ಅಂದು ಜೈಲು ಸೇರಿದ್ದ ಸೋನು ಗೌಡ ದಿಢೀರ್ ಖಡಕ್ ಪೊಲೀಸ್ ಆಗಿ ಪ್ರತ್ಯಕ್ಷ!
ಸೋಷಿಯಲ್ ಮೀಡಿಯಾದಲ್ಲಿ ಕಾಂಟ್ರವರ್ಸಿಗಳಿಂದಲೇ ಹೆಸರುವಾಸಿಯಾಗಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ದಿಢೀರ್ ಶಾಕ್ ಕೊಟ್ಟಿದ್ದಾರೆ. ಕನ್ನಡದ ರೀಲ್ಸ್ ಸ್ಟಾರ್ ಹಾಗೂ ಬಿಗ್‌ಬಾಸ್ ಕನ್ನಡದ ಸ್ಪರ್ಧಿಯಾಗಿದ್ದ ಸೋನು ಹಲವು ಕಾರಣಗಳಿಂದ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಜನ ಫಾಲೋವರ್ಸ್ ಇದ್ದು, ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಇಲ್ಲಿವರೆಗೆ ವಿವಾದಗಳಿಂದ ಗಮನ ಸೆಳೆಯುತ್ತಿದ್ದ ಸೋನು ದಿಢೀರ್ ಖಡಕ್ ಪೊಲೀಸ್ ಆಫೀಸರ್ ಆಗಿದ್ದಾರೆ.
ಸೋನು ಶ್ರೀನಿವಾಸ್ ಗೌಡ ರೀಲ್ಸ್ ಸ್ಟಾರ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ 1ರ ಸ್ಪರ್ಧಿಯಾಗಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು. ಅಲ್ಲದೆ ಸದಾ ತಮ್ಮ ರೀಲ್ಸ್ ವಿಡಿಯೋಗಳ ಮೂಲಕ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ. ಇದಲ್ಲದೆ ಕಾಂಟ್ರವರ್ಸಿ ಕ್ವೀನ್ ಎಂದೂ ಸೋನು ಕರೆಸಿಕೊಂಡಿದ್ದಾರೆ.

ಈ ಹಿಂದೆ ಅಕ್ರಮವಾಗಿ ಬಾಲಕಿಯನ್ನು ದತ್ತು ಪಡೆದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿದ್ದರು. ಬಳಿಕ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ 14 ದಿನಗಳ ನ್ಯಾಯಾಂಗ ಬಂಧನದ ಬಳಿಕ ಜೈಲಿನಿಂದ ರಿಲೀಸ್ ಆಗಿದ್ದರು. ಸೋನು ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಘಟಕ ನೀಡಿದ ದೂರಿನ ಹಿನ್ನೆಲೆಯಲ್ಲಿ, ಕೇಸ್ ದಾಖಲಾಗಿತ್ತು. ಅದಾದ ಬಳಿಕ ವಿಚಾರಣೆ ನಡೆಸಿ, ಸೋನು ಅವರನ್ನು ವಶಕ್ಕೆ ಪಡೆದು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ ಜಾಮೀನು ಪಡೆದು ರಿಲೀಸ್ ಆಗಿದ್ದರು.
ಇನ್ನು ಇತ್ತೀಚೆಗಷ್ಟೇ ಸೋನು ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂನಿಂದ ವಿಚಾರಣೆಗೆ ಒಳಗಾಗಿದ್ದರು. ಬಳಿಕ ಈ ಪ್ರಕರಣದ ಮೇಲೆ ಸೋನು ಕ್ಷಮೆಯಾಚಿಸಿದ್ದರು. ಈಗ ಇದೆಲ್ಲವನ್ನೂ ಬಿಟ್ಟು ದಿಢೀರನೆ ಪೊಲೀಸ್ ಆಗಿ ಶಾಕ್ ಕೊಟ್ಟಿದ್ದಾರೆ. ಖಡಕ್ ಪೊಲೀಸ್ ಅವತಾರದಲ್ಲಿ ಸೋನು ಪ್ರತ್ಯಕ್ಷವಾಗಿದ್ದು, ತಮ್ಮ ಕನಸು ನನಸಾಗಿರುವ ಸಂತಸ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸೋನು ಪೊಲೀಸ್ ವಸ್ತ್ರ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ ನಾನು ಮೊದಲ ಬಾರಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ ಚಿತ್ರ ಡಿಟೆಕ್ಟಿವ್ ಸೋಮಶೇಖರ್ ಜಿಆರ್. ಇದೀಗ ಅದು ಯುಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗಿದೆ. ಈಗಲೇ ಕೊಟ್ಟಿರುವ ಲಿಂಕ್ ಅಥವಾ ಯೂಟ್ಯೂಬ್‌ನಲ್ಲಿ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಹಾಗೆ ಶೇರ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸೋನು ಖಡಕ್ ಪೊಲೀಸ್ ಅಧಿಕಾರಿ ಫೋಟೋ ನೋಡಿ ಎಲ್ಲರೂ ನಿಜವಾಗಿ ಪೊಲೀಸ್ ಆದ್ರಾ ಅಂತ ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ.












Click it and Unblock the Notifications