಳಿಕ ಸ್ಟಾರ್ ನಟರಾದರು. ಮೊದಲು 10-20 ಲಕ್ಷ ರೂ.ಸಂಭಾವನೆ ಪಡೆಯುತ್ತಿದ್ದ ಗಣೇಶ್ ಅವರು, 'ಗಾಳಿಪಟ' ಸಿನಿಮಾಗಾಗಿ 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದು ಗಾಂಧಿ ನಗರದಲ್ಲಿ ಚರ್ಚೆ ಆಗಿತ್ತು. ಇತ್ತೀಚೆಗೆ ತೆರೆಕಂಡ ಅವರ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ನಟನೆಗಾಗಿ ಗಣೇಶ್ 03 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.
ನಟ ಗಣೇಶ್ ಇಂದಿನ ಸಂಭಾವನೆ ಹೆಚ್ಚಳ..
ಒಂದು ಬಿಗ್ ಹಿಟ್‌ಗಾಗಿ ಕಾಯುತ್ತಿದ್ದ ಗಣೇಶ್ ಅವರ ನಿರೀಕ್ಷೆಯನ್ನು 'ಕೃಷ್ಣಂ ಪ್ರಣಯ ಸಖಿ' ಹುಸಿ ಮಾಡಲಿಲ್ಲ. ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಸಿನಿಮಾ ಆಯಿತು. ಅಂದುಕೊಂಡಂತೆ ಬ್ರೇಕ್ ಸಿಕ್ಕಿತ್ತು. ಅಲ್ಲಿಂದ ಗಣೇಶ್ ಅವರಿಗೆ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಅವರು ಹೊಸ ಸಿನಿಮಾಗಳಲ್ಲಿ ನಟಿಸಲು 05 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪಿನಾಕಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಪೋಸ್ಟರ್ ಹಾಗೂ 'ಯುವರ್ ಸಿನ್ಸಿಯರ್ಲಿ ರಾಮ್' ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ನಟಿಸುತ್ತಿದ್ದಾರೆ. ಜನ್ಮದಿನಕ್ಕೆ ಪೋಸ್ಟರ್ ರಿಲೀಸ್ ಆಗಿವೆ. ಇದರ ಬೆನ್ನಲ್ಲೆ 'ಕೃಷ್ಣ ಪ್ರಣಯಂ ಸಖಿ- 2' ಸಿನಿಮಾ ಸಹ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಒಟ್ಟಾರೆ ಈ ಬಾರಿ ಗಣೇಶ್ ಅವರ ಜನ್ಮದಿನದಂದು ಅಭಿಮಾನಿಗಳಿಗೆ ಭರ್ಜರಿ ಸುದ್ದಿಗಳು ಸಿಕ್ಕಿವೆ.












Click it and Unblock the Notifications