ನಟ ಶಾರೂಖ್ ಖಾನ್ & ದೀಪಿಕಾ ಪಡುಕೋಣೆ ಸೇರಿ 6 ಜನರ ಮೇಲೆ ಎಫ್‌ಐಆರ್!
ಬಾಲಿವುಡ್ ಸ್ಟಾರ್‌ಗಳು ಆಗ್ಗಾಗ್ಗೆ ಒಂದಿಲ್ಲೊಂದು ಸಂಕಷ್ಟದಲ್ಲಿ ಸಿಲುಕಿಕೊಳ್ಳುವುದು ಹೊಸದೇನು ಅಲ್ಲ. ಇದೀಗ ನಟ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ಇತ್ತೀಚೆಗಷ್ಟೇ ನಟ ಶಾರೂಖ್ ಖಾನ್ ಅವರು ಕೈಗೆ ಗಾಯ ಮಾಡಿಕೊಂಡಿದ್ದರು. ಅಲ್ಲದೇ ದೀಪಿಕಾ ಅವರು ಸಹ ಸಿನಿಮಾದ ಸಂಭಾವನೆಯೊಂದಕ್ಕೆ ಸಂಬಂಧಿಸಿದಂತೆ ವಿವಾದದಲ್ಲಿ ಸಿಲುಕಿದ್ದರು. ಇದೀಗ ನಟ ಶಾರೂಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಏನಿದು ವಿವಾದ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ನಟ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನಾ ಸಮಸ್ಯೆ ಇರುವ ಹ್ಯುಂಡೈ ಕಾರು ಖರೀದಿಸಿದ್ದ ರಾಜಸ್ಥಾನದ ಭರತ್ ಪುರ್‌ನ ವ್ಯಕ್ತಿಯೊಬ್ಬರು ಆ ಕಾರಿನ ರಾಯಭಾರಿಗಳಾಗಿದ್ದ ಬಾಲಿವುಡ್ ಸ್ಟಾರ್ಸ್ಸ್ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಒಟ್ಟು 6 ಜನರ ಮೇಲೆ ವಂಚನೆ ಪ್ರಕರಣಕ್ಕೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ.

ಈ ಹಿಂದೆಯೂ ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ವಿವಿಧ ಪ್ರಮುಖ ಬ್ರ್ಯಾಂಡ್‌ಗಳ ರಾಯಭಾರಿ ಆಗಿರುವುದಕ್ಕೆ ನಟ - ನಟಿಯರು ಸಂಕಷ್ಟ ಅನುಭವಿಸಿರುವುದು ಇದೆ. ಇನ್ನು ಮುಖ್ಯವಾಗಿ ಈಚೆಗೆ ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿರುವ ಹಲವು ಸಿನಿಮಾ ರಂಗದ ನಟ - ನಟಿಯರು ಸಂಕಷ್ಟವನ್ನು ಅನುಭವಿಸಿದ್ದಾರೆ. ಅದೇ ರೀತಿ ಇದೀಗ ನಟ ಶಾರೂಖ್ ಖಾನ್ ಮತ್ತು ದೀಪಿಕಾ ಅವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಇನ್ನು ಕಾರು ಖರೀದಿ ಮಾಡಿದಾಗ ಲೋಪವಾಗಿದೆ. ಹೀಗಾಗಿ ಇದರ ರಾಯಭಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ರಾಜಸ್ಥಾನದ ಭರತ್ ಪುರ್ ನಿವಾಸಿ ಕೀರ್ತಿ ಸಿಂಗ್ ಎನ್ನುವ ವ್ಯಕ್ತಿಯಿಂದ ದೂರು ದಾಖಲಾಗಿದೆ. ಆ ವ್ಯಕ್ತಿಯು ಹ್ಯುಂಡೈ ಕಾರನ್ನು ಖರೀದಿ ಮಾಡಿದಾಗಿನಿಂದಲೂ ಆ ಕಾರಿನಲ್ಲಿ ಟೆಕ್ನಿಕಲ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲ್ಲೇ ಇವೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ ಕಾರು ಸಮಸ್ಯೆ ಆಗುತ್ತಿರುವ ಬಗ್ಗೆ ಕಾರು ಪಡೆದ ಕಂಪನಿಗೆ ಹಲವು ಬಾರಿ ದೂರು ನೀಡಿದ್ದರೂ, ಕಾರಿನ ಟೆಕ್ನಿಕಲ್ ಸಮಸ್ಯೆ ಪರಿಹಾರವಾಗಿಲ್ಲ. ಕಾರು ಕಂಪನಿಯು ನನ್ನ ಕಾರಿನ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ನೀಡಿಲ್ಲ ಎಂದು ದೂರುದಾರ ವ್ಯಕ್ತಿಯು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ದೀಪಿಕಾ - ಶಾರೂಖ್ ಖಾನ್ ಮೇಲೆ ದೂರು ದಾಖಲಿಸಿಕೊಳ್ಳಲು ಕಾರಣವೇನು ?
ಇನ್ನು ಇದೇ ಸಂದರ್ಭದಲ್ಲಿ ಕಾರಿನ ಟೆಕ್ನಿಕಲ್ ಸಮಸ್ಯೆಗೂ ದೀಪಿಕಾ - ಶಾರೂಖ್ ಖಾನ್ ಅವರ ಮೇಲೆ ಎಫ್‌ಐಆರ್ ದಾಖಲಾಗುವುದಕ್ಕೂ ಕಾರಣವಾಗಿರುವುದು ಕಾನೂನಿನ ಅಂಶ. ಹೌದು ಭಾರತೀಯ ಕಾನೂನಿನ ಪ್ರಕಾರ ಒಂದೊಮ್ಮೆ ತಾವು ಪ್ರಚಾರ ಮಾಡಿರುವ ಉತ್ಪನ್ನಗಳಲ್ಲಿ ದೋಷಪೂರಿತ ಅಥವಾ ದಾರಿ ತಪ್ಪಿಸುವ ಮಾದರಿಯಲ್ಲಿ ಇದ್ದರೆ ಆ ನಿರ್ದಿಷ್ಟ ಉತ್ಪನ್ನಗಳ ರಾಯಭಾರಿಗಳ (ಬ್ರ್ಯಾಂಡ್ ಅಂಬಾಸಿಡರ್) ವಿರುದ್ಧ ದೂರು ದಾಖಲಿಸಲಿಸಲು ಅವಕಾಶವಿದೆ. ಹೀಗಾಗಿ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications