Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಹಲ್ಲೆ ಮಾಡಿದ್ದವರು ಯಾರು?
ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಈ ಮೂಲಕ ಹೊಸ ಜೀವನಕ್ಕೆ ಕಾಲು ಇಟ್ಟಿದ್ದಾರೆ. ಒಂದು ಕಾಲದಲ್ಲಿ ಚಿತ್ರಾನ್ನ ಕೊಳ್ಳಲು ಕೂಡ ಪರದಾಡಿದ್ದ ನಟನಿಗೆ ಈಗ ಎಲ್ಲವೂ ಹುಡುಕಿಕೊಂಡು ಬರುತ್ತಿದೆ. ಹೀಗಿದ್ದಾಗಲೇ ಸುಮಾರು 17 ವರ್ಷಗಳ ಹಿಂದೆ ಗಣೇಶ್ ಮೇಲೆ ಕನ್ನಡದ ಪ್ರಖ್ಯಾತ ನಟರೊಬ್ಬರು ಕೈಮಾಡಿ, ಹಲ್ಲೆ ನಡೆಸಿದ್ದರು ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು ಅನ್ನೋದು ಗೊತ್ತೆ? ಆ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಹೌದು, ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಾಕಷ್ಟು ಕಷ್ಟಪಟ್ಟು ಮೇಲೆ ಬಂದರು. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ 2006 ರಲ್ಲಿ ರಿಲೀಸ್ ಆಗಿದ್ದ 'ಮುಂಗಾರು ಮಳೆ' ಸಿನಿಮಾ ಕೈಹಿಡಿದು ನಿಲ್ಲಿಸಿತ್ತು. ಅಲ್ಲದೆ ರಾತ್ರೋರಾತ್ರಿ ಮಾಮೂಲಿ ಗಣೇಶ್ ಆಗಿದ್ದವರಿಗೆ, ಗೋಲ್ಡನ್ ಸ್ಟಾರ್ ಗಣೇಶ್ ಎಂಬ ಬಿರುದು ಕೊಟ್ಟಿತ್ತು. ಹೀಗಿದ್ದಾಗ ನಟ ಗಣೇಶ್ ಅವರ ಕೀರ್ತಿ ಮುಗಿಲು ಮುಟ್ಟಿತ್ತು. ಇಂತಹ ಸಮಯದಲ್ಲೇ ಕನ್ನಡದ ಖ್ಯಾತ ನಟರೊಬ್ಬರು ಗಣೇಶ್ ಮೇಲೆ ಹಲ್ಲೆ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಹಾಗೇ ಈ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಕೂಡ ಸೃಷ್ಟಿ ಮಾಡಿತ್ತು.

ನಟ ಗಣೇಶ್ ವಿರುದ್ಧ ಇದೇನಿದು?
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಗತ್ತು ಪ್ರದರ್ಶಿಸುತ್ತಿದ್ದರು. ಹೀಗಿದ್ದಾಗ ಗಣೇಶ್ ಅವರ ವಿರೋಧಿಗಳು ಸೇರಿ ಗಣೇಶ್ ವಿರುದ್ಧ ಹಲವು ರೀತಿಯ ಕುತಂತ್ರ ಮಾಡಿದ್ದರು. ಕೊನೆಗೆ ಇದು ದೊಡ್ಡ ಸಂಚಲನ ಕೂಡ ಸೃಷ್ಟಿ ಮಾಡಿತ್ತು. ಹೇಗೆ ನೋಡಿದ್ರು ಕೊನೆಗೆ ಗಣೇಶ್ ಅವರೇ ಟಾರ್ಗೆಟ್ ಆಗುತ್ತಿದ್ದರು.
ಹೀಗಿದ್ದಾಗ ನಟ ಗಣೇಶ್ ಮೇಲೆ ಹಲ್ಲೆ ಮಾಡಿ, ಹಿಂಸೆ ನೀಡಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಅದೂ, ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಕೊನೆಗೂ ಅದೇ ಹೀರೋ ಬಹಿರಂಗವಾಗಿ ಗಣೇಶ್ ನನ್ನ ತಮ್ಮನಂತೆ ಅಂತಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಎಲ್ಲವೂ ತಣ್ಣಗಾಗಿ ಹೋಗಿತ್ತು! ಹಾಗೂ ಗಣೇಶ್ ಅವರ ವಿರುದ್ಧ ನಡೆದಿದ್ದ ಕುತಂತ್ರದ ಸುಳ್ಳು ಸುದ್ದಿ ಇದು ಎಂಬುದು ಖಚಿತವಾಗಿತ್ತು.
ಕಷ್ಟಪಟ್ಟು ಮೇಲೆ ಬಂದ ಗಣೇಶ್
'ಗುಟ್ಟು' ಸಾಕ್ಷ್ಯ ಚಿತ್ರದ ಮೂಲಕ ಗಣೇಶ್ ಕ್ಯಾಮೆರಾ ಮುಂದೆ ಬಂದರು. ಇದೇ ಆಧಾರದಲ್ಲೇ, ಗಣೇಶ್ ಅವರಿಗೆ ಧಾರಾವಾಹಿ & ಕಾಮಿಡಿ ಶೋಗಳಲ್ಲಿ ನಟನೆ ಮಾಡಲು ಅವಕಾಶಗಳು ಹರಿದು ಬಂದವು. ಇಷ್ಟೆಲ್ಲಾ ಮಾಡುತ್ತಿದ್ದರೂ, ನಟ ಗಣೇಶ್ ಇನ್ನೂ ಗೋಲ್ಡನ್ ಅವಕಾಶ ಪಡೆಯಲು ಪರದಾಡುತ್ತಿದ್ದರು. ಪರಿಸ್ಥಿತಿ ಹೀಗಿದ್ದಾಗ, ಗಣೇಶ್‌ಗೆ ಚಿನ್ನದಂತಹ ಅವಕಾಶ ಹುಡುಕಿಕೊಂಡು ಬಂದಿತ್ತು.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಟೈಮ್' ಮೊಟ್ಟ ಮೊದಲಿಗೆ ನಟ ಗಣೇಶ್ ಅವರನ್ನ ಕರ್ನಾಟಕದ ಪ್ರತಿ ಮನೆ & ಮನದಲ್ಲಿ ನೆಲೆಯೂರುವಂತೆ ಮಾಡಿತ್ತು. ಆ ನಂತರವೇ ಚೆಲ್ಲಾಟ ಸಿನಿಮಾದಲ್ಲಿ ನಟಿಸಿ & ಮುಂಗಾರು ಮಳೆ ಮೂಲಕ ದೊಡ್ಡ ಖ್ಯಾತಿ ಪಡೆದು ಗಣೇಶ್ ಮಿಂಚಿದರು. ಇದೀಗ ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ 'ಗೋಲ್ಡನ್ ಸ್ಟಾರ್' ಆಗಿದ್ದಾರೆ ನಟ ಗಣೇಶ್ ಅವರು.
ಗಣೇಶ್‌ಗೆ ಸಿಕ್ಕಿತ್ತು ಮತ್ತೊಂದು ಜನ್ಮ!
'ಮುಂಗಾರು ಮಳೆ' ಈ ಪದ ಕೇಳುತ್ತಿದ್ದಂತೆ ಜನಗಳಿಗೆ ಮಳೆ ಬಗ್ಗೆ ನೆನಪು ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಕನ್ನಡ ಸಿನಿಮಾ ರಂಗದಲ್ಲೇ ದೊಡ್ಡ ಹೆಸರು ಮಾಡಿದ್ದ ಚಿತ್ರ 'ಮುಂಗಾರು ಮಳೆ' ಕಣ್ಣ ಎದುರಲ್ಲಿ ಬಂದು ಬಿಡುತ್ತದೆ. ಅದರಲ್ಲೂ 'ಮುಂಗಾರು ಮಳೆ' ಸಿನಿಮಾ ನಟ ಗಣೇಶ್ ಬಾಳಿಗೆ ದೊಡ್ಡ ತಿರುವನ್ನು ನೀಡಿತ್ತು. ಆ ನಂತರ ಸಾಲು ಸಾಲು ಸಿನಿಮಾ ಮಾಡುತ್ತಾ ನಟ ಗಣೇಶ್ ಬೆಳೆದು ನಿಂತರು. ಮುಂಗಾರು ಮಳೆ ಸಿನಿಮಾ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ರಿಲೀಸ್ ಆಗಿ ಮಿಂಚು ಹರಿಸಿತ್ತು. ಅಲ್ಲದೆ ಈ ಸಿನಿಮಾ ಬರೋಬ್ಬರಿ 25 ವಾರಗಳ ಕಾಲ ಥಿಯೇಟರ್ ಸ್ಕ್ರೀನ್ ಮೇಲೆ ಮಿಂಚು ಹರಿಸಿತ್ತು.












Click it and Unblock the Notifications